ಕಟಕ ರಾಶಿಯವರೇ ನಿಮ್ಮ ಆರೋಗ್ಯ ಜೋಪಾನ : ಉಳಿದ ರಾಶಿ ಹೇಗಿದೆ..?

ಮೇಷ : ನೆನ್ನೆಯ ದಿನ ಸ್ಥಗಿತಗೊಂಡಿದ್ದ ಕಾರ್ಯಗಳಿಗೆ ಇಂದು ಚಾಲನೆ, ಗ್ರಹಣ ಬಾಧೆಯಿಂದ ಹೊರಬಂದಿದ್ದೀರಿ, ಸುಬ್ರಹ್ಮಣ್ಯನಿಗೆ ಹಾಲಿನ ಅಭಿಷೇಕ ಮಾಡಿಸಿ

ವೃಷಭ : ಹಿರಿಯರ ಆರೋಗ್ಯದಲ್ಲಿ ಏರುಪೇರು, ಅಂದುಕೊಂಡಂತೆ ಏನೂ ನಡೆಯುವುದಿಲ್ಲ, ಅಷ್ಟಮ ಶನಿ ಜೊತೆಗೆ ಬಾಧಾಧಿಪತಿಯೂ ಶನಿಯೇ ಆಗಿರುವುದರಿಂದ ಭಾಗ್ಯ ನಷ್ಟ, ಶನಿ ದೋಷನಿವಾರಣೆಗೆ ನವಗ್ರಹ ದರ್ಶನ ಮಾಡಿ

ಮಿಥುನ : ಕುಟುಂಬ ಸ್ಥಾನದಲ್ಲಿರುವ ರಾಹು-ಚಂದ್ರರ ಯುತಿ ಕೌಟುಂಬಿಕ ಕಲಹಕ್ಕೆ ಕಾರಣವಾಗಲಿದೆ, ಧನ ವ್ಯಯ, ವಿಷ್ಣು ಸಹಸ್ರನಾಮ ಪಠಣ ಮಾಡಿ

ಕಟಕ : ಮನೋ ಕ್ಷೋಭೆ, ಆರೋಗ್ಯದಲ್ಲಿ ವ್ಯತ್ಯಯ, ಧ್ಯಾನ-ಜಪಾದಿಗಳಿಂದ ಸಮಾಧಾನ

ಸಿಂಹ : ರಾಶ್ಯಾಧಿಪತಿ ಶತ್ರು ಸ್ಥಾನದಲ್ಲಿ ಕೂತಿರುವುದರಿಂದ ಶತ್ರ ಕಾಟ, ರೋಗ ಬಾಧೆ, ಪರಿಹಾರಕ್ಕಾಗಿ ಸುದರ್ಶನ ಹೋಮಾದಿಗಳನ್ನು ಮಾಡಿಸಿ

ಕನ್ಯಾ : ರಾಶ್ಯಾಧಿಪತಿಯು ಪಂಚಮ ಸ್ಥಾನದಲ್ಲಿ ಕೂತಿರುವುದರಿಂದ ಪ್ರತಿಭಾ ಪ್ರದರ್ಶನ, ಮಕ್ಕಳಿಂದ ಸಹಾಯ ಹಸ್ತ, ನರಸಿಂಹ ಸ್ಮರಣೆ ಮಾಡಿ

ತುಲಾ : ಸಮಾಧಾನದ ದಿನ, ಕಾರ್ಯದಲ್ಲಿ ಸಹೋದರರ ಸಹಕಾರ, ಗೋವಿಗೆ ಅಕ್ಕಿ - ಬೆಲ್ಲವನ್ನು ಸಮರ್ಪಿಸಿ

ವೃಶ್ಚಿಕ : ಯೋಗ ಪಟುಗಳಿಗೆ ಉತ್ತಮ ದಿನ, ಹವಳ ಬಣ್ಣದ ವಸ್ತ್ರ ದಾನ ಮಾಡಿದಲ್ಲಿ ಕಷ್ಟ ಪರಿಹಾರ

ಧನಸ್ಸು : ನಿಮ್ಮ ಕಾರ್ಯದಲ್ಲಿ ಯಶಸ್ಸು, ಬರಬೇಕಾದ ಹಣ ಮರಳಿ ಬರಲಿದೆ, ಸಾಧ್ಯವಾದರೆ ಭಗವದ್ಗೀತೆಯ ಪುಸ್ತಕವನ್ನು ಓದುವವರಿಗೆ ದಾನ ಮಾಡಿ

ಮಕರ : ರಾಶ್ಯಾಧಿಪತಿ ವ್ಯಯದಲ್ಲಿರುವುದಲ್ಲದೆ, ಕುಜ ದೃಷ್ಟಿಯಿಂದಲೂ ಬಾಧಿಸಲ್ಪಡುತ್ತೀರಿ, ಎಳ್ಳೆಣ್ಣೆ, ಅಥವಾ ಎಳ್ಳಿನ ದಾನ ಮಾಡಿ

ಕುಂಭ : ಮರಳು - ಕಬ್ಬಿಣ ವ್ಯಾಪಾರಿಗಳಿಗೆ ಉತ್ತಮ ಲಾಭ, ಮಿತ್ರರಿಂದ ಸಹಾಯ, ಬಂಧುಗಳ ಆಗಮನ, ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ

ಮೀನ : ಔದುಂಬರ ವೃಕ್ಷಕ್ಕೆ ಪ್ರತಿನಿತ್ಯ 21 ಪ್ರದಕ್ಷಿಣೆ ಮಾಡುವುದರಿಂದ ಕಾರ್ಯ ವಿಘ್ನಗಳು ದೂರಾಗಲಿವೆ.