ಮೇಷ ರಾಶಿಗೆ ಖುಷಿಗೆ ಕಾರಣವಾಗುವ ವಿಚಾರವಿದೆ..? ಉಳಿದ ರಾಶಿ ಹೇಗಿದೆ..?

Dina Bhavishya April
Highlights

ಮೇಷ ರಾಶಿಗೆ ಖುಷಿಗೆ ಕಾರಣವಾಗುವ ವಿಚಾರವಿದೆ..? ಉಳಿದ ರಾಶಿ ಹೇಗಿದೆ..?

ಮೇಷ ರಾಶಿಗೆ ಖುಷಿಗೆ ಕಾರಣವಾಗುವ ವಿಚಾರವಿದೆ..? ಉಳಿದ ರಾಶಿ ಹೇಗಿದೆ..?

 

ಮೇಷ

ತಂದೆ- ತಾಯಿಗಳಿಗೆ ಖುಷಿಯ ವಿಷಯ

ತಿಳಿಸಲಿದ್ದೀರಿ. ತೀರ್ಥಯಾತ್ರೆ ಕೈಗೊಂಡು

ದೂರ ಪ್ರಯಾಣಕ್ಕೆ ಯೋಜನೆ ಹಾಕಲಿದ್ದೀರಿ.

 

ವೃಷಭ

ಮಕ್ಕಳ ಜವಾಬ್ದಾರಿಯ ಹೊಣೆಯು ನಿಮ್ಮನ್ನು

ಬಾಧಿಸುತ್ತಿದೆ. ಅವರು ದಾರಿ ತಪ್ಪಿಲ್ಲ. ನಿಮಗೆ

ಹಾಗೆ ಅನ್ನಿಸುತ್ತಿದೆ. ಪರಿಶೀಲಿಸುವುದು ಸೂಕ್ತ.

 

ಮಿಥುನ

ಆರೋಗ್ಯದತ್ತ ಮುಖ ಮಾಡಲಿದ್ದೀರಿ. ಈ

ದಿನಗಳಲ್ಲಿ ಉತ್ತಮ ಸಂಬಂಧ ಕೂಡಿ ಬರುತ್ತೆ.

ಮನೆ ಕಟ್ಟಲು ಆರಂಭ. ಸಾಲಕ್ಕಾಗಿ ಓಡಾಟ.

 

ಕಟಕ

ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಾಗಲಿದೆ.

ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ.

ಒತ್ತಡವು ಅನಾರೋಗ್ಯಕ್ಕೆ ಕಾರಣವಾಗಲಿದೆ.

 

ಸಿಂಹ

ಮನೆಯ ಹಿರಿಯರ ಆರೋಗ್ಯದ ಕಡೆಗೆ

ಗಮನವಿರಲಿ. ನಿಮ್ಮ ಜವಾಬ್ದಾರಿಯನ್ನು

ಬೇರೊಬ್ಬರ ಮೇಲೆ ಹೇರದಂತೆ ವರ್ತಿಸಿ.

 

ಕನ್ಯಾ

ಮಕ್ಕಳು ಮಕ್ಕಳೇ! ಅವರಲ್ಲದೇ ರಂಪ-

ರಗಳೆಯನ್ನು ನೀವು ಮಾಡಲು ಸಾಧ್ಯವೇ?

ತಾಳ್ಮೆಯಿಂದ ಅವರ ಸಮಸ್ಯೆಬಗೆಹರಿಸಿರಿ.

 

ತುಲಾ

ವ್ಯವಹಾರದಲ್ಲಿ ಪ್ರಗತಿ. ಭಿನ್ನಾಭಿಪ್ರಾಯ

ಗಳಿಂದ ವೈಮನಸ್ಯಉಂಟಾಗಬಹುದು.

ಎಚ್ಚರಿಕೆಯಿಂದ ವ್ಯವಹರಿಸಿದರೆ ಒಳಿತು.

 

ವೃಶ್ಚಿಕ

ಲೇವಾದೇವಿ ವ್ಯವಹಾರದಲ್ಲಿ ಸಮಸ್ಯೆ

ಬರದಂತೆ ನಿಗಾವಹಿಸಿ. ವಿದ್ಯಾರ್ಥಿಗಳಿಗೆ

ಪ್ರಗತಿಯ ಕಾಲ. ಕನಸು ಸಾಕಾರವಾಗುತ್ತೆ.

 

ಧನುಸ್ಸು

ದೂರದ ನೆಂಟರು ಮನೆಗೆ ಬರಲಿದ್ದಾರೆ.

ಹಳೆಯ ನೆಂಟಸ್ತಿಕೆಯು ಮತ್ತೆ ಚಿಗುರಲಿದೆ.

ಮಗಳಿಗೆ ಸಂಬಂಧವೂ ಕೂಡಿ ಬರಲಿದೆ.

 

ಮಕರ

ಲೆಕ್ಕಪತ್ರ ವ್ಯವಹಾರದ ನಿಮ್ಮ ಬುದ್ಧಿಮತ್ತೆಯು

ಈ ಸಮಯದಲ್ಲಿ ಉಪಯೋಗಕ್ಕೆ ಬರಲಿದೆ.

ಹಳೆಯ ಕಡತಗಳ ವಿಲೇವಾರಿಯಾಗಲಿದೆ.

 

ಕುಂಭ

ಹೊಸ ಥರದ ಆಲೋಚನೆಗಳು ನಿಮ್ಮನ್ನು

ಹುರಿದುಂಬಿಸಲಿವೆ. ಹಾಗಾಗಿ ಮಾನಸಿಕ

ನೆಮ್ಮದಿಯನ್ನು ಹೊಂದುವ ದಿನ.

 

ಮೀನ

ಪ್ರಯಾಣದ ಆಲಸ್ಯವು ಇಂದೂ ಇರಲಿದೆ.

ಕಷ್ಟದಲ್ಲಿರುವವರಿಗೆ ನಿಮ್ಮದೇ ಮಿತಿಯಲ್ಲಿ

ಸಹಾಯ ಮಾಡಲು ಮುಂದಾಗುತ್ತೀರಿ.

loader