ಮೇಷ ರಾಶಿಯವರೇ ಹಳೇ ಆಸ್ತಿ ನಿಮ್ಮ ಕೈಸೇರಲಿದೆ : ಉಳಿದ ರಾಶಿ ಹೇಗಿದೆ..?

First Published 7, Mar 2018, 7:00 AM IST
Dina Bhavishya  07 March 2018
Highlights

ಮೇಷ ರಾಶಿಯವರೇ ಹಳೇ ಆಸ್ತಿ ನಿಮ್ಮ ಕೈಸೇರಲಿದೆ : ಉಳಿದ ರಾಶಿ ಹೇಗಿದೆ..?

ಮೇಷ

ಹಳೆಯ ಆಸ್ತಿಗಳು ನಿಮ್ಮದಾಗುವ ಕಾಲವಿದು.

ಆದರೆ ಮಧ್ಯಸ್ಥಿಕೆಯವರ ಕೈವಾಡದಿಂದ ಸ್ವಲ್ಪ

ತಡವಾಗಲೂಬಹುದು. ಕಾಯಬೇಕಷ್ಟೆ.

 

ವೃಷಭ

ಬಂಧು ಬಳಗದವರಲ್ಲಿ ಪ್ರೀತಿ ಹೆಚ್ಚುತ್ತದೆ.

ಮನೆಯಲ್ಲಿ ಮಂಗಳ ಕಾರ್ಯ ನಡೆಯುವ

ಸಾಧ್ಯತೆಯಿದ್ದು ಸ್ನೇಹಿತರೂ ಬರಲಿದ್ದಾರೆ.

 

ಮಿಥುನ

ಎಲ್ಲರೊಂದಿಗೂ ಬೆರೆಯಿರಿ, ಧನಾತ್ಮಕವಾದ

ಆಲೋಚನೆಗಳಿಂದ ನಿಮ್ಮ ಕೆಲಸಗಳಲ್ಲಿ ಈಗ

ಯಶಸ್ಸು ದೊರೆಯಲಿದೆ. ನೆಮ್ಮದಿಯಿಂದಿರಿ.

 

ಕಟಕ

ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ. ಆದಕಾರಣ

ಮನಃಶಾಂತಿಗೆ ಕೊಂಚ ಭಂಗ ಬರಲಿದೆ.

ಒತ್ತಡಕ್ಕೆ ಒಳಗಾಗಿ ಆರೋಗ್ಯ ಕೆಡಿಸಿಕೊಳ್ಳದಿರಿ.

 

ಸಿಂಹ

ಲಕ್ಷ್ಮಿಯು ನಿಮಗೆ ಒಲಿದಿದ್ದಾಳೆ. ಅಲಕ್ಷ್ಯ

ಮಾಡದೇ ಆದರಿಸಿ. ಸ್ವಂತಕ್ಕಷ್ಟೇ ಅಲ್ಲದೇ

ಪರರಿಗೂ ಉಪಕಾರ ಮಾಡಲು ಪ್ರಯತ್ನಿಸಿ.

 

ಕನ್ಯಾ

 

ಸಂಸ್ಥೆಯ ಆರ್ಥಿಕ ಆದಾಯ ಹೆಚ್ಚಿಸಲು

ಅವಿತವಾಗಿ ಶ್ರಮಿಸುವಿರಿ. ಸಮಸ್ಯೆಗಳಿಗೆ

ಪರಿಹಾರವು ಸಿಗಲಿದೆ. ಹೆಚ್ಚಿಗೆ ಚಿಂತಿಸದಿರಿ.

 

ತುಲಾ

ಈಗ ನಿಮ್ಮ ಫಲಾಫಲಗಳು ಉತ್ತಮವಾಗಿದೆ.

ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ

ದೊರೆಯಲಿದೆ. ಹೊಸ ಸ್ನೇಹಿತರ ಪರಿಚಯ.

 

ವೃಶ್ಚಿಕ

ಹೊಸ ಥರದ ಆಲೋಚನೆಗಳು ನಿಮ್ಮನ್ನು

ಹುರಿದುಂಬಿಸಲಿವೆ. ಹಾಗಾಗಿ ಮಾನಸಿಕ

ನೆಮ್ಮದಿಯನ್ನು ಹೊಂದುವ ದಿನವಿದು.

 

ಧನಸ್ಸು

ಬಹು ದಿನಗಳ ಕಾರ್ಯವು ಸಿದ್ಧಿಸಲಿದೆ.

ಆರ್ಥಿಕವಾಗಿ ಒಳ್ಳೆಯ ದಿನಗಳ ಆರಂಭ.

ಹೊಸ ಉದ್ಯಮ ಸ್ಥಾಪಿಸುವವರಿಗೆ ಸಕಾಲ.

 

ಮಕರ

ಹಿಡಿದ ಕೆಲಸ ಸಮರ್ಥವಾಗಿ ನಿಭಾಯಿಸು

ವಿರಿ. ಅದರಿಂದ ತೃಪ್ತಿಕರ ಭಾವ ಮೂಡಲಿದೆ.

ಬಂಧು-ಮಿತ್ರರ ಬಳಗದಲ್ಲಿ ಮಿಂಚಲಿದ್ದೀರಿ.

 

ಕುಂಭ

ಓದಿನಲ್ಲಿ ಆಸಕ್ತಿ ಮೂಡಲಿದೆ. ನಿಮ್ಮ ಕಾರ್ಯ

ದಿಂದ ಬಂಧುಗಳಿಗೆ ಸಂತಸ. ಸಾಧಕರನ್ನು

ಭೇಟಿಯಾಗುವ ಸದಾವಕಾಶ ನಿಮ್ಮದಾಗಲಿದೆ.

 

ಮೀನ

ಹಳೆಯ ಸ್ನೇಹಿತರ ಭೇಟಿಯಾಗಲಿದ್ದೀರಿ.

ನೆನಪುಗಳು ಕಾಡಲಿವೆ. ಮಗಳ ಮದುವೆಯ

ಮೀನ ತಯಾರಿಗೆ ಹೆಚ್ಚೆಚ್ಚು ಶ್ರಮ ವಹಿಸಲಿದ್ದೀರಿ

loader