Asianet Suvarna News Asianet Suvarna News

Human Interest story : ಅಡ್ಡಿಯಾಗದ ಅಂಗವೈಕಲ್ಯ, ಗಾಲಿ ಕುರ್ಚಿಯಲ್ಲಿದ್ದರೂ ಕೃಷಿ ಸಾಧಕ

* ಕೃಷಿ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ
* ಸಾಂಪ್ರದಾಯಿಕ ತರಕಾರಿ ಬೀಜ ರಕ್ಷಕ
* ತಮಿಳುನಾಡಿನ ಆನಂದನ್  ಜೀವನ

Despite A Spinal-Cord Injury, Nature Lover Continueo Preserve Lost Plant Seeds mah
Author
Bengaluru, First Published Dec 19, 2021, 9:40 PM IST
  • Facebook
  • Twitter
  • Whatsapp

ಚೆನ್ನೈ(ಡಿ. 19)  ಅಂಗವೈಕಲ್ಯ ಸಾಧನೆಗೆ ಅಡ್ಡಿಯಾಗೋದಿಲ್ಲ ಎನ್ನುವ ನೂರಾರು ನಿದರ್ಶನಗಳೂ ನಮ್ಮ ಮುಂದೆ ಇವೆ. ಅಂತದ್ದೇ ಒಂದು ನೈಜ ನಿದರ್ಶನವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ತಮಿಳುನಾಡಿನ(Tamilnadu) ಅಡೈಕ್ಕಲಂ ಆನಂದನ್ 16 ವರ್ಷದವರಿದ್ದಾಗ ದುರಂತವೊಂದಕ್ಕೆ ಸಿಲುಕಿಕೊಂಡರು. ಮರದಿಂದ ಕೆಳಕ್ಕೆ ಬಿದ್ದು ಬೆನ್ನು ಮೂಳೆ (Spinal-Cord) ಜರ್ಜರಿತವಾಯಿತು. ಪರಿಣಾಮ ಜೀವನದ ಉಳಿದ ಭಾಗವನ್ನು ವೀಲ್ ಚೇರ್ ನಲ್ಲಿ ಕಳಿಯಬೇಕಾದ ಸ್ಥಿತಿ ಒದಗಿ ಬಂತು.

ಆದರೆ ಆನಂದನ್ ಅವರ ಗುರಿಗೆ ಮಾತ್ರ ಯಾವ ಭಂಗ ಬರಲಿಲ್ಲ. ತಮ್ಮ 29 ನೇ ವಯಸ್ಸಿನಲ್ಲಿ, ಆನಂದನ್ ಸಾವಯವ ಕೃಷಿ  ಸಾಧಕ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ಪರಿಸರದ ಮೇಲಿನ ಅವರ ಪ್ರೀತಿಯನ್ನು ಅವಘಡಕ್ಕೆ ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಸಾವಯವ ಕೃಷಿಗೆ (Organic farming) ಯುವಕರನ್ನು ಸೆಳೆದಿದ್ದಾರೆ.

ಅಳಿವಿನ ಅಂಚಿನಲ್ಲಿರುವ ತರಕಾರಿಗಳ ರಕ್ಷಣೆ ಮಾಡಿದ್ದಾರೆ.  ತಮಿಳುನಾಡು ಮೂಲದ ಮೂವತ್ತು ತರಕಾರಿಗಳ (vegetable Seeds) ಬೀಜಗಳ ಸಂಗ್ರಹ ಅವರ ಸಾಧನೆ. ಕೃಷಿಯಲ್ಲಿ ಆಸಕ್ತಿ ಇರುವವರನ್ನು ಗುರುತಿಸಿ ಉತ್ತೇಜಿಸುತ್ತಾರೆ. 

ಮೊದಲ ಪ್ರಯತ್ನದಲ್ಲೇ 22 ವರ್ಷದ ಆದರ್ಶ್ UPSC ಟಾಪರ್, ಕೋಚಿಂಗ್ ಇಲ್ಲದೆಯೇ ಸಾಧನೆ!

"ನಾನು ಅರುಪ್ಪುಕೊಟ್ಟೈನ ಪುಲಿಯೂರನ್ ಗ್ರಾಮದ ನಾಡಾರ್ ಮಿಡ್ಲ್ ಸ್ಕೂಲ್ ನಲ್ಲಿಯೂ ಕೃಷಿ ಮಾಡುತ್ತಿದ್ದೇನೆ ಎಂದು ಆನಂದನ್ ತಿಳಿಸುತ್ತಾರೆ.  ಪರಿಸರ ಹೋರಾಟಗಾರ ಜಿ ನಮ್ಮಾಳ್ವಾರ್ ಪುಸ್ತಕಗಳು ನನಗೆ ಪ್ರೇರಣೆ ಎನ್ನುತ್ತಾರೆ.

ಅಳಿವಿನಂಚಿನಲ್ಲಿರುವ ಆದರೆ ಬಹುಉಪಯೋಗ ನೀಡುವ ಬೀಜಗಳ ಸಂಗ್ರಹಣೆಯಲ್ಲಿ ತೊಡಗಿಕೊಂಡರು. ನಮ್ಮ ದೇಶದ ಸಸ್ಯ ಬೀಜಗಳನ್ನು ಸಂಗ್ರಹಿಸಲು ನಾನು ಬಯಸುತ್ತೇನೆ.  ಭತ್ತದ ಬೀಜಗಳು ಮತ್ತು ತರಕಾರಿ ಬೀಜಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಯಾವುದೇ ಸಮಯದಲ್ಲಿ, ನಾನು ಅಪರೂಪದ ಪ್ರಭೇದಗಳು ಮತ್ತು ಕಳೆದುಹೋದ ಪ್ರಭೇದಗಳನ್ನು ಸಂಗ್ರಹಿಸುತ್ತಾ ಸಾಗಿದೆ. ಇಂದು ಅವು ಒಂದು ಬ್ಯಾಂಕ್ ರೀತಿ ಆಗಿದೆ ಎಂದು ತಿಳಿಸುತ್ತಾರೆ. ಆನಂದನ್ ಬಳಿ ವಿಧದ ಟೊಮೆಟೊ ಮತ್ತು ಬದನೆ ಬೀಜಗಳು ಇವೆ.

ವಾಣಿಜ್ಯ ಉದ್ದೇಶದ ಬೀಜಗಳಿಗೆ ಹೋಲಿಕೆ ಮಾಡಿದರೆ ಸ್ಥಳೀಯ ಸಾಂಪ್ರದಾಯಿಕ ಬೆಳೆಗಳ ಶಕ್ತಿ ಹೆಚ್ಚು. ನಾಲ್ಕು ತಿಂಗಳು ಇದನ್ನು ಕಾಪಾಡಬಹುದು ಎಂದು ತಿಳಿಸುತ್ತಾರೆ.  ಮುಂದಿನ ಪಿಲೀಗೆಗೆ ನಮ್ಮ ದೇಶಿಯ ಬೆಳೆಗಳನ್ನು, ತರಕಾರಿಗಳನ್ನು ಕಾಪಾಡಿ  ನೀಡಬೇಕಿದೆ ಎಂಬ ಆಶಯ ಆನಂದನ್ ಅವರದ್ದು. 

ಚಿತ್ರದುರ್ಗದ ಸ್ಪೂರ್ತಿ: ಅಂಗವೈಕಲ್ಯ ಮೆಟ್ಟಿ ನಿಂತ ಮತ್ತೊಂದು ಕತೆ ಇದು.  ಎಲ್ಲವೂ ಮನಸಿನ ಛಲದ ಮೇಲೆಯೇ ಅವಲಂಬಿಸಿದೆ ಎಂಬುದನ್ನು ತೋರಿಸಿಕೊಟ್ಟವರು ಚಿತ್ರದುರ್ಗದ(Chitradurga) ಬೋರಯ್ಯ.

ಬೋರಯ್ಯ ಯಾರಿಗೂ ಹೊರೆಯಾಗದೆ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಜಮೀನಿನ ತುಂಬಾ ಬಹಳಷ್ಟು ಬಗೆಯ ಕೃಷಿ(Agriculture) ಮಾಡಿದ್ದಾರೆ. ಹಚ್ಚ ಹಸಿರು ಹೊಲವನ್ನು ನೋಡಿಕೊಂಡು ಪ್ರೀತಿಯ ಕುದುರೆಯನ್ನು ಸಾಕುತ್ತಾ ಮೇಕೆಗಳನ್ನು ಸಾಕುತ್ತಾರೆ. ಮೆಕ್ಕೆ ಜೋಳ ಪ್ರಮುಖ ಬೆಳೆ, ಅಷ್ಟೇ ಅಲ್ಲ ಹುರುಳಿ, ಈರುಳ್ಳಿ ಸೇರಿ ಹಲವಾರು ಬಗೆಯ ತರಕಾರಿ ಧಾನ್ಯಗಳನ್ನು ಬೆಳೆದು ಜೀವನ ಸಾಗಿಸುತ್ತ ಬಂದಿದ್ದಾರೆ.

ಇಂಜಿನಿಯರ್ ಸಾಧನೆ:  ರಾಸಾಯನಿಕ ಗೊಬ್ಬರಕ್ಕೆ (Fertiliser) ಪರ್ಯಾಯವಾಗಿ ಸೆಗಣಿಯ ಹುಡಿ (Cow Dung) ಬಳಸಿ ಉತ್ತಮ ಇಳುವರಿ ಪಡೆಯುವ ಮೂಲಕ ಪುತ್ತೂರು (Puttur) ತಾಲೂಕಿನ ಎಂಜಿನಿಯರ್‌ ಪದವೀಧರ (Engineering Graduate) ಯುವ ಕೃಷಿಕರೊಬ್ಬರು ಪ್ರಯೋಗ ನಡೆಸಿದ್ದು, ಇದರಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಚಿಂತನೆ ಮತ್ತು ಪರಿಶ್ರಮದ ಮೂಲಕ ಸಂಪೂರ್ಣ ಸಾವಯವ ಕೃಷಿ (Organic farming) ಪದ್ಧತಿಯನ್ನು ಬಯಸುವವರಿಗೆ ಈ ಯುವಕ ಮಾದರಿಯಾಗಿದ್ದಾರೆ.

ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಹಿಂದಾರ್‌ ಎಂಬಲ್ಲಿನ ನಿವಾಸಿ ಜಯಗುರು ಆಚಾರ್‌ (Jayaguru Achar) ಸೆಗಣಿ ಗೊಬ್ಬರ ತಯಾರಿಕೆಯ ಹೊಸ ಆವಿಷ್ಕಾರದ ಜನಕ. ಎಂಜಿನಿಯರ್‌ ಪದವೀಧರರಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ (Private compeny ಉದ್ಯೋಗದಲ್ಲಿದ್ದರು. ಕೃಷಿ ಮನೆಯಲ್ಲಿ 130ಕ್ಕೂ ಅಧಿಕ ದನಗಳನ್ನು ಸಾಕುತ್ತಿದ್ದಾರೆ. ದಿನಕ್ಕೆ 750 ಲೀಟರ್‌ ಹಾಲು (Milk) ಡೈರಿಗೆ ಮಾರಾಟ ಮಾಡುತ್ತಿದ್ದಾರೆ.

Follow Us:
Download App:
  • android
  • ios