ಗಾಜಿಯಾಬಾದ್​ನಲ್ಲಿ ಹೋಳಿಯಾಡಿದ ನಂತರ ಸ್ನಾನಕ್ಕೆಂದು ಹೋದ ದಂಪತಿ ಗ್ಯಾಸ್​ ಗೀಸರ್​ ಸೋರಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗಿದ್ರೆ ಗೀಜರ್‌ನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಇಲ್ಲಿದೆ ಕೆಲವೊಂದು ಟಿಪ್ಸ್‌.

ಮುಂಬೈ: ಚಳಿಗಾಲದಲ್ಲಿ ಎಲ್ಲರೂ ಬಿಸಿ ಬಿಸಿಯಾದ ನೀರಿನಿಂದ ಸ್ನಾನ ಮಾಡೋಕೆ ಇಷ್ಟ ಪಡ್ತಾರೆ. ಆದರೆ ಈ ಗೀಸರ್‌ಗಳು ಕೆಲವೊಮ್ಮೆ ಜೀವಕ್ಕೇ ಮಾರಕವಾಗುತ್ತವೆ. ಗೀಸರ್ ಬ್ಲಾಸ್ಟ್ ಆಗುವುದು, ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗುವ ಬಗ್ಗೆ ನಾವು ಈ ಹಿಂದೆಯೇ ಕೇಳಿದ್ದೇವೆ. ಹಾಗೆಯೇ ಸದ್ಯ, ಗೀಸರ್ ಗ್ಯಾಸ್ ಸೋರಿಕೆಯಿಂದ ನವವಿವಾಹಿತರು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಬಾತ್‌ರೂಮ್‌ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ನವ ವಿವಾಹಿತರ ಶವ ಪತ್ತೆಯಾಗಿದೆ. ಹೋಳಿ ಹಬ್ಬದ ಬಳಿಕ ಸ್ನಾನಕ್ಕೆಂದು ತೆರಳಿದ ಇಬ್ಬರು ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಮುಂಬೈನ ಘಾಟ್‌ಕೋಪರ್‌ನ ದೀಪಕ್ ಷಾ ಮತ್ತು ಟೀನಾ ಶಾ ಕುಕ್ರೇಜಾ ಟವರ್‌ನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಹೋಳಿ ಹಬ್ಬದ (Holi festival) ಬಳಿಕ ಸ್ನಾನಕ್ಕೆಂದು ಗೀಸರ್ ಆನ್ ಮಾಡಿದ್ದರು. ಮನೆಯ ಬಾತ್ ರೂಮ್ ನಲ್ಲಿದ್ದ ಗೀಸರ್ ನಿಂದ ಗ್ಯಾಸ್ ಸೋರಿಕೆಯಾಗಿ (Gas ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆಕಸ್ಮಿಕ ಸಾವು (Death) ದಾಖಲಿಸಿಕೊಂಡಿದ್ದಾರೆ. ಈ ಎರಡೂ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರಾಜವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.

ಗ್ಯಾಸ್ ಗೀಸರ್‌ ಬಳಸೋ ಮುನ್ನ ಎಚ್ಚರ, ಮಾರಣಾಂತಿಕ ಕಾಯಿಲೆನೂ ಬರುತ್ತೆ !

ಪೊಲೀಸರ ಪ್ರಕಾರ, ಶಾ ಅವರ ಮನೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ (Woman)ಯೊಬ್ಬರು ಕಾಲಿಂಗ್‌ಬೆಲ್‌ ಬಾರಿಸಿದರೂ ಯಾರೂ ಬಾಗಿಲು ತೆರೆಯಲಿಲ್ಲ. ನಂತರ ಈ ಮಾಹಿತಿಯನ್ನು ಪೊಲೀಸರಿಗೆ ನೀಡಲಾಯಿತು. ಪೊಲೀಸರು ಡುಪ್ಲಿಕೇಟ್ ಕೀಲಿಯಿಂದ ಬಾಗಿಲು ತೆರೆದಾಗ ಬಾತ್ ರೂಮ್‌ನಲ್ಲಿ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಗೀಸರ್ ಗ್ಯಾಸ್ ಏಕೆ ಸೋರಿಕೆಯಾಗುತ್ತದೆ?
ಬಹುತೇಕರು ಚಳಿಗಾಲದಲ್ಲಿ ಗೀಸರ್ ಬಳಸುತ್ತಾರೆ. ಕಳೆದ ಕೆಲ ದಿನಗಳಿಂದ ಗೀಸರ್ ನಿಂದ ಗ್ಯಾಸ್ ಸೋರಿಕೆಯಾಗಿ ಹಲವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಸಣ್ಣ ತಪ್ಪು ಕೂಡ ಪ್ರಾಣಾಪಾಯಕ್ಕೆ ಕಾರಣವಾಗುವ ಅನೇಕ ನಿದರ್ಶನಗಳಿವೆ. ಬಾತ್‌ರೂಮ್‌ನಲ್ಲಿ ಗಾಳಿ ಇಲ್ಲದಿದ್ದರೆ, ನೀವು ಬಕೆಟ್‌ಗ ಬಿಸಿನೀರನ್ನು ತುಂಬಿಸುವಾಗ ಬಾತ್‌ರೂಮ್‌ ಬಾಗಿಲು ತೆರೆಯಿರಿ. ಗೀಸರ್‌ಗಳು ಎರಡು ವಿಧಗಳಿವೆ. ಒಂದು ಅನಿಲ ಚಾಲಿತ ಮತ್ತು ಇನ್ನೊಂದು ವಿದ್ಯುತ್ ಚಾಲಿತ. ನೀವು ಮನೆಯಲ್ಲಿ ಯಾವುದೇ ಗೀಸರ್ ಬಳಸುತ್ತಿದ್ದರೂ ಆ ಬಗ್ಗೆ ಎಚ್ಚರಿಕೆಯಿಂದ ಇರೋದು ಒಳ್ಳೇದು. 

ಈ ವಿಷಯಗಳನ್ನು ನೆನಪಿಡಿ
ಗ್ಯಾಸ್ ಸಿಲಿಂಡರ್ ಚಾಲಿತ ಗೀಸರ್ ಅನಿಲ ಸೋರಿಕೆಯಾದಾಗ ಸ್ಫೋಟಗೊಳ್ಳುತ್ತದೆ, ಆದರೆ ಎಲೆಕ್ಟ್ರಿಕ್ ಗೀಸರ್ ಹೆಚ್ಚು ಸಮಯ ಚಾಲನೆಯಲ್ಲಿದ್ದರೆ ಬಾಯ್ಲರ್ ಸ್ಫೋಟಕ್ಕೆ ಗುರಿಯಾಗುತ್ತದೆ. ಗ್ಯಾಸ್ ಗೀಸರ್ ಕಾರ್ಬನ್ ಮಾನಾಕ್ಸೈಡ್‌ನಿಂದ ಮಾಡಲ್ಪಟ್ಟಿದೆ. ಇದು ಸ್ನಾನಗೃಹದಲ್ಲಿ ಸಾಕಷ್ಟು ಗಾಳಿ ಇಲ್ಲದಿದ್ದರೆ ವ್ಯಕ್ತಿಗೆ ಉಸಿರುಗಟ್ಟಲು ಕಾರಣವಾಗಬಹುದು. ಎಲೆಕ್ಟ್ರಿಕ್ ಗೀಸರ್ ದೀರ್ಘಕಾಲದವರೆಗೆ ಮುಂದುವರಿದರೆ, ಹೆಚ್ಚಿನ ಶಾಖದಿಂದ ಸೋರಿಕೆಯಾಗುವ ಸಾಧ್ಯತೆಯಿದೆ. ಗೀಸರ್ ಹಳೆಯದಾಗಿದ್ದರೆ ಆಗಾಗ ಚೆಕ್ ಮಾಡಿಸುತ್ತಿರಬೇಕು.

ತವರಿಗೆ ಬಂದವಳನ್ನು ಸ್ನಾನದ ಮನೆಯಲ್ಲಿ ಪ್ರಾಣವನ್ನೇ ತೆಗೆದ ಗೀಸರ್‌

ಗ್ಯಾಸ್ ಗೀಸರ್ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ?
ಗ್ಯಾಸ್​​ ಗೀಸರ್​​ನಲ್ಲಿ ಯಾವುದೇ ಲೀಕ್​ ಕಂಡು ಬಂದರೆ ಕೂಡಲೇ ಸ್ವಿಚ್​ ಆಫ್ ಮಾಡಬೇಕು. ಕಾಲಕಾಲಕ್ಕೆ ಗ್ಯಾಸ್​ ಗೀಸರ್​ ಪರಿಶೀಲನೆ ಮಾಡುತ್ತಿರಬೇಕು. ಸ್ನಾನದ ಕೋಣೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಅಳವಡಿಸಲೇಬೇಕು. ಗೀಸರ್ ಬಳಸುವಾಗ, ಗೀಸರ್ ಆನ್​ ಇರುವ ಸಂದರ್ಭದಲ್ಲಿ ಎಕ್ಸಾಸ್ಟ್​ ಫ್ಯಾನ್ ಆನ್​ ಮಾಡಿಕೊಳ್ಳಬೇಕು. ಗೀಸರ್​ನಲ್ಲಿ ಯಾವುದೇ ಸೋರಿಕೆ (Leakage) ಕಂಡು ಬಂದರೂ ಅದನ್ನು ಬಳಸದೆ ತಕ್ಷಣ ಸರಿಪಡಿಸಬೇಕು. ಸ್ನಾನದ ರೂಮ್​​ನಲ್ಲಿ ಕನಿಷ್ಠ ಒಂದು ಕಿಟಕಿಯಾದರೂ ಇರುವಂತೆ ನೋಡಿಕೊಳ್ಳಬೇಕು. ಸ್ನಾನ ಮಾಡುವಾಗ ಕಿಟಕಿ ತೆರೆದಿಟ್ಟುಕೊಳ್ಳಬೇಕು. ಸ್ನಾನ ರೂಮ್​​ನಲ್ಲಿ ಇರುವಾಗ ಉಸಿರಾಟದ ಸಮಸ್ಯೆ, ಕೆಮ್ಮು ಕಂಡು ಬಂದರೆ ಕೂಡಲೇ ಹೊರ ಬಂದು ತಾಜಾ ಗಾಳಿ ತೆಗೆದುಕೊಳ್ಳಬೇಕು.