ಪ್ರೀತಿ, ಪ್ರೇಮ ಯುವಕ ಯುವತಿಯರಿಗೆ ಸಾಮಾನ್ಯವಾದ ವಿಷಯ. ಇಬ್ಬರು ಸ್ನೇಹಿತರಾದರೆ ಡೇಟಿಂಗ್ ಹೋಗುವುದು ಸಾಮಾನ್ಯ. ಡೇಟಿಂಗ್ ವೇಳೆಯಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಹುಡುಗಿ ಕೈಕೊಡುವುದು ಇನ್ನು ಸಲೀಸು. ಈ ಸಂದರ್ಭದಲ್ಲಿ ಕೆಲ ಟಿಪ್ಸ್'ಗಳನ್ನು ಅನುಸರಿಸಿ   

1) ಡ್ರೆಸ್ ಸೆನ್ಸ್ ಇರಲಿ: ಹುಡುಗಿಯೊಂದಿಗೆ ಡೇಟಿಂಗ್'ಗೆ ಹೋಗುವಾಗ ಶುಚಿತ್ವಕ್ಕೆ ಗಮನ ಕೊಡಿ. ನೀಟಾಗಿ ಡ್ರೆಸ್ ಮಾಡಿಕೊಂಡು ಹೋಗಿ. ಬರಿ ದೈಹಿಕ ಆಕರ್ಷಣೆ ಉಪಯೋಗವಾಗುವುದಿಲ್ಲ.

2) ಸುಮ್ಮನೆ ಹೋಗಬೇಡಿ: ಹುಡುಗಿಯನ್ನ ಭೇಟಿ ಮಾಡುವಾಗ ಆಕೆಗೆ ಇಷ್ಟವಾಗುವ ಗಿಫ್ಟ್'ಅನ್ನು ತೆಗೆದುಕೊಂಡು ಹೋಗಿ. ಸುಮ್ಮನೆ ಹೋಗುವುದು ಹುಡುಗಿಯರಲ್ಲಿ ಬೇರೆ ಭಾವನೆ ಬೆಳೆಯುತ್ತದೆ.

3) ಬೇರೆ ವಿಷಯಕ್ಕೆ ಗಮನ ಕೊಡಬೇಡಿ: ಡೇಟಿಂಗ್'ನಲ್ಲಿರುವಾಗ ಹುಡುಗಿಯ ಬಗ್ಗೆ ಹೆಚ್ಚು ಗಮನ ನೀಡಿ ನಿಮ್ಮನ್ನು ನೀವು ಹೊಗಳುವುದಕ್ಕಿಂತ. ಆಕೆಯ ಇಷ್ಟದ ವಿಷಯಗಳ ಬಗ್ಗೆ ಮಾತನಾಡಿ.

4) ಮೈಮುಟ್ಟವುದು ಬೇಡ: ಹುಡುಗಿ ನಿಮ್ಮ ಜೊತೆ ಬೇರೆ ವಿಷಯಕ್ಕೆ ಬಂದಿರುವುದಿಲ್ಲ. ಆ ಕಾರಣದಿಂದ ಮೈಕೈ ಮುಟ್ಟುವುದು, ಬೇರೆ ವಿಷಯದಿಂದ ದೂರವಿರಿ. ಕಾಮದೃಷ್ಟಿ ಬೀರಬೇಡಿ

5) ಊಟ,ತಿಂಡಿ ಆಕೆಯೇ ಆಯ್ಕೆ ಮಾಡಲಿ: ಹೋಟೆಲ್'ನಲ್ಲಿ ಊಟಕ್ಕೆ ಹೋದಾಗ ಮೆನುವನ್ನು ಆಕೆಯ ಇಷ್ಟಕ್ಕೆ ನೀಡಿ. ನಿಮಗಿಷ್ಟ ಬಂದ ತಿಂಡಿಯನ್ನು ಆರ್ಡರ್ ಮಾಡಬೇಡಿ.

6) ಹೆಚ್ಚು ಜೋಕ್ ಮಾಡಿ: ಸಾಮಾನ್ಯವಾಗಿ ಹುಡುಗಿಗೆ ಹಾಸ್ಯ ವಿಷಯಗಳು ತುಂಬ ಇಷ್ಟ ಆಗಾಗ ಜೋಕ್'ಗಳನ್ನು ಮಾಡಿ ಆಕೆಯ ಮನಸ್ಸನ್ನು ಉಲ್ಲಾಸಗೊಳಿಸಿ.