ಡೈಸಿ ಶಾ ಫಿಟ್ನೆಸ್ ಸೀಕ್ರೆಟ್

Daisy shah fitness secret
Highlights

ಫಿಟ್ನೆಸ್ ಗೋಸ್ಕರ ಏನೇನೆಲ್ಲ ಮಾಡ್ತಾರೆ!
 

ಫಿಟ್ನೆಸ್ ಎಕ್ಸ್‌ಪರ್ಟ್ ಸಮೀರ್ ಪುರೋಹಿತ್ ಜೊತೆಗೆ ‘ಪಿಲಾಟೆಸ್ ಸ್ಟುಡಿಯೋ’ ಡೈಸಿ ಮಾಡೋ ಎಕ್ಸರ್‌ಸೈಸ್ ಗಳು ಮೈ ನವಿರೇಳಿಸುವಂಥವು. ಒಮ್ಮೆ ಮಾಡಿದ ಪಿಲಾಟೆಸ್ ಮತ್ತೆ ರಿಪೀಟ್ ಆಗೋ ಹಾಗಿಲ್ಲ. ಕ್ಲಾಸಿಗೆ ಬರೋ ತನಕ ಅವತ್ತಿನ ಎಕ್ಸರ್‌ಸೈಸ್‌ಗಳ್ಯಾವುದು ಅಂತ ಗೊತ್ತಿರಲ್ಲ. ಒಬ್ಲಿಕ್ಸ್ ವರ್ಕೌಟ್, ಕೋ೧೮೦, ಸ್ಕ್ವಾಟ್ ವರ್ಕೌಟ್ ಹೀಗೆ ಪಟ್ಟಿ ಬೆಳೆಯುತ್ತದೆ. ದಂಡ, ಚಕ್ರ, ತಿರುಗುವ ರೋಲ್‌ನಲ್ಲಿ ಅಭ್ಯಾಸ ಮಾಡುವ ಈ ವರ್ಕೌಟ್ಗಳು ದೇಹದ ಶೇಪ್‌ಗೆ ಬಹಳ ಉತ್ತಮ. ಈಕೆಗೆ ಇನ್ನೊಬ್ಬ ಗುರುವಿದ್ದಾರೆ. ಆತನ ಬಗ್ಗೆ ಈಕೆಗೆ ಅಭಿಮಾನ.

ಸಲ್ಮಾನ್ ಫಿಟ್ನೆಸ್ ಎಕ್ಸಪರ್ಟ್ ಈಕೆಗೂ ಟೀಚರ್: ‘ನಾನು ಈ ಮಟ್ಟಿನ ಫಿಟ್ನೆಸ್ ಮೈಂಟೇನ್ ಮಾಡಲು ಕಾರಣ ರಾಕೇಶ್ ಎಂಬ ಫಿಟ್ನೆಸ್ ಎಕ್ಸ್‌ಪರ್ಟ್’ ಅಂತಾರೆ ಡೈಸಿ. ಅಮೀರ್ ಖಾನ್, ಸಲ್ಮಾನ್ ಖಾನ್ರ ಫಿಟ್ನೆಸ್ ಗುರುವೂ ಈ ರಾಕೇಶ್. ವಾರ್ಮ್ ಅಪ್‌ಗೋಸ್ಕರ ಮೊಣಕಾಲನ್ನು ನೆಲಮಟ್ಟಕ್ಕೆ ಬಗ್ಗಿಸಿ ವಾಕಿಂಗ್ ಮಾಡುತ್ತಾರೆ. ಪ್ಲ್ಯಾಂಕ್, ಮೌಂಟೇನ್ ಕ್ಲೈಂಬರ್ ಮೊದಲಾದ ಎಕ್ಸರ್ ಸೈಸ್ಗಳನ್ನು ದಿನವೂ ಮಾಡ್ತಾರೆ. ಜುಹೂಬೀಜ್ನ ದಂಡೆಯಲ್ಲಿ ಬೆಳಗ್ಗೆ ಸಂಜೆ ಮಾಡುವ ಈ ಎಕ್ಸರ್ಸೈಸ್ಗಳು ಈಕೆಯ ಫಿಟ್ನೆಸ್ಗೆ ದೊಡ್ಡ ಕೊಡುಗೆಯನ್ನೇ ನೀಡಿವೆ.  

loader