ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ : ತಿಳಿಯಿರಿ ರಾಶಿ ಭವಿಷ್ಯದಲ್ಲಿ

Daily Horoscope May 11
Highlights

ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ : ತಿಳಿಯಿರಿ ರಾಶಿ ಭವಿಷ್ಯದಲ್ಲಿ

ಮೇಷ
ದೂರಾಲೋಚನೆಯಲ್ಲಿ ತೊಡಗಿರುವಿರಿ.
ಅದಕ್ಕೂ ಮುನ್ನ ವರ್ತಮಾನದ ಬಗ್ಗೆ ಕೂಡ
ಗಮನಕೊಡಿ. ಆಗ ಹೆಚ್ಚು ಖುಷಿ ಸಿಗುವುದು.

ವೃಷಭ
ನಿಮ್ಮದೇ ಜಗತ್ತು ಎನ್ನುವಷ್ಟು ಶುಭ ಸುದ್ದಿ
ಗಳನ್ನು ಇವತ್ತು ಕೇಳುವಿರಿ. ಹಲವರಿಗೆ ಸಾಲ
ಕೊಟ್ಟಿದ್ದ ಹಣವು ಇಂದು ವಾಪಸಾಗಲಿವೆ.

ಮಿಥುನ
ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣಗಳು
ಹೆಚ್ಚಿವೆ. ಹೊರಗಿನ ಆಹಾರವನ್ನು ತಿನ್ನದಿರಿ.
ಅಮ್ಮನ ಕೈರುಚಿಗಿಂತ ಮಿಗಿಲಾದ್ದು ಸಿಗುತ್ತಾ?

ಕಟಕ
ನಿಮ್ಮದಲ್ಲದ ತಪ್ಪಿಗೂ ನಿಮ್ಮನ್ನು ಟಾರ್ಗೆಟ್
ಮಾಡಲಿದ್ದಾರೆ. ಆದಷ್ಟು ನಿಗಾ ವಹಿಸಿ ಕೆಲಸ
ಗಳನ್ನು ಮಾಡುವುದು ಸೂಕ್ತ ಎನ್ನಬಹುದು.

ಸಿಂಹ
ನರ್ಸ್ ಹಾಗೂ ಡಾಕ್ಟರ್‌ಗಳಿಗೆ ಆಲಸ್ಯವು
ಹೆಚ್ಚು. ನಿಮ್ಮ ವೃತ್ತಿಯೇ ಹಾಗಿದೆ. ಅದಕ್ಕಾಗಿ
ಬೇಸರಿಸುವ ಅಗತ್ಯವಿಲ್ಲ. ಹುರುಪಿರಲಿ.

ಕನ್ಯಾ
ದರ್ಜಿಗಳಿಗೆ ಒತ್ತಡದ ಕೆಲಸ. ಮನೆಯಲ್ಲಿನ
ಸಮಸ್ಯೆಗಳಿಗೂ ಸ್ಪಂದಿಸದಂತಹ ಪರಿಸ್ಥಿತಿಗಳು
ಏರ್ಪಟ್ಟಿದೆ. ಆದರೆ ಹಣದ ಹರಿವು ಹೆಚ್ಚಲಿದೆ.

ತುಲಾ
ಹಿರಿಯರ ಆರೋಗ್ಯದಲ್ಲಿ ದಿಢೀರೆಂದು
ಬದಲಾವಣೆ ಆಗಲಿದೆ. ಗೊತ್ತಿದ್ದದ್ದೇ ಆದರೂ
ತುಲಾ ಇಂತಹದ್ದಕ್ಕೆಲ್ಲ ಮಾನಸಿಕ ಸಿದ್ಧತೆ ಅವಶ್ಯಕ.

ವೃಶ್ಚಿಕ 
ಬೇಸಿಗೆಯ ಕಾವು. ಆಗಾಗ ಮೋಡ ಮುಚ್ಚಿದ
ವಾತಾವರಣಗಳು ನಿಮ್ಮ ಮನಸ್ಸನ್ನು ಕದಡಿದೆ.
ಕೋಪತಾಪ-ಬೇಸರಗಳಿಂದ ಹೊರ ಬನ್ನಿ. ಧನುಸ್ಸು

ಧನಸ್ಸು
ನಿಮ್ಮ ಮಕ್ಕಳ ಫಲಿತಾಂಶವು ಸಂತೋಷವನ್ನು
ತಂದಿದೆ. ಹಣಕ್ಕಾಗಿ ಪರದಾಡುವ ಸ್ಥಿತಿಯೂ
ನಿರ್ಮಾಣವಾಗಿದೆ. ಸರಿದೂಗಿಸುವ ಶಕ್ತಿ ಇದೆ.

ಮಕರ
ಕಣ್ಣಿನ ಸಮಸ್ಯೆಯು ಇಂದೇನು ಹೊಸತಲ್ಲ.
ಅದಕ್ಕಾಗಿ ನೀವು ಹೆಚ್ಚಿನ ಗಮನ ಕೊಡದೇ
ಇದ್ದದ್ದೇ ನಿಮ್ಮ ಇಂದಿನ ಕಷ್ಟಗಳಿಗೆ ಮೂಲ.

ಕುಂಭ
ಯಾತ್ರೆಯ ಯೋಗವು ಕೂಡಿ ಬರಲಿದೆ.
ಅದಕ್ಕಾಗಿ ನೀವು ದಿಢೀರೆಂದು ತಯಾರಾಗಿ
ಹೆಚ್ಚು ಖುಷಿಯ ದಿನವನ್ನಾಗಿಸಿಕೊಳ್ಳುವಿರಿ.

ಮೀನ
ದೂರದ ಗೆಳೆಯನ ಭೇಟಿಯಿಂದ ನಿಮ್ಮ ಹೊಸ
ಸಮಸ್ಯೆಗೆ ಪರಿಹಾರ ಸಿಗಲಿದೆ. ಹಾಗಾಗಿ ನಿಮ್ಮ
ಮೀನ ಮೇಲಿನ ಗೌರವವೂ ಹೆಚ್ಚಾಗಲಿ

loader