ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚು ಮಾಡಿ ಹೆಚ್ಚು ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಕಾಮವನ್ನು ಉತ್ತೇಜಿಸಿ ತನ್ಮೂಲಕ ಲೈಂಗಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ, ಸೇಬು ಹಣ್ಣಿನಲ್ಲಿ..
ದಿನಕ್ಕೊಂದು ಸೇಬು (Apple) ತಿಂದರೆ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ ಎಂದು ನಾವು ಹೇಳುವುದನ್ನು ಕೇಳಿದ್ದೇವೆ. ಸೇಬು ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನಕ್ಕೊಂದು ಸೇಬು ತಿಂದರೆ ಹೇದಹ ಆರೋಗ್ಯದ ಜೊತೆಗೆ, ಪುರುಷರ ಲೈಂಗಿಕ ಸಾಮರ್ಥ್ಯ ಕೂಡ ಹೆಚ್ಚುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇದು ಕೇವಲ ಒಂದು ಹೇಳಿಕೆಯಲ್ಲ, ಬದಲಾಗಿ ಹಲವರು ಆಚರಿಸುತ್ತಿರುವ ಸತ್ಯ ಸಂಗತಿ ಕೂಡ ಹೌದು. ಏಕೆಂದರೆ, ಪ್ರಥಮ ರಾತ್ರಿ ಪತಿ ಸೇಬು ಹಣ್ಣು ತಿನ್ನುವುದನ್ನು ನಾವು ಸಿನಿಮಾಗಳಲ್ಲಿ ನೋಡುತ್ತೇವೆ.
ಅಧ್ಯಯನಗಳಲ್ಲಿ ಹೇಳಿರುವಂತೆ ಲೈಂಗಿಕ ಆರೋಗ್ಯದಲ್ಲಿ ಸೇಬು ಪಾತ್ರ ಹೀಗಿದೆ.. ಪ್ರತಿದಿನ ಸೇಬು ಹಣ್ಣು ತಿನ್ನುವುದರಿಂದ ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ. ಸೇಬಿನಲ್ಲಿರುವ ಪೋಷಕಾಂಶಗಳು ಹಾಗೂ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಕಾಮಶಕ್ತಿ ಉತ್ತೇಜಿಸುತ್ತದೆ. ಇದು ಸಂಪೂರ್ಣವಾಗಿ ಲೈಂಗಿಕ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಚಳಿ ಅಂತ ನೀರು ಕಡಿಮೆ ಕುಡಿದರೂ ಪದೇ ಪದೇ ಬಾತ್‌ರೂಮ್‌ಗೆ ಹೋಗ್ತೀರಾ? ಹಾಗಿದ್ರೆ ಇದನ್ನು ತಪ್ಪದೆ ಓದಿ
ಕ್ವೆರ್ಸೆಟಿನ್: ಕ್ವೆರ್ಸೆಟಿನ್‌ನೊಂದಿಗೆ ಸೇಬು ಹಣ್ಣುಗಳು ಪ್ಲೇವನೈಡ್ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಅವು ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚು ಮಾಡಿ ಹೆಚ್ಚು ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಕಾಮವನ್ನು ಉತ್ತೇಜಿಸಿ ತನ್ಮೂಲಕ ಲೈಂಗಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ, ಸೇಬು ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ಲೈಂಗಿಕ ಹಾರ್ಮೋನನ್ನು ಉತ್ತೇಜಿಸಿ ಆ ಮೂಲಕ ಟೆಸ್ಟಾಸ್ಟಿರೋನ್ ಹಾಗೂ ಈಸ್ಟ್ರೋಜನ್ ಹಾರ್ಮೋನುಗಳ ಹೆಚ್ಚಿನ ಸ್ರವಿಸುವಿಕೆಗೆ ನೆರವಾಗುತ್ತದೆ.
ಫೈಬರ್: ಸೇಬು ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ದೇಹದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಆರೋಗ್ಯಕರ ಕರುಳನ್ನು ಸಹ ಉತ್ತೀಜಿಸುತ್ತದೆ. ಈ ಎರಡೂ ಅಂಶಗಳು ದೇಹದಲ್ಲಿ ಕಾಮಾಸಕ್ತಿಯನ್ನು ಸುಧಾರಿಸಿ ಮನಸ್ಸು ಖುಷಿಯಾಗಿರಲು ಸಹಾಯ ಮಾಡುತ್ತದೆ. ಸೇಬಿನಲ್ಲಿ ಆಂಟಿಆಕ್ಸಿಡೆಂಟ್‌ಗಳು, ಪಾಲಿಫಿನಾಲ್ಗಳು, ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ. ಅವು ದೇಹದಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತವೆ. ಉರಿಯೂತವನ್ನು ತೆಗೆದುಹಾಕಿ ಆ ಮೂಲಕ ಆರೋಗ್ಯಕರ ದೇಹ ನಿರ್ಮಿಸಿ ಕಾಮಾಸಕ್ತಿಯನ್ನು ಹೆಚ್ಚಿಸುತ್ತವೆ.
ಎಷ್ಟೇ ವರ್ಷವಾದ್ರೂ ಗಂಗಾಜಲ ಹಾಳಾಗೋದಿಲ್ಲ ಏಕೆ?
ಈ ಎಲ್ಲ ಕಾರಣಗಳನ್ನು ನಮ್ಮ ಹಿರಿಯ ತಲೆಮಾರಿನವರು ತಿಳಿದಿದ್ದರು. ಹೀಗಾಗಿಯೇ ಮದುವೆಯಾದ ಹೊಸ ದಂಪತಿಗಳಿಗೆ ಮೊದಲ ರಾತ್ರಿಯಲ್ಲಿ ಸೇಬು ಹಣ್ಣನ್ನು ತಿನ್ನಲು ಕೊಡುತ್ತಿದ್ದರು. ಅದು ಹಲವು ಕಡೆಗಳಲ್ಲಿ ಈಗಲೂ ಬಳಕೆಯಲ್ಲಿದೆ. ಸೇಬು ಹಣ್ಣುಗಳನ್ನು ಎಲ್ಲರೂ ಸೇವಿಸಿ ಉತ್ತಮ ಆರೋಗ್ಯ ಪಡೆಯಬಹುದು. ಜೊತೆಗೆ, ನವದಂಪತಿಗಳು ದಿನಾಲೂ ಸೇಬು ಹಣ್ಣು ತಿನ್ನುವ ಮೂಲಕ ತಮ್ಮ ಲೈಂಗಿಕ ಜೀವನವನ್ನು ಚೆನ್ನಾಗಿ ಎಂಜಾಯ್ ಮಾಡಬಹುದು.
