ಕುರುಕು ಈರುಳ್ಳಿ ರೀಂಗ್ ರೆಸಿಪಿ ಇಲ್ಲಿದೆ...

Crispy Onion ring
Highlights

ಅರ್ಧ ಗಂಟೆಯಲ್ಲಿ ಮಕ್ಕಳಿಗೆ ಕುರುಕು ತಿಂಡಿ ಮಾಡಿ ಕೊಟ್ಟರೆ, ಅಮ್ಮಂದಿರಿಗೋ ಎಲ್ಲಿಲ್ಲದ ನೆಮ್ಮದಿ ಸಿಕ್ಕಿದಂತಾಗುತ್ತದೆ. ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳಿಂದಲೇ ರುಚಿ ರುಚಿಯಾಗಿ ತಿಂಡಿ ಮಾಡಿಕೊಡಬಹುದೆಂದರೆ ಅದಕ್ಕಿಂತ ಖುಷಿ ಇನ್ನೇನಿದೆ? ಇಂಥದ್ದೊಂದು ಈರುಳ್ಳಿ ರಿಂಗ್ ರೆಸಿಪಿ ಮಾಡೋ ವಿಧಾನ ಇಲ್ಲಿದೆ...

ಬೇಕಾಗುವ ಪದಾರ್ಥ:

  • 1 ಕಪ್ ಮೈದಾ
  • ಅರ್ಧ ಚಮಚ ಉಪ್ಪು 
  • ಅರ್ಧ ಚಮಚ ಬೇಕಿಂಗ್ ಸೋಡಾ
  • 1 ಚಮಚ ಬೆಳ್ಳಳ್ಳಿ
  • 1 ಚಮಚ ಮೆಣಸಿನ ಪುಡಿ
  • 1 ಚಮಚ ಆರೀಗ್ಯಾನೋ
  • 1 ಚಮಚ ಆಲಿವ್ ಎಣ್ಣೆ
  • 1 ಚಮಚ ಹಾಲು
  • ಅರ್ದ ಕಪ್ ನೀರು
  • ಬ್ರೇಡ್ ಪುಡಿ

ಮಾಡುವ ವಿಧಾನ:

ಮೈದಾ, ಉಪ್ಪು, ಬೇಕಿಂಗ್ ಸೋಡಾ, ಬೆಳ್ಳುಳ್ಳಿ, ಮೆಣಸಿನ ಪುಡಿ ಮತ್ತು ಆರೀಗ್ಯಾನೋ ಮಿಶ್ರಣ ಮಾಡಿ ನಂತರ ಸ್ವಲ್ಪ ಸಮಯದ ನಂತರ ಆಲಿವ್ ಎಣ್ಣೆ ಸೇರಿಸಿ, ಅರ್ಧ ಕಪ್ ನೀರು ಹಾಕಿ.

ಈರುಳ್ಳಿಯನ್ನು ರಿಂಗ್ ರೂಪದಲ್ಲಿ ಕತ್ತರಿಸಿ ನಂತರ ಮೈದಾ ಹಿಟ್ಟಿನಲ್ಲಿ ಅದ್ದಿ, ನಂತರ ಬ್ರೆಡ್‌ನಲ್ಲಿ ಉರುಳಿಸಿ. ಕಾಯಲು ಇಟ್ಟ ಎಣ್ಣೆ ಉರಿಯನ್ನು ಕಡಿಮೆ ಮಾಡಿಕೊಳ್ಳಿ. ನಿಧಾನವಾಗಿ ಬೇಯುವಂತೆ ಕರಿಯಬೇಕು.

loader