ಹಲವು ದಂಪತಿಗಳು ಅನ್ಯೋನತೆಯ ಕೊರತೆಯಿಂದ ತಮ್ಮ ಲೈಂಗಿಕ ಸುಖದ ಕೊರತೆಯನ್ನು ಅನುಭವಿಸುತ್ತಾರೆ.
ದಂಪತಿ ಅನ್ಯೋನ್ಯವಾಗಿದ್ದರೆ ಲೈಂಗಿಕ ಸುಖ ಸಹ ಚೆನ್ನಾಗಿರುತ್ತದೆ. ಸಂಗಾತಿಯನ್ನು ನಿಮ್ಮ ತೆಕ್ಕೆಯಲ್ಲಿಟ್ಟುಕೊಂಡರೆ ಅವರು ನಿಮ್ಮನ್ನು ಸ್ವರ್ಗ ಸುಖಕ್ಕೆ ಕೊಂಡೊಯ್ಯುತ್ತಾರೆ. ಹಲವು ದಂಪತಿ ಅನ್ಯೋನತೆಯ ಕೊರತೆಯಿಂದ ತಮ್ಮ ಲೈಂಗಿಕ ಸುಖದ ಕೊರತೆಯನ್ನು ಅನುಭವಿಸುತ್ತಾರೆ. ಸಂಗಾತಿಯ ಸುಂದರ ಸ್ವರ್ಗವನ್ನು ಅನುಭವಿಸಬೇಕಾದರೆ ಇಲ್ಲಿವೆ ಕೆಲ ಟಿಪ್ಸ್'ಗಳು.
1) ದಂಪತಿಗಳು ಮಂಚದ ಮೇಲಿದ್ದರೆ ಪತ್ನಿಗೆ ಲೈಂಗಿಕ ಸುಖದ ಆಸಕ್ತಿಯಿದ್ದರೆ ಮಾತ್ರ ಆಕೆಯೊಂದಿಗೆ ಸರಸವಾಡಿ.
2) ಪತ್ನಿಗೆ ದಣಿವುಂಟಾಗಿದ್ದರೆ ಆಕೆಯೊಂದಿಗೆ ಬಲವಂತದ ಸರಸ ಬೇಡ. ಇದು ವಿರಸಕ್ಕೆ ಕಾರಣವಾಗುತ್ತದೆ.
3) ಒಂದು ವೇಳೆ ನಿಮಗೆ ಆಸಕ್ತಿಯಿಲ್ಲದಿದ್ದರೂ ಪತ್ನಿಗೆ ಆಸಕ್ತಿಯಿದ್ದರೆ ಸಾಧ್ಯವಾದಷ್ಟು ಆಕೆಯೊಂದಿಗೆ ಕೂಡಿಕೊಳ್ಳಲು ಪ್ರಯತ್ನಿಸಿ. ನೀವು ದೂರ ಮಾಡಲು ಪ್ರಯತ್ನಿಸಿದರೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.
4) ಸಂಗಾತಿಗೆ ಇಷ್ಟವಿರುವ ಸ್ಥಳಗಳಿಗೆ ಕರೆದುಕೊಂಡು ಹೋಗಿ, ಹೆಚ್ಚಾಗಿ ಆಕೆಯ ಮನಸ್ಸಿನಲ್ಲಿರುವ ವಿಚಾರಗಳನ್ನು ತಿಳಿದುಕೊಂಡು ಸಂತೃಪ್ತಿಗೊಳಿಸಿ.
5) 30 ವರ್ಷದ ತನಕ ವಾರಕ್ಕೆ ಮೂರು ಬಾರಿ, 50 ವರ್ಷದ ತನಕ ತಿಂಗಳಿಗೆ ಮೂರ್ನಲ್ಕು ಬಾರಿ ಕೂಡಿಕೊಳ್ಳಿ. 50 ವರ್ಷದ ನಂತರ ಕೂಡಿಕೆಯ ಅವಧಿಯನ್ನು ಕಡಿತಗೊಳಿಸುತ್ತಾ ಹೋಗಿ.
