ಒದ್ದೆ ಕೂದಲನ್ನು ಒಣಗಿಸ್ಲಿಕ್ಕೆ ಹೇರ್ ಡ್ರೈಯರ್ ಬಳಸುತ್ತಾರೆ. ಅಬ್ಬಬ್ಬಾ ಎಂದರೆ ಇದಕ್ಕೆ ಗರಿಷ್ಠ 5 ಸಾವಿರ ರೂ.ವರೆಗೂ ಇರಬಹುದು. ಇದು ಸರಿಯಾಗಿ ಕೂದಲು ಒಣಗಿಸುವ ಕೆಲಸ ಮಾಡಿ, ಬಾಳಿಕೆ ಬಂದರೆ ಸಾಕು. ಈ ಕೂದಲು ಒಣಗಿಸುವ ಕೆಲಸಕ್ಕೆ ಚಿನ್ನದ ಡ್ರೈಯರ್ ಬಳಸುತ್ತಾರಾ?

ವಿಚಿತ್ರವಾದರೂ ಸತ್ಯ. ಚಿನ್ನದ ಡ್ರೈಯರ್ ಬಳಸುವುದೇ ನಂಬ್ಲಿಕ್ಕೆ ಕಷ್ಟವಾಗೋ ಸುದ್ದಿ. ಅಂಥದ್ರಲ್ಲಿ ಅದರ ಬೆಲೆ ಕೇಳಿದರೆ ಮತ್ತಷ್ಟು ಶಾಕ್ ಆಗೋದು ಗ್ಯಾರಂಟಿ.

23.75 ಕ್ಯಾರೇಟ್ ಚಿನ್ನ ಬಳಸಿದ ಈ ಡ್ರೈಯರ್ ಬೆಲೆ 37,900 ರೂ. ಅಂತೆ. ಅತ್ಯಂತ ದುಬಾರಿ ಎನ್ನಲಾದ ಈ ಡ್ರೈಯರ್ ಅನ್ನು ಅತ್ಯಂತ ಆಕರ್ಷಕವಾಗಿ, ವಿವಿಧ ಬಣ್ಣಗಳನ್ನು ಬಳಸಿ ತಯಾರಿಸಲಾಗಿದೆ. ಲೈಫ್‌ಟೈಮ್ ವಾರೆಂಟಿಯೂ ಇದೆಯಂತೆ! ಆನ್‌ಲೈನ್‌‌ನಲ್ಲಿ ಮಾತ್ರ ಲಭ್ಯವಿರೋ ಈ ಡ್ರೈಯರ್ ಅನ್ನು ಡೈಸನ್ ಸೂಪರ್ ಸೋನಿಕ್ ಕಂಪನಿ ತಯಾರಿಸುತ್ತದೆ. ಭಾರತದಲ್ಲಿನ್ನೂ ಯಾರೂ ಖರೀದಿ ಮಾಡಿಲ್ಲವಂತೆ. ನೀವು ಕೊಂಡು, ಮೊದಲಿಗರಾಗಿ...