ಎಂಗ್ ಆಗಿ ಕಾಣಲು ಈ ವ್ಯಾಕ್ಸ್ ದಿ ಬೆಸ್ಟ್...
ಚರ್ಮ ಸುಕ್ಕಾಗುವ ಸಮಸ್ಯೆಯಿಂದ ಹೆಣ್ಣು ಹೆಚ್ಚು ಆತಂಕಗೊಳ್ಳುತ್ತಾಳೆ. ಆದರೆ, ಅದಕ್ಕೊಂದು ಸಿಂಪಲ್ ಪರಿಹಾರವಿದೆ. ಏನದು?
ಮಹಿಳೆಯರಿಗೆ ವಯಸ್ಸಾದಂತೆ ಚರ್ಮ ಸುಕ್ಕುಗಟ್ಟುವ ಸಮಸ್ಯೆ, ಪ್ರೆಗ್ನೆನ್ಸಿ ನಂತರ ಸ್ಟ್ರೆಚ್ ಮಾರ್ಕ್ ಸಮಸ್ಯೆಯೂ ಇರುತ್ತದೆ. ಈ ಸಮಸ್ಯೆ ನಿವಾರಿಸಲು ಹಲವಾರು ಮನೆ ಮದ್ದುಗಳಿವೆ. ಅವುಗಳಲ್ಲಿ ಕ್ಯಾಂಡಲ್ ಹಾಟ್ ವ್ಯಾಕ್ಸ್ ಮಸಾಜ್ ಕೂಡ ಒಂದು.
ಪ್ರಾಚೀನ ಕಾಲದಲ್ಲಿ ರಾಜರಾಣಿ ತಮ್ಮ ಸುಂದರ ತ್ವಚೆಗಾಗಿ ಈ ಮಸಾಜ್ ಟೆಕ್ನಿಕ್ ಮಾಡುತ್ತಿದ್ದರಂತೆ. ಇತ್ತೀಚಿಗೆ ಸ್ಪಾ ಮತ್ತು ಪಾರ್ಲರ್ ಗಳಲ್ಲಿ ಇದು ಜನಪ್ರಿಯವಾಗಿದೆ.
ಏನಿದು ಕ್ಯಾಂಡಲ್ ಥೆರಪಿ?
ಈ ಥೆರಪಿಯಲ್ಲಿ ಕ್ಯಾಂಡಲ್ ಉರಿಸಿ ಕರಗಿಸುತ್ತಾರೆ. ಈ ವ್ಯಾಕ್ಸ್ ಕರಗುತ್ತಿದ್ದಂತೆ ಅದನ್ನು ಶರೀರದ ಬೇರೆ ಬೇರೆ ಭಾಗಗಳಿಗೆ ಹಚ್ಚಿ ಇದನ್ನು ಚೆನ್ನಾಗಿ ಸ್ಕ್ರಬ್ ಮಾಡುತ್ತಾರೆ. ನಂತರ ಬಿಸಿ ಟವೆಲನ್ನು ಶರೀರದ ಮೇಲೆ ಹಾಕಿ ಕಟ್ಟಲಾಗುತ್ತದೆ. ಹೀಗೆ ಮಾಡಿದರೆ ಶರೀರದ ಡೆಡ್ ಸ್ಕಿನ್‌ಗೆ ಮಾಯಿಶ್ಚರೈಸ್ ಆಗುತ್ತದೆ. ನಂತರ ಅದರ ಮೇಲೆ ಬ್ರಿಗ್ಟೇನಿಂಗ್ ಪ್ಯಾಕ್ ಹಚ್ಚಬೇಕು. ಇದರಲ್ಲಿ ಕ್ಯಾಂಡಲ್ ಜೊತೆ ಜೊಜೊಬಾ ಆಯಿಲ್, ಕೊಕೊವಾ ಬಟರ್ ಮತ್ತು ವಿಟಮಿನ್ ಈ ಮೊದಲಾದ ಎಣ್ಣೆಯನ್ನು ಮಿಕ್ಸ್ ಮಾಡುತ್ತಾರೆ. ಇದು ಸೌಂದರ್ಯ ಹೆಚ್ಚಿಸುತ್ತದೆ.
- ಕ್ಯಾಂಡಲ್ ವ್ಯಾಕ್ಸ್ ಮಸಾಜ್ ಮಾಡುವುದರಿಂದ ವಯೋ ಸಹಜ ತ್ವಚಾ ಸಮಸ್ಯೆ ನಿವಾರಣೆಯಾಗುತ್ತದೆ.
- ಮುಖದಲ್ಲಿ ಉಂಟಾಗುವ ಸುಕ್ಕು, ಸಡಿಲ ಸ್ಕಿನ್ ಸಮಸ್ಯೆಯನ್ನು ನಿವಾರಿಸುತ್ತದೆ.
- ತ್ವಚೆಯಲ್ಲಿ ರಕ್ತ ಸಂಚಾರ ಉತ್ತಮವಾಗಿರಲು ಸಹಾಯ ಮಾಡುತ್ತದೆ. ಇದರಿಂದ ಅರೋಗ್ಯ ಮತ್ತು ಸೌಂದರ್ಯ ಸಮಸ್ಯೆ ವಾರದಲ್ಲಿ ದೂರವಾಗುತ್ತದೆ.
- ಮಗುವಾದ ನಂತರ ತ್ವಚೆಯಲ್ಲಿ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್‌ಗೂ ಇದು ಒಳಿತು.
- ಡೆಡ್ ಸ್ಕಿನ್ ಸಮಸ್ಯೆ ದೂರ ಮಾಡಿ, ತ್ವಚೆ ಹೊಳೆಯುವಂತೆ ಮಾಡುತ್ತದೆ. ಇದರಿಂದ ಕಲೆ ರಹಿತ ತ್ವಚೆ ನಿಮ್ಮದಾಗುತ್ತದೆ.