ಉಪ್ಪಿನಕಾಯಿ ಇಲ್ಲದೆ ಊಟ ಮಾಡೋದೇ ಇಲ್ಲ ಎಂದಾದರೆ ಇದನ್ನು ತಿಳಿದುಕೊಳ್ಳಲೇಬೇಕು. ರುಚಿಯಾಗಿದೆ ಎಂದು ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸಿದರೆ ಅನಾರೋಗ್ಯ ಗ್ಯಾರಂಟಿ. 

  • ಉಪ್ಪಿನಕಾಯಿಯಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ. ಇದರಲ್ಲಿ ಉಪಯೋಗಿಸುವ ಮಸಾಲೆಯಿಂದ ಕೊಲೆಸ್ಟ್ರಾಲ್ ಮತ್ತಿತರೆ ಸಮಸ್ಯೆಯನ್ನು ತಂದೊಡ್ಡುತ್ತದೆ. 
  • ಇದರ ಬಳಕೆ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಆ್ಯಸಿಡಿಟಿ, ಗ್ಯಾಸ್, ಹುಳಿ ತೇಗಿನಂಥ ಸಮಸ್ಯೆಯನ್ನು ತಂದೊಡ್ಡುತ್ತದೆ. 
  • ಉಪ್ಪಿನ ಪ್ರಮಾಣ ಹೆಚ್ಚಾಗಿರುವುದರಿಂದ ಹೆಚ್ಚಿನ ಸೋಡಿಯಂ ದೇಹಕ್ಕೆ ಸೇರುತ್ತದೆ. ಅಲ್ಲದೆ ಹೈ ಬ್ಲಡ್ ಪ್ರೆಷರ್‌ಗೆ ಕಾರಣವಾಗಬಲ್ಲದು. ಇದರಿಂದ ಇರೋ ಸಮಸ್ಯೆಗಳು ಉಲ್ಬಣಗೊಳ್ಳಬಹುದು. 
  • ಉಪ್ಪಿನಕಾಯಿಯಲ್ಲಿ ವಿನೆಗರ್ ಸಹ ಬಳಸುತ್ತಾರೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಅಲ್ಸರ್ ಉಂಟಾಗುತ್ತದೆ. ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 
  • ಹೆಚ್ಚು ಹೆಚ್ಚು ಉಪ್ಪಿನಕಾಯಿ ತಿನ್ನುತ್ತಿದ್ದರೆ, ಆ್ಯಸಿಡಿಟಿ ಗ್ಯಾರಂಟಿ.