ಪ್ರೀತಿಯಲ್ಲಿ ಯಾರು ಯಾರಿಗೆ ತಾನೆ ಕಾಂಪ್ಲಿಮೆಂಟ್ ಮಾಡೋಲ್ಲ? ಅದರಲ್ಲೂ ಸರಿಯಾದ ಸಮಯದಲ್ಲಿ ಇದನ್ನ ಹೇಳಿದ್ರೆ ನಿಮ್ಮ ಲೈಫ್ ಬದಲಾಗುವುದಂತೂ ಗ್ಯಾರಂಟಿ...

ಲವ್ ಲೈಫ್ ಗಟ್ಟಿ ಮಾಡಿಕೊಳ್ಳುವುದಕ್ಕೆ ಇದೊಂದು ಟ್ಯಾಕ್ಟಿಕ್.  ಹುಡುಗಿಯರಿಗೆ ಲವ್ ಮಾಡುವಾಗ ಹುಡುಗರು ಹಾಗೂ ಮದುವೆಯ ನಂತರ ಪತಿ ತಮ್ಮ ದೇಹವನ್ನು ಅಂದರೆ ದೈಹಿಕ ಸೌಂದರ್ಯವನ್ನು ಹೊಗಳಿದರೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. 

ಜರ್ನಲ್ ಆಫ್ ಸೆಕ್ಸ್ ಆ್ಯಂಡ್ ಮರೈಟಲ್ ಥೆರಪಿ ನಡೆಸಿದ ಸಂಶೋಧನೆ ಪ್ರಕಾರ ಗಂಡಸರು ತಾವು ಇಷ್ಟ ಪಡುವ ಮಹಿಳೆ ದೇಹವನ್ನು ಅದ್ಭುತವಾಗಿ ವರ್ಣಿಸಿದರೆ ಅವರಿಗೆ ಫುಲ್ ಬೋಲ್ಡ್ ಆಗುತ್ತಾರಂತೆ. ಇದರಿಂದ ಎಂಥ ಸಂಬಂಧ ಬೇಕಾದರೂ ಗಟ್ಟಿ ಮಾಡಿಕೊಳ್ಳಬಹುದು. Happy partner leads happy relaionship ಎಂಬುದನ್ನು ಹೇಳುವ ಅಗತ್ಯವೇ ಇಲ್ಲ.

ಯಾವ ರೀತಿ ಕಾಂಪ್ಲಿಮೆಂಟ್? 

  • ಯಾವ, ಎಂಥ ಡ್ರೆಸ್ ಚೆನ್ನಾಗಿ ಕಾಣುತ್ತದೆ.
  • ಯಾವ ರೀತಿಯ ಲಿಪ್‌ಸ್ಟಿಕ್ ಅವರ ತುಟಿ ಹಾಗೂ ಮುಖ ಆಕರ್ಷಣೆಯಿಂದ ಕಾಣುವಂತೆ ಮಾಡುತ್ತದೆ?
  • ಯಾವ ಹೇರ್‌ಸೈಲ್‌ ಅವರನ್ನು ಬೊಲ್ಡ್ ಆಗಿ ಕಾಣಿಸುತ್ತದೆ? ಎಲ್ಲವನ್ನೂ ಹೇಳಬೇಕಂತೆ...

ಹುಡುಗ ನಿಮ್ಮ ಜೊತೆ ಲವ್ವಲ್ಲಿ ಬಿದ್ದಿದ್ದಾನೆಂದು ತಿಳಿಯುವುದು ಹೇಗೆ?

ಕೆಲವು ಸೆಕ್ಸ್ ತಜ್ಞರು ಹೇಳುವ ಪ್ರಕಾರ ಇಂಥ ಗುಣ ರೂಢಿಸಿಕೊಳ್ಳುವುದರಿಂದ ತಾವು ಇಷ್ಟ ಪಡುವ ಹುಡುಗಿಯ ಆತ್ಮಸ್ಥೈರ್ಯ ಹೆಚ್ಚುತ್ತೆ. ಯಾವ ಹೆಣ್ಣಿನ ವಿಶ್ವಾಸ ಹೆಚ್ಚಿರುತ್ತದೋ ಅವಳು ನೆಮ್ಮದಿಯಾಗಿ ಇರುತ್ತಾಳೆ. ಇಡೀ ಕುಟುಂಬದ ನೆಮ್ಮದಿಗೂ ಕಾರಣವಾಗಬಲ್ಲಳು. ಒಂದೇ ಒಂದು ಹೊಗಳಿಕೆಯಿಂದ ಒಂದು ಕುಟುಂಬದ ಜೀವನ ಶೈಲಿಯೇ ಬದಲಾಗುವಂತೆ ಮಾಡಬಹುದು.