ಪ್ರೀತಿ ಕೆಲವೊಮ್ಮೆ ವ್ಯಾಖ್ಯಾನಕ್ಕೇ ನಿಲುಕುವುದಿಲ್ಲ. ಈ ಮಾನಸಿಕ ಬಾಂಧವ್ಯ ಅದು ಹೇಗೆ ಬೆಳೆಯುತ್ತದೋ ಗೊತ್ತಾಗೋದೂ ಇಲ್ಲ. ಇಂಥ ಪ್ರೀತಿಯಲ್ಲಿ ಬಿದ್ದಾಗ ಕೆಲವು ವಿಷಯಗಳನ್ನು ಇಗ್ನೋರ್ ಮಾಡುವುದನ್ನು ಕಲಿಯಿರಿ. 

ಹರೆಯದಲ್ಲಿ ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳಿಗೆ ತಮ್ಮ ಪ್ರೀತಿಯ ಬಗ್ಗೆ ಕೆಲವೊಮ್ಮೆ ಅನುಮಾನಗಳು ಕಾಡುವುದಿದೆ. ಅದರಲ್ಲಿಯೂ ಹರೆಯದ ಪ್ರೇಮ ಇಲ್ಲ ಸಲ್ಲದ ಅನುಮಾನಗಳೂ ಕೊರಳಿಗೆ ಸುತ್ತಿಕೊಂಡು ಹುತ್ತವನ್ನೇ ಬೆಳೆಯಿಸಿಕೊಳ್ಳುತ್ತದೆ. ಅಷ್ಟಕ್ಕೂ ನೈಜ ಪ್ರೀತಿಯನ್ನು ಪತ್ತೆ ಹಚ್ಚುವುದು ಹೇಗೆ?

ನೀವು ಪ್ರೀತಿ ಮಾಡುತ್ತಿರುವ ಹುಡುಗ ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಾರೋ? ಇಲ್ಲವೋ? ಎಂಬುದನ್ನು ತಿಳಿಯುವುದು ಸುಲಭವಲ್ಲ. ಅದು ಪ್ರೀತಿ ಆಗಷ್ಟೇ ಆರಂಭವಾಗಿದೆ ಎಂದರೆ ಅವರ ನೈಜ ಗುಣ ಏನೆಂದು ತಿಳಿಯೋದೇ ಕಷ್ಟ. ಆ ಸಂದರ್ಭದಲ್ಲಿ ನೀವಿದ್ದರೆ ಅವರಲ್ಲಿ ಈ ಗುಣಗಳು ಇವೆಯೇ ಎಂದು ಒಮ್ಮೆ ಪರೀಕ್ಷಿಸಿ ನೋಡಿ.  ಈ ಎಲ್ಲಾ ಗುಣಗಳಿದ್ದರೆ ಅವರು ನಿಜವಾಗಿಯೂ ಲವ್ ಮಾಡ್ತಾ ಇದ್ದಾರೆ ಎಂದರ್ಥ.  

- ಆತ ನಿಜವಾಗಿ ಪ್ರೀತಿಸುತ್ತಿದ್ದರೆ ಹುಡುಗಿ ಬಗ್ಗೆ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲು ಇಷ್ಟ ಪಡುತ್ತಾನೆ. ಆಕೆಯ ಕನಸು, ಬಯಕೆ ಏನೆಂದು ಕೇಳಿಕೊಳ್ಳುತ್ತಾನೆ. 

- ನಿಮ್ಮಿಂದ ಹೊಸದನ್ನು ಕಲಿಯಲು ಅವರು ಇಚ್ಛಿಸುತ್ತಾರೆ. ನಿಮ್ಮ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಾರೆ. 

- ಯಾವಾಗ ವ್ಯಕ್ತಿ ತನ್ನಾಕೆಯನ್ನು ತುಂಬಾ ಪ್ರೀತಿ ಮಾಡುತ್ತಾನೋ ಅವಾಗ ಆತ ಆಕೆಯನ್ನು ಗೌರವಿಸಲು ಆರಂಭಿಸುತ್ತಾನೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ನಿಮ್ಮ  ಅಭಿಪ್ರಾಯವನ್ನು ಗೌರವಿಸುತ್ತಾರೆ. 

- ಭವಿಷ್ಯದ ಬಗ್ಗೆ ಮಾತನಾಡುವಾಗ ನಿಮ್ಮನ್ನೂ ಸೇರಿಸಿಕೊಳ್ಳುತ್ತಾರೆ. ತನ್ನ ಜೀವನದ ಕೊನೆ ಕ್ಷಣದವರೆಗೂ ನೀವು ಅವರ ಜೊತೆ ಇರಬೇಕೆಂದು ಬಯಸುತ್ತಾರೆ. 

- ತನ್ನ ಸಂಗಾತಿಯನ್ನು ಸ್ನೇಹಿತರಿಗೆ, ಮನೆಯವರಿಗೆ ಪರಿಚಯಿಸಿ ಕೊಡುತ್ತಾರೆ. 

-ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಕೈ ಹಿಡಿದು ನಡೆಯಲು ಹಿಂಜರಿಯುವುದೇ ಅಲ್ಲ. ಕೈ ಹಿಡಿಯಲಿಲ್ಲವೆಂದರೆ ಪ್ರೀತಿ ಇಲ್ಲವೆಂಬುವುದೂ ಅರ್ಥವಲ್ಲ.