ಅತಿಯಾದ ಕೊಕೇನ್ ಸೇವನೆಯಿಂದ ಯುವತಿಯೊಬ್ಬಳು ತನ್ನ ಮೂಗನ್ನೇ ಕಳೆದುಕೊಂಡ ದುರಂತ ಘಟನೆ ಇದು. ಚಿಕಾಗೋದ ಕೆಲ್ಲಿ ಕೊಸೈರಾ ಎಂಬ ಯುವತಿ ಕೊಕೇನ್ ಚಟಕ್ಕೆ ಬಲಿಯಾಗಿ, ಮೂಗಿನ ಜಾಗದಲ್ಲಿ ರಂಧ್ರ ಉಂಟಾಗಿ ನರಳಿದಳು. ನಂತರ ವೈದ್ಯರು ಮಾಡಿದ್ದೇನು ನೀವೇ ನೋಡಿ..
ಡ್ರಗ್ಸ್ ಮತ್ತು ಕೊಕೇನ್ ಅತಿಯಾದ ಅಭ್ಯಾಸ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಕೆಲವರು ಇನ್ನೂ ಎಚ್ಚೆತತುಕೊಂಡಿಲ್ಲ. ಕ್ಷಣಿಕ ಸುಖ ಹಾಗೂ ಸಂತೋಷಕ್ಕಾಗಿ ಡ್ರಗ್ಸ್ ಮತ್ತು ಕೊಕೇನ್ ಬಳಸಲು ಪ್ರಾರಂಭಿಸುವ ಯುವಜನರು ನಂತರ ನಶೆಯ ಮತ್ತಿನ ಅಮಲಿಗೆ ಬಿದ್ದು, ಶಾಶ್ವತ ದಾಸರಾಗುತ್ತಾರೆ. ಜೊತೆಗೆ, ಆರೋಗ್ಯ ಮತ್ತು ಹಣವೂ ಕಳೆದುಕೊಂಡು ಕೆಲವೊಮ್ಮೆ ಪ್ರಾಣವೇ ಹೋಗುತ್ತದೆ. ಆದೇ ರೀತಿ ಕೊಕೇನ್ ಸೇವನೆ ಚಟ ಅಂಟಿಸಿಕೊಂಡಿದ್ದ ಯುವತಿ ತನ್ನ ಮೂಗನ್ನೇ ಕಳೆದುಕೊಂಡಿದ್ದಾಳೆ.
ಅಮೇರಿಕಾದ ಚಿಕಾಗೋದ ಯುವತಿ ಕೆಲ್ಲಿ ಕೊಸೈರಾ ಇದೇ ರೀತಿಯ ದುರಂತಕ್ಕೆ ಈಡಾಗಿದ್ದಾಳೆ. 2017 ರಲ್ಲಿ ಕೆಲ್ಲಿ ಕೊಸೈರಾ (38) ಕೊಕೇನ್‌ಗೆ ಚಟಕ್ಕೆ ದಾಸಿಯಾದಳು. ಕೆಲ್ಲಿ ಒಂದು ರಾತ್ರಿ ಸ್ನೇಹಿತನೊಂದಿಗೆ ಪಾರ್ಟಿಗೆ ಹೋಗಿದ್ದಾಗ, ಅಲ್ಲಿ ಸ್ನೇಹಿತರು ಒತ್ತಾಯಿಸಿದಾಗ ಆಕೆ ಮೊದಲ ಬಾರಿಗೆ ಕೊಕೇನ್ ಬಳಸಿದಳು. ಆದರೆ, ಅದು ತನ್ನ ಜೀವನವನ್ನೇ ಹಾಳು ಮಾಡುತ್ತದೆ ಎಂದು ಕೆಲ್ಲಿಗೆ ಅರಿಯಲು ಸ್ವಲ್ಪ ತಡವಾಯಿತು. ಅಷ್ಟರಲ್ಲಿ 19 ತಿಂಗಳುಗಳು ಕಳೆದು ಹೋಗಿದ್ದವು. ಕೆಲ್ಲಿಯ ಸಂಪಾದನೆಯಿಂದ 70 ಲಕ್ಷ ರೂಪಾಯಿ ಆಗಲೇ ಖರ್ಚು ಆಗಿತ್ತು. ಎಲ್ಲವನ್ನೂ ಕೊಕೇನ್ ಖರೀದಿಸಲು ಖರ್ಚು ಮಾಡಿದ್ದಳು. ಅಲ್ಲಿಗೆ ಮುಗಿಯಲಿಲ್ಲ. ಕೊಕೇನ್ ಅನ್ನು ನಶೆ ರೀತಿಯಲ್ಲಿ ಮೂಗಿಗೆ ಏರಿಸಿಕೊಂಡು ಕೊನೆಗೆ ಕೆಲ್ಲಿಯ ಮೂಗಿನ ಜಾಗದಲ್ಲಿ ಒಂದು ರಂಧ್ರವುಂಟಾಗಿತ್ತು. ಇದಾದ ನಂತರವೇ ಕೆಲ್ಲಿಗೆ ತನಗೆ ಆಪತ್ತು ಕಾದಿದೆ ಎಂಬುದು ಅರಿವಾಗಿತ್ತು.
ಇದನ್ನೂ ಓದಿ: 2000 ರೂ. ನೋಟು ವಾಪಸಾತಿಗೆ ಇನ್ನೂ ಅವಕಾಶ ಕೊಟ್ಟ ಆರ್‌ಬಿಐ; ಈವರೆಗೆ ಶೇ.98.18ರಷ್ಟು ರಿಟರ್ನ್ಸ್!
ಕೊಕೇನ್ ಎಳೆದುಕೊಳ್ಳುವುದರಿಂದ ಕೆಲ್ಲಿಯ ಮೂಗಿಗೆ ಗಂಭೀರವಾದ ಸಮಸ್ಯೆಗಳು ಶುರುವಾಗಿದ್ದವು. ಮಾದಕ ವಸ್ತು ಬಳಸಿದ ಕೆಲವೇ ತಿಂಗಳಲ್ಲಿ ಕೆಲ್ಲಿಯ ಮೂಗಿನಿಂದ ರಕ್ತ ಬರಲು ಪ್ರಾರಂಭವಾಗಿತ್ತು. ನಿಧಾನವಾಗಿ ಮುಖದಲ್ಲಿ ರಂಧ್ರವುಂಟಾಗಲು ಪ್ರಾರಂಭವಾಯಿತು. ಈ ಸಮಯದಲ್ಲೆಲ್ಲಾ ಕೆಲ್ಲಿ ಕೊಕೇನ್ ಬಳಕೆಯನ್ನು ಮುಂದುವರಿಸುತ್ತಲೇ ಇದ್ದಳು. ಕೊನೆಗೆ ಮೂಗಿನಿಂದ ರಕ್ತದೊಂದಿಗೆ ಮಾಂಸದ ತುಂಡುಗಳು ಕೂಡ ಹೊರಗೆ ಬರಲು ಪ್ರಾರಂಭವಾದವು. ಆದರೆ, ಅತಿಯಾದ ಕೊಕೇನ್ ಬಳಕೆಯಿಂದ ತನ್ನ ಗಾಯ ತಾನಾಗಿಯೇ ವಾಸಿಯಾಗುತ್ತದೆ ಎಂಬ ತಪ್ಪು ತಿಳುವಳಿಕೆಯಲ್ಲಿ ಕೆಲ್ಲಿ ಇದ್ದಳು. ನೋವು ಕಡಿಮೆಯಾಗಲು ಅವಳು ಮತ್ತೆ ಮತ್ತೆ ಮಾದಕ ವಸ್ತು ಬಳಸುತ್ತಿದ್ದಳು. ಕೊನೆಗೆ ಮೂಗಿನ ಜಾಗದಲ್ಲಿ ಒಂದು ರಂಧ್ರ ಮಾತ್ರ ಉಳಿಯಿತು. ಇದರಿಂದ ಕೆಲ್ಲಿಯ ಮನೆಯವರು ಆಕೆಯನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಿದರು.
ಇದನ್ನೂ ಓದಿ: ಅಮೆರಿಕ ಅಂತರ್ಯುದ್ಧ, ಅನ್ಯಗ್ರಹ ಜೀವಿ ಭೇಟಿ.. 2025ರ ದುರಂತಗಳ ಬಗ್ಗೆ ಟೈಮ್ ಟ್ರಾವೆಲರ್ ಭಯಾನಕ ಭವಿಷ್ಯ!
ಅನೇಕ ತಿಂಗಳುಗಳ ಕಾಲ ಡಿ-ಅಡಿಕ್ಷನ್ ಸೆಂಟರ್‌ಗಳಿಗೆ ಅಲೆದಾಡಿದ ಕೆಲ್ಲಿ 2021 ರಲ್ಲಿ ತನ್ನ ಮಾದಕ ವಸ್ತು ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದಳು. ನಂತರ ಮುಖದ ವೈಪರೀತ್ಯವನ್ನು ಸರಿಪಡಿಸಲು ಸುಮಾರು 15ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿದರು. ಮುಖದಿಂದ ಮಾಂಸ ಮತ್ತು ಚರ್ಮವನ್ನು ತೆಗೆದು ಅನೇಕ ಶಸ್ತ್ರಚಿಕಿತ್ಸೆಗಳ ಮೂಲಕ ಕೆಲ್ಲಿಯ ಮೂಗಿನ ಒಂದು ರೂಪವನ್ನು ಮಾತ್ರ ವೈದ್ಯರು ಪುನರ್ನಿರ್ಮಿಸಲು ಸಾಧ್ಯವಾಯಿತು. ಕೆಲ್ಲಿಗೆ ಮೂಗನ್ನು ಅಳವಡಿಕೆ ಮಾಡಿದ್ದಾರೆ. ಆದರೆ, ಇದು ನಾಯಿಯ ಮೂಗಿನ ರೀತಿ ಇದೆ. ಇಂದು ಕೆಲ್ಲಿ ಮಾದಕ ದ್ರವ್ಯಗಳ ವಿರುದ್ಧ ಪ್ರಚಾರದಲ್ಲಿ ಸಕ್ರಿಯಳಾಗಿದ್ದಾಳೆ. ತನಗಾದ ದುರನುಭವ ಬೇರೆ ಯಾರಿಗೂ ಆಗಬಾರದು ಎಂದು ಆಕೆ ಬಯಸುತ್ತಾಳೆ.
