ಇನ್ನೊಬ್ಬರ ಸಾಧನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವುದರೊಂದಿಗೆ ಚಪ್ಪಾಳೆ ತಟ್ಟುವುದು ಸಹಜ. ಆದರೆ, ಮನಸಾರೆ ತಟ್ಟುವ ಈ ಚಪ್ಪಾಳೆ ಆರೋಗ್ಯ ವೃದ್ಧಿಗೂ ಸಹಕಾರಿ ಎನ್ನೋ ವಿಷಯ ನಿಮಗೆ ಗೊತ್ತಾ? ಹೌದು, ಚಪ್ಪಾಳೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಏಕೆ?

ಬಹುಮಾನ ಬಂದವರಿಗೆ ಚಪ್ಪಾಳೆ ತಟ್ಟುವುದು ಗೊತ್ತು. ಆದರೆ, ಚಪ್ಪಾಳೆ ತಟ್ಟುವವರಿಗೆ ಆರೋಗ್ಯವೇ ಬಹುಮಾನ ಎಂಬುವುದು ಗೊತ್ತಾ? ಚಪ್ಪಾಳೆ ಹೊಡೆದರೆ ಆರೋಗ್ಯಕಾರಿ ಎನ್ನುವ ದೃಷ್ಟಿಯಿಂದ ಶಾಲೆಗಳಲ್ಲಿಯೂ 'clapping classes'ಆರಂಭಿಸಲಾಗುತ್ತಿದೆ. ವಯಸ್ಕರಿಗೆ ಪಾರ್ಕ್‌ಗಳಲ್ಲಿ 'laughing classes' ನಡೆಸುತ್ತಾರೆ. ಜತೆಗೆ ಕ್ಲಾಪ್ಪಿಂಗ್ ಕ್ಲಾಸ್‌ಗಳೂ ಇತ್ತೀಚೆಗೆ ಹೆಚ್ಚುತ್ತಿದೆ. ನಮ್ಮ ದೇಹದಲ್ಲಿರುವ 340 ಆಕ್ಯುಪ್ರೆಷರ್ ಪಾಯಿಂಟ್‌ಗಳಲ್ಲಿ 28 ಅಂಗೈಯಲ್ಲಿಯೇ ಇರುತ್ತವೆ. ಇವು ಆರೋಗ್ಯದೊಂದಿಗೆ ನೇರ ಸಂಪರ್ಕ ಹೊಂದಿರುತ್ತವೆ. ಆ ಕಾರಣವೇ ಚಪ್ಪಾಳೆ ಮೇಲೆ ಒತ್ತಡ ಬಿದ್ದಾಗ, ಅಂಗಾಂಗಳು ಆ್ಯಕ್ಟಿವ್ ಆಗಿ, ಆರೋಗ್ಯ ವೃದ್ಧಿಸುತ್ತದೆ.

ಚಪ್ಪಾಳೆ ಚಿಕಿತ್ಸೆ ಏನು, ಎತ್ತ?

  • ಕೊಬ್ಬರಿ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಕೈಗಳ ಮಧ್ಯ ಹಾಕಿ ದೇಹ ಹೀರುವವರಿಗೆ ಉಜ್ಜಬೇಕು. ಈ ಸಂದರ್ಭದಲ್ಲಿ ಕಾಲಿಗೆ ಚೀಲ ಅಥವಾ ಶ್ಯೂ ಧರಿಸಿದರೆ ಶಕ್ತಿ ಅಲೆಗಳು ದೂರವಾಗದಂತೆ ತಡೆಯುತ್ತದೆ.
  • ಒಂದು ಅಂಗೈಯನ್ನು ಮತ್ತೊಂದರಿಂದ ರಭಸವಾಗಿ ಉಜ್ಜಿ. ತೋಳನ್ನು ತುಸು ಸಡಿಲವಾಗಿ ಬಿಟ್ಟು, ಎಡ-ಬಲಕ್ಕೂ ಉಜ್ಜಿ. ಬೆರಳು ಹಾಗೂ ಅಂಗೈ ನಡುವೆಯೂ ಈ ವ್ಯಾಯಾಮ ಮಾಡಿ. ಈ ಚಿಕಿತ್ಸೆಯನ್ನು ಮುಂಜಾನೆ ಮಾಡಿದರೆ, ಉತ್ತಮ ಫಲಿತಾಂಶ ಪಡೆಯಬಹುದು.
  • ದಿನಕ್ಕೆ 20-30 ನಿಮಿಷಗಳ ಕಾಲ ಚಪ್ಪಾಳೆ ಹೊಡೆಯುವುದರಿಂದ, ದೇಹ ಫಿಟ್ ಆಗಿರುತ್ತದೆ. ಚಪ್ಪಾಳೆಯಿಂದ ದೇಹದಲ್ಲಿ ರಕ್ತ ಸಂಚಲನ ಸುಗಮವಾಗುತ್ತದೆ. ಕೆಟ್ಟ ಕೊಲೆಸ್ಟರಾಲ್ ದೂರ ಮಾಡುತ್ತದೆ. 
  • ಕೈಯಲ್ಲಿರುವ ಮುಖ್ಯ ಆಕ್ಯುಪ್ರೆಷರ್ ಪಾಯಿಂಟ್‌ಗಳು ಚಪ್ಪಾಳೆಯಿಂದ ಚುರುಕುಕೊಂಡು, ಅಗತ್ಯ ಅಂಗಾಂಗಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.
  • ಹೆಬ್ಬೆಟ್ಟು ತುದಿ, ಮಣಿಕಟ್ಟು, ನಾಡಿ ಹಾಗೂ ಹೆಬ್ಬೆರಳ ಉಗುರ ನಡುವೆ ಘರ್ಷಣೆಯಾಗುವಂತೆ ಉಜ್ಜಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಇದರಿಂದೇನು ಉಪಯೋಗ?

  • ಹೃದಯ ಮತ್ತು ಕರುಳ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಆಸ್ತಮಾವೂ ದೂರವಾಗುತ್ತದೆ.
  • ಬೆನ್ನು, ಕುತ್ತಿಗೆ ಮತ್ತು ಕೀಲು ನೋವಿಗೆ ಉತ್ತಮ ಪರಿಹಾರ.
  • ಮೂಳೆ ಸಂಧಿಯಲ್ಲಿ ಅಥವಾ ಚರ್ಮದ ಮೇಲೆ ಉದ್ಭವಿಸಬಹುದಾದ ನೋವನ್ನು ನಿವಾರಿಸುತ್ತದೆ. 
  • ಕಡಿಮೆ ರಕ್ತದೊತ್ತಡ ಇರುವವರಿಗೆ ಸಹಕಾರಿ. 
  • ಜೀರ್ಣಾಂಗವೂ ಆರೋಗ್ಯವಾಗಿರುತ್ತದೆ. 
  • ಮಕ್ಕಳು ಹೆಚ್ಚಾಗಿ ಚಪ್ಪಾಳೆ ಹೊಡೆದರೆ, ಮೆದುಳು ಚುರುಕುಗೊಂಡು, ಸ್ಪೆಲ್ಲಿಂಗ್ ಮಿಸ್ಟೇಕ್ಸ್ ಆಗುವುದೂ ಕಡಿಮೆ ಮಾಡುತ್ತದೆ.