Asianet Suvarna News Asianet Suvarna News

Viral News : ಇವ ಎಷ್ಟು ಅದೃಷ್ಟವಂತಾರೀ..! ಒಂದು ವರ್ಷ ಸಿಕ್ಕಿದೆ ರಜಾ

ಕೆಲವೊಂದನ್ನು ಪಡೆಯೋಕೆ ಪುಣ್ಯ ಮಾಡಿರಬೇಕು. ಅದ್ರಲ್ಲೂ ಸಂಬಳ ಸಹಿತ ರಜೆ ಸಿಗೋದು ಲಕ್. ಈ ವ್ಯಕ್ತಿ ಅದೆಷ್ಟು ಅದೃಷ್ಟ ಮಾಡಿದಾನೆ ಅಂದ್ರೆ ಆತನಿಗೆ ಸಿಕ್ಕ ಆಫರ್ ನೋಡಿ ಉಳಿದ ಉದ್ಯೋಗಿಗಳು ಮುಖ ಮುಖ ನೋಡಿಕೊಳ್ತಿದ್ದಾರೆ. 
 

Chinese Employee Wins One Year Of Paid Leave In Companys Lucky Draw
Author
First Published Apr 18, 2023, 1:38 PM IST

ರಜೆ ಅಂದ್ರೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಶುಕ್ರವಾರ ಬರ್ತಿದ್ದಂತೆ ಎಲ್ಲರ ಮುಖದಲ್ಲಿ ಏನೋ ಒಂದು ರೀತಿಯ ನೆಮ್ಮದಿಯನ್ನು ನಾವು ಕಾಣ್ತೇವೆ. ಶನಿವಾರ, ಭಾನುವಾರದ ಹೊರತು ಕೆಲವರಿಗೆ ವಾರದ ಮಧ್ಯದಲ್ಲೂ ರಜೆ ಸಿಕ್ಕಿದ್ರೆ ಅಂತಾ ಅನ್ನಿಸುತ್ತಿರುತ್ತದೆ. ವಾರದ ಮಧ್ಯೆ ರಜೆ ಸಿಕ್ಕಿದ್ರೆ ಅವರ ಖುಷಿ ಹೇಳೋಕೆ ಸಾಧ್ಯವಿಲ್ಲ. ಮತ್ತೆ ಕೆಲವರು ಎಷ್ಟು ಸೋಮಾರಿಗಳಿರ್ತಾರೆ ಅಂದ್ರೆ ಕೆಲಸ ಮಾಡದೆ ಸಂಬಳ ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತು ಅಂತಾ ಕನಸು ಕಾಣ್ತಾರೆ. ನೀವೂ ಇವರಲ್ಲಿ ಒಬ್ಬರಾಗಿದ್ದರೆ ಈ ಉದ್ಯೋಗಿ ಕಥೆ ಕೇಳಿ ಹೊಟ್ಟೆ ಉರಿದುಕೊಳ್ತೀರಿ. ಯಾಕೆಂದ್ರೆ ಆತನಿಗೆ ರಜೆ ಸಿಕ್ಕಿಲ್ಲ. ರಜೆಗಳು ಸಿಕ್ಕಿವೆ. ಯಸ್, ಒಂದೋ, ಎರಡೋ ದಿನವಲ್ಲ, ವರ್ಷಪೂರ್ತಿ ಈತನಿಗೆ ರಜೆ ಸಿಕ್ಕಿದೆ. ಕೆಲಸವಿಲ್ಲದೆ ಮನೆಯಲ್ಲಿ ಆರಾಮಾಗಿ ಕುಳಿತುಕೊಳ್ಳುವ ವ್ಯಕ್ತಿ ಸಂಬಳ ಮಾತ್ರ ಪಡೆಯುತ್ತಾನೆ. ಅರೇ ಅದು ಹೇಗೆ ಅಂದ್ರಾ? ಇಲ್ಲಿದೆ ಉತ್ತರ.

ಆತನನ್ನು ಅದೃಷ್ಟ (Good Luck) ವಂತ ಅಂತಾ ಎಲ್ಲ ಕೆಲಸಗಾರರೂ ಹೇಳಿದ್ದಾರೆ. ಚೀನಾ (China) ದಲ್ಲಿ ಈ ಘಟನೆ ನಡೆದಿದೆ. ಚೀನಾದ ಶೆನ್‌ಜೆನ್‌ನಲ್ಲಿರುವ ವ್ಯಕ್ತಿಯೊಬ್ಬ ಕಚೇರಿಯ ಪಾರ್ಟಿಯ ಸಮಯದಲ್ಲಿ ಲಾಟರಿ (Lottery) ಗೆದ್ದಿದ್ದಾರೆ. ಅದ್ರಲ್ಲಿದ್ದ ಸಂಗತಿ ನೋಡಿ ಆತನಿಗೇ ನಂಬಲಾಗ್ಲಿಲ್ಲ. ಯಾಕೆಂದ್ರೆ ಆತ 365 ದಿನಗಳ ಕಾಲ ವೇತನ ಸಹಿತ ರಜೆ ಪಡೆದಿದ್ದಾನೆ. ಏಪ್ರಿಲ್ 9 ರಂದು, ಗುವಾಂಗ್‌ಡಾಂಗ್‌ನ ಕಂಪನಿಯೊಂದು, ತನ್ನ ಸಿಬ್ಬಂದಿಗಾಗಿ ವಾರ್ಷಿಕ ಭೋಜನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಲ್ಲಿ ನಾನಾ ಸ್ಪರ್ಧೆಗಳು ನಡೆದಿದ್ದವು. ಹಾಗೆಯೇ ಉದ್ಯೋಗಿಗಳ ಸ್ಥೈರ್ಯವನ್ನು ಹೆಚ್ಚಿಸಲು, ಕೆಲವು ಅದೃಷ್ಟದ ಡ್ರಾಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಚೆನ್ ಎಂಬ ವ್ಯಕ್ತಿಗೆ ಅದೃಷ್ಟ ಖುಲಾಯಿಸಿದೆ. ಕನಸಿನಲ್ಲೂ ಕಲ್ಪಿಸಿಕೊಳ್ಳದ ಅವಕಾಶ ಅವನಿಗೆ ಸಿಕ್ಕಿದೆ. 365 ದಿನಗಳ ವೇತನ ಸಹಿತ ರಜೆಯ ಬಹುಮಾನವನ್ನು ಚೆನ್ ಗೆದ್ದಿದ್ದಾನೆ. 

ಪುರುಷರ ಅತೀ ಉದ್ದದ ʼPENISʼ ಸೈಝ್‌ ಎಷ್ಟು? ವಿಜ್ಞಾನಿಗಳೂ ಊಹಿಸಲಾಗದ ಸುಳ್ಳು!

ಆತ ಈ ಲಕ್ಕಿ ಡ್ರಾ ಗೆಲ್ಲುತ್ತಿದ್ದಂತೆ ಉಳಿದ ಉದ್ಯೋಗಿಗಳ ಕಣ್ಣುಗಳು ಅರಳಿವೆ. ಚೆನ್ ಕೂಡ ಇದನ್ನು ನಂಬೋದು ಕಷ್ಟವಾಗಿತ್ತಂತೆ. ಯಾವುದೇ ಉದ್ಯೋಗಿ, ಒಂದು ವರ್ಷ ವೇತನ ಸಹಿತ ರಜೆ ಪಡೆಯಲು ಸಾಧ್ಯವಿಲ್ಲವೆಂದು ಕಂಪನಿ ಭಾವಿಸಿತ್ತಂತೆ. ಲಕ್ಕಿ ಡ್ರಾ ಚೀಟಿಗಳಲ್ಲಿ ಕೇವಲ ಒಂದು ಚೀಟಿಯಲ್ಲಿ ಮಾತ್ರ ವರ್ಷಪೂರ್ತಿ ರಜೆಯ ವಿಷ್ಯ ಬರೆಯಲಾಗಿತ್ತು. ಉಳಿದವುಗಳಲ್ಲಿ ಒಂದು, ಎರಡು ದಿನದ ರಜೆ ಸೇರಿದಂತೆ ಬೇರೆ ವಿಷ್ಯಗಳಿದ್ದವು. 
ಚೆನ್ ಅದೃಷ್ಟ ಬಹಳ ಚೆನ್ನಾಗಿದೆ. ಹಾಗಾಗಿಯೇ ಆತ ಕಂಪನಿ ನಿರೀಕ್ಷೆಯನ್ನು ಸುಳ್ಳು ಮಾಡಿ ಲಕ್ಕಿ ಡ್ರಾನಲ್ಲಿ ವಿನ್ ಆಗಿದ್ದಾನೆ. ಆತನನ್ನು ಕಂಪನಿ ಶೀಘ್ರವೇ ಸಂಪರ್ಕಿಸಿ ರಜೆಯ ಬಗ್ಗೆ ಮಾತುಕತೆ ನಡೆಸಲಿದೆ. ಈ ಕಥೆಯಲ್ಲೊಂದು ಟ್ವಿಸ್ಟ್ ಇದೆ. ಒಂದು ಕಂಪನಿ ವರ್ಷಪೂರ್ತಿ ಉದ್ಯೋಗಿಗೆ ರಜೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಅದು ರಜೆ ಬದಲು ಹಣ ಆಫರ್ ಮಾಡುವ ಸಾಧ್ಯತೆಯಿದೆ. 

Viral Video : ಐಸ್ ಕ್ರೀಂ ಜೊತೆ ತಂದೂರಿ ಚಿಕನ್, ಹೇಗಿರಬಹುದು ಟೇಸ್ಟ್?

ಸಾಮಾಜಿಕ ಜಾಲತಾಣದಲ್ಲಿ ಚೆನ್ ವಿಷ್ಯ ವೈರಲ್ ಆಗಿದೆ. ಅದೃಷ್ಟದ ಚೆಕ್ ಹಿಡಿದು ಚೆನ್ ನಿಂತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಹೆರಿಗೆ ರಜೆಗಿಂತ ಇದು ಬೆಸ್ಟ್ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಮ್ಮ ಕಚೇರಿಯಲ್ಲೂ ಇಂಥ ರಜೆ ಆಫರ್ ಸಿಕ್ಕಿದ್ರೆ ಅಂತಾ ಅಲವತ್ತುಕೊಳ್ತಿದ್ದಾರೆ. ಇನ್ನು ಕೆಲವರು ಕಂಪನಿ ನೀಡುವ ವೋಚರ್ ಗಿಂತ ಇದು ಬೆಸ್ಟ್ ಎಂದು ಬರೆದಿದ್ದಾರೆ.ನಾನಾಗಿದ್ರೆ 10 ತಿಂಗಳ ರಜೆಯನ್ನು ಕ್ಯಾಶ್ ರೂಪದಲ್ಲಿ ಹಾಗೂ 2 ತಿಂಗಳ ರಜೆಯನ್ನು ಪೇಡ್ ಲೀವ್ ಆಗಿ ಪಡೆಯುತ್ತಿದ್ದೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. 
 

Follow Us:
Download App:
  • android
  • ios