ಪ್ರತಿ ದಿನ 100 ರಿಂದ 200 ರೂಪಾಯಿ ಮಾತ್ರ ಖರ್ಚು. ತಮ್ಮ ದುಡಿದ ಆದಾಯವನ್ನೆಲ್ಲಾ ಉಳಿಸಿ ಇದೀಗ 455 ಮಕ್ಕಳ ಆರೋಗ್ಯ, ಚಿಕಿತ್ಸೆಗೆ ದಾನ ಮಾಡಿದ ಹಿರಿಯ ದಂಪತಿಗಳ ಮನಮಿಡಿಯುವ ಜೀವನ ಇಲ್ಲಿದೆ.
ಮದುವೆಯಾಗಿ ಮಕ್ಕಳಿಲ್ಲ ಎಂದು ಹಲವು ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಮಕ್ಕಳಾಗಲೇ ಇಲ್ಲ. ಇತ್ತ ವಯಸ್ಸು ಮಾಗುತ್ತಿತ್ತು. ಜೀವ ಹಿಂಡುತ್ತಿತ್ತು. ತಮಗೆ ಮಕ್ಕಳಾಗಲ್ಲ ಅನ್ನ ಸತ್ಯ ಅರಿವಾದಾಗ ಉಳಿತಾಯ ಮಾಡಲು ಆರಂಭಿಸಿದ್ದಾರೆ. ತಮ್ಮ ಐಷಾರಾಮಿ ಜೀವನಕ್ಕೆ ತೆರೆ ಎಳೆದಿದ್ದಾರೆ. ಪ್ರತಿ ದಿನ 100 ರಿಂದ 200 ರೂಪಾಯಿ ಮಾತ್ರ ಖರ್ಚು. ಇನ್ನುಳಿದ ಹಣವನ್ನು ಉಳಿತಾಯ ಮಾಡಿದ್ದಾರೆ. ಪತಿ ಟೀಚರ್ ಆಗಿ ನಿವೃತ್ತಿಯಾದರೆ, ಪತ್ನಿ ವೈದ್ಯೆಯಾಗಿ ನಿವೃತ್ತಿಯಾಗಿದ್ದರು. ತಮಗೆ ಮಕ್ಕಳಿಲ್ಲದ ಕಾರಣ ಇತರ ಮಕ್ಕಳನ್ನು ನೋಡುವಾಗ ಅಕ್ಕರೆಯಾಗುತ್ತಿತ್ತು. ಇದೇ ವೇಳೆ ಮಕ್ಕಳ ಆರೋಗ್ಯ ಸಮಸ್ಯೆ ಕೇಳಿದಾಗ ಈ ಹಿರಿ ದಂಪತಿಗಳಿಗೆ ಕರಳು ಕಿವುಚಿ ಬರುತ್ತಿತ್ತು. ಹೀಗಾಗಿ ತಾವು ಉಳಿತಾಯ ಮಾಡಿದ 7 ಕೋಟಿ ರೂಪಾಯಿ ಹಣವನ್ನು ಹೃದಯ ಸಂಬಂಧಿ ಸೇರಿದಂತೆ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸರ್ಜರಿಗೆ ವಿನಿಯೋಗಿಸಲು ದಾನ ಮಾಡಿದ್ದಾರೆ. ಹೀಗೆ ಈ ದಂಪತಿ ದಾನ ಮಾಡಿದ ಹಣದಿಂದ ಜೈಲು ತಿಂಗಳಿಗೆ 455 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊಸ ಬದುಕಿಗೆ ನೆರವಾದ ಸಾರ್ಥಕ ಜೀವನ ಪಯಣ ಇದು.
ದಾನ ಮಾಡಿದ ಹಣದಲ್ಲಿ ಮಕ್ಕಳ ಬಾಳಿಗ ಬೆಳಕು
ಚೀನಾದ ಮಕ್ಕಳಿಲ್ಲದ ದಂಪತಿ ಹೆಸರು ಡು ಯಿಂಗ್ರಾಂಗ್ ಹಾಗೂ ಲು ಸುಯಿಂಗ್. ಟೀಚರ್ ಆಗಿದ್ದ ಡು ಯಿಂಗ್ರಾಂಗ್ 2018ನೇ ವಯಸ್ಸಿನಲ್ಲಿ ತಮ್ಮ 81ನೇ ವಯಸ್ಸಿಗೆ ನಿಧನರಾದರೆ, ಪತ್ನಿ ಲು ಸುಯಿಂಗ್ ಕಳೆದ ವರ್ಷ ತಮ್ಮ 92ನೇ ವಯಸ್ಸಿಗೆ ನಿಧನರಾಗಿದ್ದಾರೆ. ಇವರು ದಾನ ಮಾಡಿದ ಹಣದಲ್ಲಿ ಈ ತಿಂಗಳಲ್ಲ 455ನೇ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ.
ಆಸ್ಪತ್ರೆಗೆ ದಾನ ಮಾಡಿದ ಹಿರಿಯ ದಂಪತಿ
2018ರಲ್ಲಿ ಚೀನಾದ ಶಾಂಘೈನಲ್ಲಿರುವ ಕಾರ್ಡಿಯಾಕ್ ಆಸ್ಪತ್ರೆಗೆ ಒಟ್ಟು 7 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳ ಹೃದಯ ಸಂಬಂಧಿ ಚಿಕಿತ್ಸೆಗೆ ದಾನ ಮಾಡಿ ಅನ್ನೋ ಜಾಹೀರಾತು ನೋಡಿದ್ದರು. ತಮಗೆ ಮಕ್ಕಳಿಲ್ಲದ ಕಾರಣ ಇತರ ಮಕ್ಕಳಿಗೆ ಬೆಳಕಾಗಲು ಈ ಹಿರಿ ಜೀವಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ತಾವು ಮಾಡಿದ ಉಳಿತಾಯ ಎಲ್ಲಾ ಹಣವನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಇದೀಗ ಇವರು ದಾನ ಮಾಡಿ 455 ಮಕ್ಕಳ ಬದುಕಿಗೆ ವಿನಿಯೋಗವಾಗಿದೆ.
ಒಂದು ಊಟ ತಂದು ಇಬ್ಬರು ತಿನ್ನುತ್ತಿದ್ದರು
ಈ ದಂಪತಿಗಳು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಖರೀದಿಸುತ್ತಿದ್ದ ಆಹಾರವನ್ನು ಇಬ್ಬರು ಹಂಚಿಕೊಂಡು ತಿನ್ನುತ್ತಿದ್ದರು. ತಮ್ಮ ಹಣವನ್ನು ಯಾವುದೇ ರೀತಿಯಲ್ಲಿ ಪೋಲಾಗಲು ಬಿಡುತ್ತಿರಲಿಲ್ಲ. ಹೆಚ್ಚಿನ ಖರ್ಚು ವೆಚ್ಚ ಮಾಡುತ್ತಿರಲಿಲ್ಲ. ಪ್ರಯಾಣ ಇಲ್ಲ, ಬಹುತೇಕ ಕಡೆ ನಡೆದುಕೊಂಡೇ ಹೋಗುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಹಣ ಉಳಿತಾಯ ಮಾಡಿದ್ದಾರೆ. ತಮ್ಮ ಬರುತ್ತಿದ್ದ ಪಿಂಚಣಿ, ತಮ್ಮ ಆಸ್ತಿ, ಆದಾಯ ಎಲ್ಲವನ್ನೂ ಒಟ್ಟೂಗೂಡಿಸಿ 7 ಕೋಟಿ ಮಾಡಿ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಶಾಂಘೈ ಫೌಂಡೇಶನ್‌ನ ಸದಸ್ಯರಾಗಿ ಈ ದಂಪತಿಗಳನ್ನು ನೇಮಕ ಮಾಡಲಾಗಿತ್ತು. ಈ ವೇಳೆ ಹಲವು ಮೂಲಗಳಿಂದ ದೇಣಿಗೆ ರೂಪದಲ್ಲಿ ಹಣ ಸಂಗ್ರಹ ಮಾಡಿದ್ದಾರೆ.


