ಚಿಕೂನ್‌ಗುನ್ಯಾ ರೋಗಾಣುವಿನ ವಿರುದ್ಧ ಹೋರಾಡುವ ಅಣುಗಳನ್ನು ಪತ್ತೆ ಹಚ್ಚಿರುವುದಾಗಿ ಐಐಟಿ ರೂರ್ಕಿ ಸಂಶೋಧಕರು ಹೇಳಿ ಕೊಂಡಿದ್ದಾರೆ.
ನವದೆಹಲಿ: ಚಿಕೂನ್‌ಗುನ್ಯಾ ರೋಗಾಣುವಿನ ವಿರುದ್ಧ ಹೋರಾಡುವ ಅಣುಗಳನ್ನು ಪತ್ತೆ ಹಚ್ಚಿರುವುದಾಗಿ ಐಐಟಿ ರೂರ್ಕಿ ಸಂಶೋಧಕರು ಹೇಳಿ ಕೊಂಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚಿಕೂಗುನ್ಯಾ ತಡೆಗಟ್ಟಲು ಮಾರುಕಟ್ಟೆಯಲ್ಲಿ ಸದ್ಯ ಯಾವುದೇ ಲಸಿಕೆ ಇಲ್ಲ. ಬಯೋಟೆಕ್ನಾಲಜಿ ಇಲಾಖೆಯ ಶೆಲ್ಲಿ ತೋಮರ್ ನೇತೃತ್ವದ ಸಂಶೋಧನಾ ತಂಡ, ಚಿಕೂನ್‌ಗುನ್ಯಾ ವಿರುದ್ಧ ಹೋರಾಡುವ ಪೆಪ್-1 ಮತ್ತು ಪೆಪ್-2 ಎಂಬ ಅಣುಗಳನ್ನು ಸಂಶೋಧಿಸಿದೆ.
ಇವು ರೋಗಾಣುವನ್ನು ಪ್ರತಿಬಂಧಿಸುವಲ್ಲಿ ಶೇ.99ರಷ್ಟು ಸಫಲವಾಗಿವೆ. ಚಿಕೂನ್‌ಗುನ್ಯಾ ಭಾರತದ ಕೋಟ್ಯಂತರ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
