ಕೆಲವು ಖುಷಿ ಸಂದರ್ಭಗಳಲ್ಲಿ ಷಾಂಪೇನ್ ಬಳಸಿ, ಸಂಭ್ರಮಿಸುವುದಿದೆ. ಆಲ್ಕೋಹಾಲ್ ಅಂಶವಿರುವ ಇದು  ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲವೆಂಬುವುದು ಎಲ್ಲರಿಗೂ ಗೊತ್ತು. ಆದರೆ, ಹಿತ-ಮಿತ ಬಳಕೆಯಿಂದ ಆರೋಗ್ಯಕಾರಿ ಎಂಬುವುದು ಅನೇಕರಿಗೆ ಗೊತ್ತಿರದ ವಿಷಯ. ಇದನ್ನು ಆರೋಗ್ಯಕ್ಕೆ ಬಳಸಿದರೆ ಒಳಿತು.ಇದರ ವಿಶೇಷತೆಗಳೇನು ಗೊತ್ತಾ?

- ಶಾಂಪೇನ್ ಎಂಬುವುದು ಕಾರ್ಬೋನೇಟೆಡ್ ಮತ್ತು ಅಲ್ಕೋಹಾಲಿಕ್ ಸ್ಪಾರ್ಕಲ್ಲಿಂಗ್ ವೈನ್. 

- ನಾರ್ತ್‌ ಈಸ್ಟರ್ನ್ ಫ್ರಾನ್ಸ್‌ನಿಂದ ಬರುವ ಶಾಂಪೇನ್ನನ್ನು ದೇಶದ್ಯಾಂತ ಬಳಸುತ್ತಾರೆ. ಇದರಲ್ಲಿ ಬಹಳ ಕಡಿಮೆ ಕೊಬ್ಬು ಹಾಗೂ ಸಕ್ಕರೆ ಅಂಶ ಇದ್ದು, ದೇಹದ ತೂಕವನ್ನುನಿಯಂತ್ರಣದಲ್ಲಿಡುತ್ತದೆ.

- ಕೆಂಪು ಹಾಗೂ ಬಿಳಿ ದ್ರಾಕ್ಷಿಯಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್ ಅಂಶ ಶಾಂಪೇನ್‌ನಲ್ಲಿ ಅಧಿಕವಾಗಿದ್ದು, ಕೊಬ್ಬಿನಾಂಶವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

- ರಕ್ತ ಸಂಚಾರ ಸುಲಭಗೊಳಿಸಲು ಪ್ರಮುಖ ಪಾತ್ರವಹಿಸುವ ಇದು ಹೃದಯ ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಅಲ್ಲ, ಪಾರ್ಶ್ವವಾಯುವಿನಂಥ ಸಮಸ್ಯೆಗಳು ಬಾರದಂತೆ ತಡೆಯುತ್ತದೆ.

-ಸೌಂದರ್ಯ ವರ್ಧಕವನ್ನಾಗಿಯೂ ಬಳಸಬಹುದು. ತ್ವಚೆ ಹಾಗೂ ಕೇಶ ಆರೋಗ್ಯವನ್ನು ಕಾಪಾಡುವಲ್ಲಿ ಶಾಂಪೇನ್ ಮುಖ್ಯ ಪಾತ್ರ ವಹಿಸುತ್ತದೆ. ಮುಖದಲ್ಲಿರುವ ಎಣ್ಣೆ ಅಂಶವನ್ನು ಕಡಿಮೆ ಮಾಡಿ, ಮೊಡವೆಯನ್ನು ಕಡಿಮೆ ಮಾಡುತ್ತದೆ. ಇದು ತ್ವಚೆಯ ಕಾಂತಿ ಹೆಚ್ಚಾಗಲು ಸಹಕರಿಸುತ್ತದೆ. ಶಾಂಪೇನ್ ನಲ್ಲಿ ಅದ್ದಿದ ಹತ್ತಿಯಿಂದ ಮುಖವನ್ನು ಒರೆಸಿಕೊಂಡಲ್ಲಿ, ಕ್ಲಿನ್ಸಿಂಗ್ ಕ್ರೀಂನಂತೆ ಕಾರ್ಯನಿರ್ವಹಿಸಲಿದ್ದು, ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದನ್ನು ವಾರಕ್ಕೆರಡು ಬಾರಿ ಮಾಡಿದರೂ ಸಾಕು.

- ಜೊತೆಗೆ ಕೂದಲಿಗೆ ಬಳಸಿದರೆ ದಟ್ಟವಾಗಿ ಬೆಳೆಯುತ್ತದೆ. ಶಾಂಪೇನ್ ಅನ್ನು ಬೆಚ್ಚಗಿನ ನೀರಲ್ಲಿ ಸೇರಿಸಿ, ಸ್ನಾನದ ನಂತರ 10-15 ನಿಮಿಷ ಹಾಗೇ ಬಿಡಬೇಕು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಈ ವಿಧಾನವನ್ನು ತಿಂಗಳಿಗೆ ಒಂದು ಬಾರಿ ಮಾತ್ರ ಮಾಡಬೇಕು.