Asianet Suvarna News Asianet Suvarna News

ವೃಷಣದ ಮೇಲೆ ಮೂಡೋ ಮೊಡವೆಗೇನು ಕಾರಣ?

ಕೆಲವೊಂದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಬೀರೋ ಪರಿಣಾಮ ಅಷ್ಟಿಷ್ಟಲ್ಲ. ಅದರಲ್ಲಿಯೂ ಗುಪ್ತಾಂಗಗಳ ಬಗ್ಗೆ ತೋರುವ ಧೋರಣೆ, ಆಘಾತಕಾರಿ ಪರಿಣಾಮಗಳನ್ನು ಬೀರುತ್ತದೆ. ಈ ಅಂಗಗಳನ್ನು ಎಷ್ಟು ಸ್ವಚ್ಛವಾಗಿಟ್ಟುಕೊಂಡರೂ ಸಾಲದು. ಆದರೂ, ಮಡಿವಂತಿಕೆಯೋ, ಸೋಮಾರಿತನವೂ ಈ ಭಾಗವನ್ನು ಇಗ್ನೋರ್ ಮಾಡುವುದೇ ಹೆಚ್ಚು.

Cause of white spots on testicles
Author
Bengaluru, First Published Aug 21, 2018, 4:29 PM IST

ಗುಪ್ತಾಂಗ ಮಾತ್ರವಲ್ಲ, ಒಳ ಉಡುಪಿನ ಸ್ವಚ್ಛತೆಯೂ ಬಹಳ ಮುಖ್ಯ. ಇಲ್ಲದಿದ್ದರೆ ಸಣ್ಣ ಪುಟ್ಟ ಸಮಸ್ಯೆಗಳಿಂದ ಆರಂಭವಾಗುವ ಅನಾರೋಗ್ಯ, ಬೃಹದಾಕಾರವಾಗಿ ಬೆಳೆದು, ಗುಣ ಪಡಿಸಲಾಗದ ಹಂತಕ್ಕೆ ತಲುಪುತ್ತದೆ. ಹೇಳಿ ಕೊಳ್ಳಲೂ ಆಗದ, ಅನುಭವಿಸಲೂ ಸುಲಭವಲ್ಲದ ನೋವನ್ನು ಇದು ತರುತ್ತದೆ. ಇಂಥ ಸಮಸ್ಯೆಗಳಲ್ಲಿ ಗಂಡು ಮಕ್ಕಳು ಅನುಭವಿಸೋ ವೃಷಣದ ಮೇಲಿನ ಗುಳ್ಳೆಯೂ ಒಂದು. ಇದಕ್ಕೇನು ಕಾರಣ?

ವೈಟೆಡ್ಸ್

ಚರ್ಮದ ಕೆಳಗೆ ಸತ್ತ ಚರ್ಮಗಳು, ತೈಲಾಂಶ ಹಾಗೂ ಇತರೆ ಕೊಳಕಿದ್ದರೆ ವೈಟೆಡ್ಸ್ ಹುಟ್ಟಿಕೊಳ್ಳುತ್ತದೆ. ಇದು ವೃಷಣದಲ್ಲಿ ಉರಿ ತರಿಸುತ್ತದೆ. ಸಣ್ಣ ಗಾತ್ರದ ಗೆಡ್ಡೆಯಂತೆ ಭಾಸವಾಗುವ ಇದು ಉರಿಯನ್ನುಂಟು ಮಾಡುತ್ತದೆ. ಬೇರೆ ರೀತಿಯ ತೊಂದರೆ ಇಲ್ಲದಿದ್ದರೂ, ಕಿರಿ ಕಿರಿಯನ್ನಂತೂ ಉಂಟು ಮಾಡೋದು ಗ್ಯಾರಂಟಿ.

ಮಾಂಸಖಂಡದೊಳಗೆ ಬೆಳೆದ ಕೊದಲು

ದೇಹದಲ್ಲಿ ಕೂದಲು ಬೆಳೆಯುವ ಜಾಗದಲ್ಲಿ ಈ ಸಮಸ್ಯೆ ಕಾಣಿಸುತ್ತದೆ. ನವೆ, ತುರಿಕೆ ತರಿಸುವ ಈ ಜಾಗದಲ್ಲಿ ಗುಳ್ಳೆಯಾಗುತ್ತದೆ. ತಡೆಯಲಾರದ ನೋವಿದ್ದರೆ ಐಸ್ ಕ್ಯೂಬ್ ಇಟ್ಟುಕೊಳ್ಳಬೇಕು. ನೋವು ನಿವಾರಕ ಕ್ರೀಮ್ ಬಳಸಿ, ಗುಳ್ಳೆಗೆ ಸೂಕ್ತ ಮದ್ದು ಮಾಡಿಕೊಳ್ಳಬಹುದು.

ಫಾಲಿಕ್ಯುಲಿಸ್ 

ಕೂದಲು ಬೆಳೆಯುವ ಜಾಗಕ್ಕೆ ತಗಲು ಸೋಂಕಿನಿಂದ ಆ ಜಾಗದಲ್ಲಿ ಕೀವು ಸೃಷ್ಟಿಯಾಗುತ್ತದೆ. ಇದು ತರುವ ತುರಿಕೆ ಅಷ್ಟಿಷ್ಟಲ್ಲ. ಇದಕ್ಕೆ ಔಷಧಿಯ ಅಗತ್ಯವಿಲ್ಲದಿದ್ದರೂ, ಟೈಟ್ ಬಟ್ಟೆ ಧರಿಸಬಾರದು. ಆ ಜಾಗದಲ್ಲಿ ಶೇವ್ ಮಾಡಿಕೊಳ್ಳದಿದ್ದರೆ ಒಳ್ಳೆಯದು. 

ಜೆನೆಟಲ್ ವಾರ್ಟ್ಸ್

ಹೊಸದಾಗಿ ಬೆಳೆಯುವ ಚರ್ಮದಿಂದ ಗುಪ್ತಾಂಗಗಳ ಮೇಲೆ ಬಿಳಿ, ಕಂದು ಬಣ್ಣಗಳಲ್ಲಿ ಈ ಗುಳ್ಳೆ ಉಂಟಾಗುತ್ತದೆ. ತನ್ನಿತಾನೇ ಒಡೆದು ಹೋಗುತ್ತದೆ. ಇಲ್ಲದಿದ್ದರೆ ವೈದ್ಯರ ಸಲಹೆ ಪಡೆಯೋದು ಅಗತ್ಯ.

ಫೋರ್ಡಿಸ್ ಸ್ಪಾಟ್

ಇವು  ನೋಡಲು ಹಳದಿ-ಬಿಳಿ ಇದ್ದು, ದೇಹದ ಅಂಗಗಳಿಂದ ಹೊರ ಬರುವ ಎಣ್ಣೆಯಿಂದ ಈ ಸ್ಪಾಟ್ ಕಾಣಿಸಿಕೊಳ್ಳುತ್ತದೆ.  ಯಾವುದೇ ತೊಂದರೆಯೂ ಇದರಿಂದ ಇಲ್ಲ. ಆದರೂ, ಕಿರಿ ಕಿರಿ ಎನಿಸಿದರೆ ಸರ್ಜರಿ ಮಾಡಿಸಿಕೊಳ್ಳಬಹುದು.

ಸಿಫಿಲಿಸ್ 

ಗುಪ್ತಾಂಗದ ಸುತ್ತ ಮುತ್ತ ಕಾಣಿಸುವ ಬಿಳಿ ಹುಣ್ಣಿಗೆ ಸಿಫಿಲಿಸ್ ಎನ್ನುತ್ತಾರೆ. ಎಸ್‌ಟಿಡಿಯಂಥ ರೋಗ ಇದಾಗಿದ್ದು, ಸೋಂಕಿನಿಂದ ಇದು ಬರುತ್ತದೆ. ಸಣ್ಣದಾಗಿ ಆರಂಭವಾಗುವ ಈ ಸಮಸ್ಯೆ ತಲೆ ನೋವು ತರಬಹುದು. ಆರಂಭದಲ್ಲಿಯೇ ಗಮನಿಸಿದರೆ ಒಳಿತು.

Follow Us:
Download App:
  • android
  • ios