ಭಾರತದಲ್ಲಿ ಮಹಿಳೆಯರಿಗೆ ಹೆಚ್ಚು ಕ್ಯಾನ್ಸ್'ರ್, ಮೃತಪಡುವುದು ಹೆಚ್ಚು ಪುರುಷರು: ಸ್ತ್ರೀಯರ ದೀರ್ಘಾವಧಿ ಜೀವಿತಕ್ಕೆ ಇದೆ ಇಂಟರೆಸ್ಟಿಂಗ್ ಕಾರಣ

First Published 10, Jan 2018, 7:26 PM IST
Cancer hits more women in India than men but more men die of it
Highlights

2012ರಲ್ಲಿ  5.37 ಲಕ್ಷ ಮಹಿಳೆಯರಿಗೆ ಹಾಗೂ 4.77 ಲಕ್ಷ ಪುರುಷರಿಗೆ ಕ್ಯಾನ್ಸ್'ರ್ ಬಾಧಿಸಿತ್ತು. ಆದರೆ ಮೃತಪಟ್ಟವರಲ್ಲಿ  3.56 ಲಕ್ಷ ಪುರುಷರಿದ್ದರೆ 3.26 ಲಕ್ಷ ಮಾತ್ರ ಮಹಿಳೆಯರಿದ್ದರು.ಕ್ಯಾನ್ಸ್'ರ್ ಇದ್ದರೂ ಅದರಿಂದ ರಕ್ಷಿಸಿಕೊಳ್ಳುವ ಶಕ್ತಿ ಮಹಿಳೆಯರಿಗಿದೆ ಎಂದು ವರದಿ ಹೇಳಿತ್ತು.

2012ರಲ್ಲಿ  5.37 ಲಕ್ಷ ಮಹಿಳೆಯರಿಗೆ ಹಾಗೂ 4.77 ಲಕ್ಷ ಪುರುಷರಿಗೆ ಕ್ಯಾನ್ಸ್'ರ್ ಬಾಧಿಸಿತ್ತು. ಆದರೆ ಮೃತಪಟ್ಟವರಲ್ಲಿ  3.56 ಲಕ್ಷ ಪುರುಷರಿದ್ದರೆ 3.26 ಲಕ್ಷ ಮಾತ್ರ ಮಹಿಳೆಯರಿದ್ದರು.ಕ್ಯಾನ್ಸ್'ರ್ ಇದ್ದರೂ ಅದರಿಂದ ರಕ್ಷಿಸಿಕೊಳ್ಳುವ ಶಕ್ತಿ ಮಹಿಳೆಯರಿಗಿದೆ ಎಂದು ವರದಿ ಹೇಳಿತ್ತು.

ಭಾರತದಲ್ಲಿ ಮಹಿಳೆಯರಿಗೆ ಹೆಚ್ಚು ಕ್ಯಾನ್ಸ್'ರ್, ಮೃತಪಡುವುದು ಹೆಚ್ಚು ಪುರುಷರು: ಸ್ತ್ರೀಯರ ದೀರ್ಘಾವಧಿ ಜೀವಿತಕ್ಕೆ ಇದೆ ಇಂಟರೆಸ್ಟಿಂಗ್ ಕಾರಣ

ಭಾರತದಲ್ಲಿ ಪುರುಷರಿಗಿಂತ ಮಹಿಳೆಯರೆ ಹೆಚ್ಚು ಕ್ಯಾನ್ಸ್'ರ್'ಗೆ ತುತ್ತಾದರೂ ಸಾವೀಗೀಡಾವುದು ಮಾತ್ರ ಹೆಚ್ಚು ಪುರುಷರು. ವಿಶ್ವ ಆರೋಗ್ಯ ಸಂಸ್ಥೆ ಇತ್ತೀಗಷ್ಟೆ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆರೋಗ್ಯದ ಬಗ್ಗೆ ಬಿಡುಗಡೆ ಮಾಡಿದ ಅಂಕಿಅಂಶಗಳಲ್ಲಿ ಇದು ಬಯಲಾಗಿದೆ.

ಕ್ಯಾನ್ಸ್'ರ್'ಗೆ ತುತ್ತಾದರೂ ಮಹಿಳೆಯರು ಬದುಕಲು ಒಂದು ಇಂಟರೆಸ್ಟ್ಇಂಗ್ ಕಾರಣವಿದೆ. ಮಹಿಳೆಯರಲ್ಲಿರುವ   ಈಸ್ಟ್ರೋಜೆನ್ ಎಂಬ ಹಾರ್ಮೋನು.  ಯೋನಿಯ ಮೃದುಗೊಳಿಸುವಿಕೆ, ಯೋನಿ ಹಿಗ್ಗಿಸಲು, ರಕ್ತ ಪೂರೈಸಲು ಮತ್ತು ಸ್ತನ ಅಂಗಾಂಶದ ಬೆಳವಣಿಗೆಯನ್ನು ಸಹ ಪ್ರಚೋದಿಸುವ ಕೆಲಸ ಮಾಡುತ್ತದೆ. ಜೊತೆಗೆ ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆಗೆ ಮತ್ತು ಆರೋಗ್ಯವನ್ನು ಉತ್ತೇಜಿಸಿ ಹೃದಯರಕ್ತನಾಳದ ಕಾಯಿಲೆಗಳ ವಿರುದ್ಧ ಮಹಿಳೆಯರನ್ನು ರಕ್ಷಿಸುವುದರೊಂದಿಗೆ  ಕ್ಯಾನ್ಸ್'ರ್ ನಂಥ ರೋಗಾಣುಗಳನ್ನು ತಡೆಗಟ್ಟಿ ಅವರ ಜೀವಿತಾವಧಿಯನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ.

ದುಶ್ಚಟಗಳಿಂದಲೇ ಹೆಚ್ಚು ಪುರುಷರು ಬಲಿ

2012ರಲ್ಲಿ  5.37 ಲಕ್ಷ ಮಹಿಳೆಯರಿಗೆ ಹಾಗೂ 4.77 ಲಕ್ಷ ಪುರುಷರಿಗೆ ಕ್ಯಾನ್ಸ್'ರ್ ಬಾಧಿಸಿತ್ತು. ಆದರೆ ಮೃತಪಟ್ಟವರಲ್ಲಿ  3.56 ಲಕ್ಷ ಪುರುಷರಿದ್ದರೆ 3.26 ಲಕ್ಷ ಮಾತ್ರ ಮಹಿಳೆಯರಿದ್ದರು.ಕ್ಯಾನ್ಸ್'ರ್ ಇದ್ದರೂ ಅದರಿಂದ ರಕ್ಷಿಸಿಕೊಳ್ಳುವ ಶಕ್ತಿ ಮಹಿಳೆಯರಿಗಿದೆ ಎಂದು ವರದಿ ಹೇಳಿತ್ತು.

ಬಹುತೇಕವಾಗಿ ಮಹಿಳೆಯರನ್ನು ಬಾಧಿಸುವ ಕ್ಯಾನ್ಸ್'ರ್'ಗಳಲ್ಲಿ ಸ್ತನ ಕ್ಯಾನ್ಸ್'ರ್ ಪ್ರಮುಖವಾದುದು. ಗರ್ಭಕೋಶ, ತುಟಿ ಹಾಗೂ ಬಾಯಿ ಅನಂತರ ತೊಂದರೆಗೀಡುಮಾಡುವ ಕ್ಯಾನ್ಸ್'ರ್'ಗಳು. ಪ್ರಾರಂಭವಸ್ತೆಯಲ್ಲಿಯೇ ಚಿಕಿತ್ಸೆಗೆ ಒಳಗಾಗುವುದು ಹಾಗೂ ಮುಂಜಾಗ್ರತಾ ಕ್ರಮ ಅನುಸರಿಸುವುದರಿಂದ ಅವರಿಗೆ ಮರಣ ಪ್ರಮಾಣ ಕಡಿಮಡಯಿರುತ್ತದೆ.

ಆದರೆ ಪುರುಷರು ಈ ರೀತಿಯಿಲ್ಲ. ತಂಬಾಕು ಸೇವನೆ, ಮಾದಕದ್ರವ್ಯ ಮತ್ತು ಆಲ್ಕೊಹಾಲ್ ಬಳಕೆಯಂತಹ ಹೆಚ್ಚು ರೂಢಿಸಿಕೊಂಡಿರುತ್ತಾರೆ. ಈ ರೀತಿಯ ಜೀವನಶೈಲಿ ಅವರ ಪ್ರಾಣಕ್ಕೆ ಸಂಚು ತರುತ್ತದೆ. ಚಿಕಿತ್ಸೆಯ ವೇಳೆಯಲ್ಲೂ ಪುರುಷರು ಹೆಚ್ಚು ನಿರ್ಲ್ಯಕ್ಷ ವಹಿಸುತ್ತಾರೆ. ಸರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡುವುದಿಲ್ಲ. ಇವೆಲ್ಲ ಕಾರಣಗಳು ಅವರನ್ನು ಮರಣಶೆಯ್ಯಗೆ ಕೊಂಡೊಯ್ಯುತ್ತದೆ.

loader