ಅಬ್ಬಬ್ಬಾ..ಸಾಕಿದ ಮಾಲೀಕನ ದೇಹವನ್ನೇ ಕಿತ್ತು ಕಿತ್ತು ತಿಂದ 40 ಮೊಸಳೆಗಳು
ಪ್ರಾಣಿಗಳನ್ನು ಸಾಕುವುದು ಹಲವರ ಅಭ್ಯಾಸ. ಆದರೆ ಕೆಲವೊಮ್ಮೆ ಹೀಗೆ ಸಾಕಿದ ಪ್ರಾಣಿಗಳೇ ಕ್ರೂರವಾಗಿ ವರ್ತಿಸುತ್ತವೆ. ಹಾಗೆಯೇ ಕಾಂಬೋಡಿಯಾದಲ್ಲಿ 40ಕ್ಕೂ ಹೆಚ್ಚು ಮೊಸಳೆಗಳು ತಮ್ಮ ಮಾಲೀಕನನ್ನೇ ತಿಂದು ಹಾಕಿವೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಕಾಂಬೋಡಿಯಾ: ಕಾಂಬೋಡಿಯಾದಲ್ಲಿ ಓರ್ವ ವೃದ್ಧ ತಮ್ಮ ಫಾರ್ಮ್‌ನಲ್ಲಿ 40ಕ್ಕೂ ಹೆಚ್ಚು ಮೊಸಳೆಗಳನ್ನು ಸಾಕಿದ್ದಾನೆ. ಈ ವೇಳೆ ಮೊಟ್ಟೆಇಟ್ಟಿದ್ದ ಒಂದು ಮೊಸಳೆಯನ್ನು ಪಂಜರದಿಂದ ಸರಿಸಲು ವೃದ್ಧ ಕೋಲು ಹಿಡಿದು ಪ್ರಯತ್ನಿಸಿದ್ದಾನೆ. ಈ ವೇಳೆ ಆ ಮೊಸಳೆಯು ವೃದ್ಧನನ್ನು ನೀರಿನ ಹೊಂಡದಲ್ಲಿ ಕೆಡವಿಕೊಂಡಿದೆ. ಬಳಿಕ ಅಲ್ಲಿದ್ದ ಬಾಕಿ 40 ಮೊಸಳೆಗಳು ವೃದ್ಧನನ್ನು ಸಂಪೂರ್ಣವಾಗಿ ತಿಂದು ತೇಗಿವೆ. ಕಚ್ಚಿ ಬಿಟ್ಟಿರುವ ಕೆಲವೇ ದೇಹದ ತುಂಡುಗಳು ಪತ್ತೆಯಾಗಿದ್ದು ತಾನೇ ಸಾಕುತ್ತಿದ್ದ ಮೊಸಳೆಗಳಿಂದ ವೃದ್ಧ ಇಹಲೋಕ ತ್ಯಜಿಸಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ
ಮೊಟ್ಟೆ ಇರಿಸಿದ್ದ ಮೊಸಳೆ (Crocodile) ಯನ್ನು ಹೊರಗೆ ಕಳುಹಿಸಲು ವೃದ್ಧ ಲುವಾನ್ ನಾಮ್ ಕೋಲಿನಿಂದ ಬೆದರಿಸುತ್ತಿದ್ದ. ಈ ವೇಳೆ ಮೊಸಳೆ ಕೋಲನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಎಳೆದಿದೆ. ವೃದ್ಧ (Older men) ಕೋಲಿನ ಸಮೇತ ಮೊಸಳೆಗಳ ಇರುವಲ್ಲಿ ಬಿದ್ದಿದ್ದಾರೆ. ವೃದ್ಧನನ್ನು ಕೊಂದು ಮೊಸಳೆಗಳು ತಿಂದು ಹಾಕಿವೆ. 40 ಮೊಸಳೆಗಳು ದಾಳಿ ಮಾಡಿ ವೃದ್ಧನ ದೇಹ (Body)ವನ್ನು ತುಂಡು-ತುಂಡಾಗಿ ಕಿತ್ತು ತಿಂದಿವೆ.
ಅಲ್ಕೋಹಾಲ್‌ಗೆ ಮೊಸಳೆ ರಕ್ತ ಸೇರಿಸಿ ಕುಡಿಯೋ ಉದ್ಯಮಿ, ದೇಹ ಫಿಟ್ ಆಗಿಡೋ ಟಾನಿಕ್ ಅಂತೆ!
ಲುವಾನ್ ಆಮ್ ಅವರ ಬಳಿ ಮೊಸಳೆ ಸಾಕಾಣಿಕೆ ಕೆಲಸವನ್ನು ಬಿಟ್ಟುಬಿಡುವಂತೆ ಕುಟುಂಬ ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿತ್ತು. ಆದರೆ ಲುವಾನ್ ಅದನ್ನು ಒಪ್ಪಿರಲಿಲ್ಲ. ಈಗ ಲುವಾನ್ ಅವರೇ ಮೊಸಳೆಗಳಿಗೆ ಬಲಿಯಾದ ಕಾರಣ ತಮ್ಮಲ್ಲಿನ ಎಲ್ಲ ಮೊಸಳೆಗಳನ್ನು ಮಾರಾಟ (Sale) ಮಾಡಲು ಕುಟುಂಬ ಮುಂದಾಗಿದೆ. ಅಂಕೋರ್ ವಾಟ್‌ನ ಪ್ರಸಿದ್ಧ ಅವಶೇಷಗಳ ಹೆಬ್ಬಾಗಿಲು ಸಿಯೆಮ್ ರೀಪ್ ಸುತ್ತಲೂ ಹಲವಾರು ಮೊಸಳೆ ಸಾಕಣೆ ಕೇಂದ್ರಗಳಿವೆ. ಮೊಸಳೆಗಳನ್ನು ಅವುಗಳ ಮೊಟ್ಟೆ, ಚರ್ಮ ಮತ್ತು ಮಾಂಸಕ್ಕಾಗಿ ಮತ್ತು ಅವುಗಳ ಮರಿಗಳ ವ್ಯಾಪಾರಕ್ಕಾಗಿ ಇರಿಸಲಾಗುತ್ತದೆ.
ಮೊಸಳೆಗೆ ಕೈಯಲ್ಲಿ ಆಹಾರ ತಿನ್ನಿಸಿದ ವ್ಯಕ್ತಿ, ಭಯಾನಕ ವಿಡಿಯೋ ವೈರಲ್
ನೀರಲ್ಲೂ ನೆಲದಲ್ಲೂ ಎರಡೂ ಕಡೆಯೂ ವಾಸಿಸುವ ಪರಭಕ್ಷಕ ಪ್ರಾಣಿ ಮೊಸಳೆ ಅತ್ಯಂತ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ಆಹಾರಕ್ಕಾಗಿ ಇತರ ಪ್ರಾಣಿಗಳ ಮೇಲೆ ಉಪಾಯವಾಗಿ ದಾಳಿ ಮಾಡುವ ಮೊಸಳೆಯನ್ನು ನೋಡಿ ಕಾಲಿಗೆ ಬುದ್ಧಿ ಹೇಳುವವರೇ ಹೆಚ್ಚು. ಮೊಸಳೆಯನ್ನು ನೋಡಿ ಯಾರೂ ಮುದ್ದು ಮಾಡಲು ಹೋಗುವುದಿಲ್ಲ. ಆದರೆ ಇಲ್ಲೊಂದು ಕಡೆ ಜೋಡಿಯೊಂದು ಮೊಸಳೆಗೆ ಕೈಯಲ್ಲಿ ಆಹಾರ ನೀಡುತ್ತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಭಯ ಆತಂಕದ ಜೊತೆ ಅಚ್ಚರಿ ಮೂಡಿಸಿದೆ. ಈ ವಿಡಿಯೋವನ್ನು onlyinfloridaa ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವಿಡಿಯೋ ನೋಡಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಹಾರುತ್ತಿದ್ದ ಡ್ರೋಣ್ ಹಿಡಿಯಲು ನೀರಿನಿಂದ ನೆಗೆದ ಮೊಸಳೆ: ಅಪರೂಪದ ವಿಡಿಯೋ ನೋಡಿ
ಹೀಗೆ ಮೊಸಳೆಗೆ ಬರಿಗೈಯಲ್ಲಿ ಆಹಾರ ತಿನ್ನಿಸುತ್ತಿರುವ ವ್ಯಕ್ತಿಯ ಅಮೆರಿಕಾದ (US) ಫ್ಲೋರಿಡಾ ನಿವಾಸಿಯಾಗಿದ್ದು, ಆತ ಹಾಗೂ ಇನ್ನೊಬ್ಬಳು ಮಹಿಳೆ ಜೊತೆಯಾಗಿ ನೀರಲ್ಲಿ ಕುಳಿತುಕೊಂಡು ಮೊಸಳೆಗೆ ಕೈಯಲ್ಲಿ ಸ್ಯಾಂಡ್‌ವಿಚ್ ತಿನ್ನಿಸುತ್ತಿದ್ದಾರೆ.ಈ ಜೋಡಿಯ ಸಾಹಸ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಸಾಮಾನ್ಯವಾಗಿ ಮೊಸಳೆಗಳು ಭಯ ಹುಟ್ಟಿಸುವ ಪ್ರಾಣಿಗಳು ಅವುಗಳ ಬಲವಾದ ದವಡೆ ಹಾಗೂ ಹಲ್ಲುಗಳು ಮನುಷ್ಯನನ್ನು ಕ್ಷಣದಲ್ಲಿ ತುಂಡು ಮಾಡಬಲ್ಲವು, ಜೊತೆಗೆ ಸಾವಿನ ಮನೆ ಸೇರಿಸಬಲ್ಲವು. ಹೀಗಿದ್ದೂ ವಿದೇಶಗಳಲ್ಲಿ ಕೆಲವರು ಅದರೊಂದಿಗೆ ಉತ್ತಮ ಓಡನಾಟ ನಡೆಸಲು ಬಯಸುತ್ತಾರೆ. ಅದರಂತೆ ಇಲ್ಲಿ ಜೋಡಿಯೊಂದು ಸ್ವಲ್ಪವೂ ಹೆದರದೇ ಮೊಸಳೆಗೆ ಆಹಾರ ನೀಡಿದ್ದಾರೆ. ಹಾಗೆಯೇ ಯಾವಾಗಲೂ ದಾಳಿ ಮಾಡುವ ಕಾರಣಕ್ಕೆ ಹೆಸರಾಗಿರುವ ಮೊಸಳೆ ಇಲ್ಲಿ ಮಾತ್ರ ಸುಮ್ಮನಿದ್ದು, ಅಚ್ಚರಿ ಮೂಡಿಸಿದೆ.