ಮದ್ವೆ ಮಂಟಪದಲ್ಲೇ ವಧು-ವರರ ಗನ್ ಸ್ಟಂಟ್, ಕ್ಷಣದಲ್ಲೇ ಎಂಥಾ ಅನಾಹುತವಾಯ್ತು ನೋಡಿ!
ಮದ್ವೆ ದಿನ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿರಲಿ ಅಂತ ಕೇಕ್ ಕಟ್ಟಿಂಗ್, ಸ್ಪೆಷಲ್ ಲೈಟ್ಸ್, ಪೋಟೋಶೂಟ್ ಅರೇಂಜ್ ಮಾಡುವುದು ಇತ್ತೀಚಿಗೆ ಕಾಮನ್ ಆಗಿದೆ. ಹಾಗೆಯೇ ಇಲ್ಲೊಂದು ಜೋಡಿ ಮದ್ವೆ ಮಂಟಪದಲ್ಲೇ ಗನ್ ಸ್ಟಂಟ್ ಇಟ್ಕೊಂಡಿದ್ರು. ಆದ್ರೆ ಅದ್ರಿಂದ ಎಂಥಾ ಅನಾಹುತ ಆಗೋಗಿದೆ ನೋಡಿ.
ಮದುವೆ ಅನ್ನೋದು ಒಂದು ಸುಂದರವಾದ ಸಂಬಂಧ. ಗಂಡು-ಹೆಣ್ಣನ್ನು ಒಂದುಗೂಡಿಸುವ ಪವಿತ್ರ ಬಂಧನ. ಕಷ್ಟಾನೂ ಸುಖಾನೋ ಇಬ್ಬರು ಜೀವನಪೂರ್ತಿ ಜೊತೆಯಾಗಿ ಸಾಗುವ ನಿರ್ಧಾರ ಮಾಡುತ್ತಾರೆ. ಗಂಡು-ಹೆಣ್ಣು ಇಬ್ಬರ ಜೀವನ ಆರಂಭವಾಗುವುದರ ಜೊತೆಗೆ ಎರಡು ಕುಟುಂಬಗಳು ಬೆರೆಯುತ್ತವೆ. ಮದುವೆಯನ್ನು ವಿಶೇಷವಾಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಸ್ಪೆಷಲ್ ಡೆಕೊರೇಶನ್, ಸಾಂಗ್ಸ್, ಡ್ರೆಸ್, ಪಾರ್ಟಿ ಎಲ್ಲವನ್ನೂ ಆರೇಂಜ್ ಮಾಡಿಕೊಳ್ತಾರೆ. ವೆಡ್ಡಿಂಗ್ ಡೇ ಎಂಬುದು ಎಲ್ಲರ ಪಾಲಿಗೆ ಜೀವನದಲ್ಲೇ ದಿ ಬಿಗ್ ಡೇ. ಹೀಗಾಗಿಯೇ ಈ ದಿನ ಯಾವಾಗ್ಲೂ ಮೆಮೊರೆಬಲ್ ಆಗಿರಬೇಕೆಂದು ಫೋಟೋ, ವೀಡಿಯೋ ಮಾಡಿಕೊಳ್ತಾರೆ. ಮಾತ್ರವಲ್ಲ ಮದುವೆ ದಿನವನ್ನು ವಿಶೇಷವಾಗಿಸಲು ಸ್ಪೆಷಲ್ ಥೀಮ್, ಕಾನ್ಸೆಪ್ಟ್‌ಗಳನ್ನು ಇಟ್ಟುಕೊಳ್ತಾರೆ.
ಆದರೆ ಹೀಗೆ ಸ್ಪೆಷಲ್ ಆರೇಂಜ್‌ಮೆಂಟ್ಸ್ ಕೆಲವೊಮ್ಮೆ ಎಲ್ಲರಿಗೂ ಖುಷಿ ನೀಡಿದರೆ, ಇನ್ನು ಕೆಲವೊಮ್ಮೆ ಇಂಥಾ ಎಕ್ಸಪರಿಮೆಂಟ್‌ಗಳಿಂದ ಎಡವಟ್ಟು ಆಗೋದು ಇದೆ. ಮಹಾರಾಷ್ಟ್ರದ ಮದುವೆಯೊಂದರಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದೆ. ವಧು-ವರರು ಕೈಯಲ್ಲಿ ಸ್ಪಾರ್ಕ್ಲಿಂಗ್ ಬಂದೂಕು ಹಿಡಿದು ಫೋಟೋಗೆ ಫೋಸ್ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಯಾರೂ ನಿರೀಕ್ಷಿಸಿರದ ಅನಾಹುತ ನಡೆದು ಹೋಗಿದೆ.
ಮದುವೆಯ ಖರ್ಚು ಹೆಚ್ಚಾಯ್ತು ಅಂತ ಅತಿಥಿಗಳಿಗೆ ನೀರು ಮಾತ್ರ ನೀಡಲು ನಿರ್ಧರಿಸಿದ ವಧು!
ಸ್ಪೋಟಗೊಂಡು ವಧುವಿನ ಮುಖಕ್ಕೆ ಸಿಡಿದ ಗನ್
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಅದಿತಿ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 13 ಸೆಕೆಂಡುಗಳ ಕ್ಲಿಪ್‌ನಲ್ಲಿ, ವಧು ಮತ್ತು ವರರು (Bride-bridegroom) ವೇದಿಕೆಯ ಮೇಲೆ ಪೋಸ್ ನೀಡುವುದನ್ನು ಕಾಣಬಹುದು. ದಂಪತಿಯ (Couple) ಕೈಯಲ್ಲಿ ಬಂದೂಕು (Gun)ಗಳಿದ್ದವು. ಅವರು ಗುಂಡು ಹಾರಿಸಿದ ತಕ್ಷಣ, ಒಂದು ಬಂದೂಕು ಸ್ಫೋಟಗೊಂಡು ವಧುವಿನ ಮುಖಕ್ಕೆ ಬಡಿಯಿತು. ಎಲ್ಲರೂ ಅವಳನ್ನು ಉಳಿಸಲು ಹರಸಾಹಸ ಪಡುತ್ತಿದ್ದಂತೆ ಅವಳು ಬೇಗನೆ ಬಂದೂಕನ್ನು ಕೈಬಿಟ್ಟಳು. ಸ್ಥಳದಲ್ಲಿರುವ ಜನರು ಘಟನೆಯಿಂದ ಗಾಬರಿಗೊಂಡಿರುವುದನ್ನು ನೋಡಬಹುದು.
ವೈರಲ್ ಆಗಿರುವ ವೀಡಿಯೋಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಜನರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ (Comment). 'ಇತ್ತೀಚಿನ ದಿನಗಳಲ್ಲಿ ಜನರು ಯಾಕೆ ಹೀಗೆ ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಬಹುತೇಕರು ಮದುವೆಯ (Marriage) ದಿನಗಳನ್ನು ಪಾರ್ಟಿಗಳಂತೆ ಪರಿಗಣಿಸುತ್ತಿದ್ದಾರೆ. ಚಿತ್ರ-ವಿಚಿತ್ರ ಆಕ್ಟಿವಿಟೀಸ್‌ಗಳಿಂದ ಅವರು ತಮ್ಮ ಜೀವನದ (life) ಪರಿಪೂರ್ಣ ದಿನವನ್ನು ಹಾಳುಮಾಡುತ್ತಾರೆ' ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. 'ವೀಡಿಯೋ ನೋಡಿ ಭಯವಾಯಿತು' ಎಂದು ಇನ್ನೊಬ್ಬರು ಹೇಳಿದ್ದಾರೆ. ಇನ್ನೊಬ್ಬರು 'ಜನರು ವೈರಲ್ ಆಗಲು ಹೀಗೆಲ್ಲಾ ಮಾಡುತ್ತಾರೆ' ಎಂದು ಕಾಮೆಂಟಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ 'ವಧುವಿನ ಸ್ಥಿತಿ ಏನಾಯಿತು' ಎಂದು ಪ್ರಶ್ನಿಸಿದ್ದಾರೆ.
ತಂಗಿ ಅದ್ಧೂರಿ ಮದುವೆ, ವೇದಿಕೆಯಲ್ಲೇ 8 ಕೋಟಿ ರೂಪಾಯಿ ವರದಕ್ಷಿಣೆ ನೀಡಿದ ಸಹದೋರರು!
ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:
ಮಂಟಪದಲ್ಲಿ ದಾಂಧಲೆ ಮಾಡಿದ ವಾನರ, ವಧು-ವರರಿಗೆ ಗಾಬರಿ
ಆಂಧ್ರಪ್ರದೇಶದಲ್ಲಿ ನಡೆದ ಮದುವೆ (Marriage)ಯೊಂದರಲ್ಲಿ ಶಾಸ್ತ್ರಗಳಿಗೆ ಅಡ್ಡಿಯಾಗಿದ್ದು ಸ್ನೇಹಿತರು, ಸಂಬಂಧಿಕರು ಯಾರೂ ಅಲ್ಲ. ಬದಲಿಗೆ ಒಂದು ಕಪಿ (Monkey). ಹೌದು ಅಚ್ಚರಿ ಅನಿಸಿದರೂ ಇದು ನಿಜ. ಮಂಟಪದಲ್ಲಿ ಮದುವೆ ಶಾಸ್ತ್ರ ನಡೆಯುತ್ತಿರುವಾಗ ಕೋತಿಯೊಂದು ವರ ಮತ್ತು ವಧುವಿನ ತಲೆಯ ಮೇಲೆ ಹಾರಿ ಹೋಗಿದೆ. ಎಲ್ಲಿಂದಲೋ ಎಂಟ್ರಿ ಕೊಟ್ಟ ಕೋತಿ ಮದುವೆಯ ಸಂಭ್ರಮವನ್ನೇ ಹಾಳು ಮಾಡಿದೆ. ಸದ್ಯ ಕಪಿಚೇಷ್ಟೆಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗ್ತಿದೆ.