ಚಪಾತಿ – ಬ್ರೆಡ್ : ಯಾವುದು ತೂಕ ಇಳಿಸಲು ಬೆಸ್ಟ್..!

life | Friday, February 2nd, 2018
Suvarna Web Desk
Highlights

ಇಂದಿನ ಫಾಸ್ಟ್ ಯುಗದಲ್ಲಿ ಯಾರಿಗೂ ಅಡುಗೆ ಮಾಡಿ ತಿನ್ನುವಷ್ಟು ಪುರುಸೋತ್ತಿಲ್ಲ. ಆದ್ದರಿಂದ ಸುಲಭವಾಗಿ ಸಿಗುವ ಹಾರಕ್ಕೆ ಎಲ್ಲರೂ ಗಮನ ನೀಡ್ತಾರೆ.  ಅದರಲ್ಲಿ ಬ್ರೆಡ್ ಕೂಡ ಒಂದಾಗಿದೆ. ಆದರೆ ಬ್ರೆಡ್ ಎನ್ನೋದು ಆರೋಗ್ಯದ ದೃಷ್ಟಿಯಿಂದ, ತೂಕ ಇಳಿಸಿಕೊಳ್ಳಬಯಸುವವರಿಗೆ ಒಳ್ಳೆಯದಲ್ಲ ಎನ್ನುವುದು ನ್ಯೂಟ್ರಿಶಿಯನ್ಸ್ ಸಲಹೆ.

ಬೆಂಗಳೂರು : ಇಂದಿನ ಫಾಸ್ಟ್ ಯುಗದಲ್ಲಿ ಯಾರಿಗೂ ಅಡುಗೆ ಮಾಡಿ ತಿನ್ನುವಷ್ಟು ಪುರುಸೋತ್ತಿಲ್ಲ. ಆದ್ದರಿಂದ ಸುಲಭವಾಗಿ ಸಿಗುವ ಹಾರಕ್ಕೆ ಎಲ್ಲರೂ ಗಮನ ನೀಡ್ತಾರೆ.  ಅದರಲ್ಲಿ ಬ್ರೆಡ್ ಕೂಡ ಒಂದಾಗಿದೆ. ಆದರೆ ಬ್ರೆಡ್ ಎನ್ನೋದು ಆರೋಗ್ಯದ ದೃಷ್ಟಿಯಿಂದ, ತೂಕ ಇಳಿಸಿಕೊಳ್ಳಬಯಸುವವರಿಗೆ ಒಳ್ಳೆಯದಲ್ಲ ಎನ್ನುವುದು ನ್ಯೂಟ್ರಿಶಿಯನ್ಸ್ ಸಲಹೆ. ಇನ್ನು ಅದರಲ್ಲಿ ಬ್ರೆಡ್ ಇನ್ನೊಂದು ರೂಪವಾದ ರೋಟಿಗೆ ಹೋಲಿಕೆ ಮಾಡಿ ನೋಡಿದಾಗ ರೋಟಿಯೇ ಬೆಸ್ಟ್ ಎನ್ನೋದು ಅವರ ಅಭಿಪ್ರಾಯ.

ಅದರಂತೆ ಬಿಳಿ ಬ್ರೆಡ್’ಗಿಂತಲೂ ರೋಟಿಯೇ ಉತ್ತಮವಾಗಿದೆ. ಆದರೆ ಬ್ರೆಡ್ ಎನ್ನುವುದು ಹೆಚ್ಚು ಸುಲಭವಾಗಿ ಸಿಗುವಂತಹ ಆಹಾರವಾಗಿದೆ. ಆದರೆ ರೋಟಿಯನ್ನು ಮಾಡುವುದು ಸ್ವಲ್ಪ ಕಷ್ಟಕರವಾದ ವಿಧಾನವಾಗಿದ್ದರೂ ದೇಹಾರೋಗ್ಯಕ್ಕೆ ಸೂಕ್ತ.

ಆದರೆ ಆರೋಗ್ಯದ ವಿಚಾರಕ್ಕೆ ಬಂದಾಗ ಬ್ರೆಡ್’ಗಿಂತ ರೋಟಿ ತಿನ್ನುವುದು ಉತ್ತಮವಾಗಿರುತ್ತದೆ.  ಆದರೆ ಇಂದಿನ ದಿನಗಳಲ್ಲಿ  ವೈಟ್ ಬ್ರೆಡ್ ಬದಲಿಗೆ ಇನ್ನೂ ಅನೇಕ ರೀತಿಯಾದ ಬ್ರೆಡ್’ಗಳು ಲಭ್ಯವಿದೆ. ಅದರಲ್ಲಿ ಹೆಚ್ಚು ಧಾನ್ಯಗಳನ್ನು ಬಳಸಿ ಮಾಡಿರುವಂತದ್ದು ಹಾಗೂ ಬ್ರೌನ್ ಬ್ರೆಡ್’ನಂತ ಆಪ್ಷನ್’ಗಳಿವೆ.

ಬ್ರೆಡ್ ಎಂದರೇನು..?

ಬ್ರೆಡ್ ತಯಾರಿಸಲು ಬೇಕಾಗಿರುವು 2 ವಸ್ತುಗಳು. ನೀರು ಮತ್ತು ಹಿಟ್ಟು. ಅಲ್ಲದೇ ಅದಕ್ಕೆ ಕೆಲವು ಕನಿಷ್ಟ ಸಾಮಾಗ್ರಿಗಳನ್ನು ಬಳಸಿ ಅದನ್ನು ಬೇಕ್ ಮಾಡಲಾಗುತ್ತದೆ. ಇಂದು ಯಾವ ನ್ಯೂಟ್ರಿಶಿಯನ್’ಗಳೂ ಕೂಡ ಬ್ರೆಡ್ ತಿನ್ನಲು ಸೂಚಿಸುವುದಿಲ್ಲ. ಹಿಟ್ಟಿನಲ್ಲಿ ಯಾವುದೇ ಆರೋಗ್ಯಕ್ಕೆ ಉತ್ತಮವಾದ ಅಂಶಗಳು ಇರದ ಕಾರಣ ಆರೋಗ್ಯಕ್ಕೆ ಮಾರಕವಾಗಿರುತ್ತದೆ. ಜೀರ್ಣಪ್ರಕ್ರಿಯೆಗೂ ಕೂಡ ಹಾನಿಕಾರಕ.

ರೋಟಿ ತಿನ್ನಲು ಸೂಚಿಸುವ ನ್ಯೂಟ್ರಿಶಯನ್’ಗಳು

ನ್ಯೂಟ್ರಿಶಯನ್’ಗಳು  ರೋಟಿ ಸೇವನೆಗೆ ಸೂಚಿಸುತ್ತಾರೆ.  ಕಾರಣ ಇದರ ತಯಾರಿಸುವಾದ ಧಾನ್ಯಗಳ ಮೇಲಿನ ಪದರವನ್ನು ತೆಗೆದ ಹಿಟ್ಟನ್ನು ಉಪಯೋಗಿಸುವುದಿಲ್ಲ. ಇದರಲ್ಲಿ ಈಸ್ಟ್ ಅಂಶವು ಅಡಕವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆಗೂ ಕೂಡ  ಅನುಕೂಲವಾಗಿರುತ್ತದೆ.ಇನ್ನು ರೋಟಿಯನ್ನು ಮನೆಯಲ್ಲಿ ತಯಾರಿಸುವುದರಿಂದ ಶುಚಿ ರುಚಿಯೂ ಕೂಡ ಇದರಲ್ಲಿರುತ್ತದೆ.

ರೋಟಿ ಎನ್ನುವುದು ಬೆಸ್ಟ್ ಆಫ್ಷನ್

ಆಹಾರದಲ್ಲಿ ರೋಟಿ ಎನ್ನುವುದು ಬ್ರೆಡ್’ಗಿಂತ ಬೆಸ್ಟ್ ಆಪ್ಷನ್ ಆಗಿದೆ. ಆದರೆ ಇದು ಸಂಪೂರ್ಣ ಆಹಾರವಾಗಲಾರದು. ಕೇವಲ ರೋಟಿ ಸೇವನೆ  ಮಾಡದೇ ಅದರೊಂದಿಗೆ ತುಪ್ಪ,  ಚಿಕನ್, ತರಕಾರಿ ಸೇವನೆಯು ಉತ್ತಮವಾಗಿರುತ್ತದೆ. ಈಗ ರೋಟಿಯೋ – ಬ್ರೆಡ್ಡೋ ಎನ್ನುವುದನ್ನು  ನೀವೇ ತೀರ್ಮಾನ ಮಾಡಿ.

Comments 0
Add Comment

  Related Posts

  Summer Tips

  video | Friday, April 13th, 2018

  Benifit Of Hibiscus

  video | Thursday, April 12th, 2018

  Health Benifit Of Hibiscus

  video | Thursday, April 12th, 2018

  Skin Care In Summer

  video | Saturday, April 7th, 2018

  Summer Tips

  video | Friday, April 13th, 2018
  Suvarna Web Desk