ಕಿಯಾರ ಫಿಟ್‌ನೆಸ್ ರಹಸ್ಯ

First Published 3, Dec 2018, 1:14 PM IST
Bollywood Kiara Advani fitness secret
Highlights

ಕಿಯಾರ ಅದ್ವಾನಿ ಒಂದು ಆ್ಯಗಲ್‌ನಿಂದ ಮಾಧುರಿ ದೀಕ್ಷಿತ್‌ಳಂತೆ ಕಾಣ್ತಾರೆ. ಎಂ.ಎಸ್ ಧೋನಿ ಸಿನಿಮಾದಲ್ಲಿ ಧೋನಿ ಪತ್ನಿ ಸಾಕ್ಷಿಯ ಪಾತ್ರ ಮಾಡಿರೋ ಈ ಹುಡುಗಿಗೀಗ 26ರ ಹರೆಯ. ಸೀಫುಡ್ ಅಂದರೆ ಬಾಯಲ್ಲಿ ನೀರು ಬರಿಸಿಕೊಳ್ಳೋ ಕಿಯಾರ ಫಿಟ್‌ನೆಸ್ ಬಗ್ಗೆ ಸಖತ್ ಕಾನ್ಶಿಯರ್ ಆಗಿರುತ್ತಾರೆ.

ಮೀನಿಲ್ದೇ ಡಿನ್ನರ್ ಇಲ್ಲ!
ಸಮುದ್ರದ ಜಲಚರಗಳನ್ನು ಸ್ವಾಹಾ ಮಾಡಲು ತುದಿಗಾಲಲ್ಲಿ ನಿಲ್ಲೋ ಈ ಸಣಕಲು ಹುಡುಗಿಗೆ ರಾತ್ರಿಯೂಟಕ್ಕೆ ಮೀನಿಲ್ಲ ಅಂದರೆ ಸಮಾಧಾನ ಇರಲ್ಲ. ಇದು ಬಿಟ್ಟರೆ ವರ್ಕೌಟ್‌ಗೂ ಮೊದಲು ತಿನ್ನುವ ಹಣ್ಣು, ನಟ್ಸ್ ಅಂದರೆ ಇಷ್ಟವಂತೆ. ನಿಂಬೆರಸ ಬೆರೆಸಿದ ಬಿಸಿನೀರು ಇವರ ಮೊದಲ ದ್ರವಾಹಾರ. ಬೆಳಗಿನ ಉಪಹಾರಕ್ಕೆ ಒಂದು ಬೌಲ್ ಓಟ್ಸ್, ಆ್ಯಪಲ್, ಬೆರ‌್ರಿ ಹಣ್ಣುಗಳು. ಮಧ್ಯಾಹ್ನಕ್ಕೆ ಮನೆ ಊಟ. ರೋಟಿ ಮತ್ತು ತರಕಾರಿ. ರಾತ್ರಿ ಊಟಕ್ಕೆ ಮಾತ್ರ ಸಾಲ್ಮನ್ ಅಥವಾ ಯಾವುದೇ ಮೀನಿದ್ದರೂ ಓಕೆ. ಬಟ್ ಅದಿಲ್ಲ ಅಂದರೆ ಊಟನೂ ಇಲ್ಲ. ಉಳಿದಂತೆ ಇಡೀ ದಿನ ಯಾವುದಾದ್ರೂ ನಟ್ಸ್ ಬಾಯಿಗೆ ಹಾಕ್ಕೊಂಡು ಜಗೀತಾ ಇರುತ್ತಾರೆ. 

 

 
 
 
 
 
 
 
 
 
 
 
 
 

Monday #JustHanging

A post shared by KIARA (@kiaraaliaadvani) on


ವರ್ಕೌಟ್ ಬಗ್ಗೆ ಉದಾಸೀನ ಇಲ್ಲ
ದಿನದ ಒಂದು ಗಂಟೆಯನ್ನು ಕಿಯಾರ ವರ್ಕೌಟ್‌ಗೆ ಮೀಸಲಿಡುತ್ತಾರೆ. ಕಾರ್ಡಿಯೋ ಎಕ್ಸರ್‌ಸೈಸ್, ಪುಶ್‌ಅಪ್ ಸೇರಿದಂತೆ ಹತ್ತಾರು ಬಗೆಯಲ್ಲಿ ವರ್ಕೌಟ್ ಮಾಡಿ ಬೆವರಿಳಿಸುತ್ತಾರೆ. ಜಿಮ್‌ಗೆ ಹೋಗದ ದಿನ ಡಾನ್ಸ್ ಮಾಡೋದು ಹಾಗೂ ಜಾಗಿಂಗ್ ಮಾಡೋದು ಇವರಿಗಿಷ್ಟ. ‘ನಾನು ಸಿನಿಮಾದಲ್ಲಿದ್ದೀನಿ ಅನ್ನೋ ಕಾರಣಕ್ಕೆ ಎಕ್ಸರ್‌ಸೈಸ್ ಮಾಡ್ತಿಲ್ಲ. ಬೇರೆ ಫೀಲ್ಡ್‌ನಲ್ಲಿದ್ದರೂ ಇಷ್ಟೇ ವರ್ಕೌಟ್ ಮಾಡ್ತಿದ್ದೆ. ದೇಹ, ಮನಸ್ಸು ಆರೋಗ್ಯವಾಗಿದ್ದರಷ್ಟೇ ನಾವು ಸುಖಿಗಳು. ಇಲ್ಲಾಂದ್ರೆ ದೇಹ ರೋಗದ ಗೂಡಾಗುತ್ತೆ’ ಅನ್ನುವ ಕಿಯಾರ ವ್ಯಾಯಾಮಕ್ಕೆ ಊಟ, ನಿದ್ದೆಯಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ.
 

ಎತ್ತರ : 5'5

ತೂಕ : 55 ಕೆಜಿ

ಸುತ್ತಳತೆ : 33-26-33

loader