1. ಬಿಸಿ ನೀರಿಗೆ ಒಂದು ಸ್ಪೂನ್‌ ಜೇನುತುಪ್ಪ ಹಾಕಿ ದಿನ ಆರಂಭಿಸಿ

ಬೆಳಗ್ಗೆ ಹೊಟ್ಟೆಖಾಲಿ ಇರುತ್ತೆ. ಆಗಲೇ ಟೀ, ಕಾಫಿ ಕುಡಿದರೆ ಗ್ಯಾಸ್ಟ್ರಿಕ್‌ ಬರೋದು ಗ್ಯಾರೆಂಟಿ. ಬಿಸಿ ನೀರಿಗೆ ಜೇನುತುಪ್ಪ ಹಾಕಿ ಕುಡಿದರೆ ದೇಹ ಹಗುರಾದ ಹಾಗಿರುತ್ತೆ. ದಿನವಿಡೀ ಫ್ರೆಶ್‌ನೆಸ್‌ ಇರುತ್ತೆ. ಬೆಳ್ಳಂಬೆಳಗ್ಗೆ ಕುಡಿಯೋ ಈ ಡ್ರಿಂಕ್‌ ವೇಯ್ಟ್ ಲಾಸ್‌ಗೂ ಬೆಸ್ಟ್‌.

2. ತಿನ್ನೋದರ ಬಗ್ಗೆ ಗಮನ ಇರಲಿ.

ಸಿಸ್ಟಮ್‌ ನೋಡ್ಕೊಂಡು, ಮೊಬೈಲ್‌ ನೋಡ್ಕೊಂಡು ತಿನ್ನುತ್ತಿದ್ದರೆ ಬೊಜ್ಜು ಹೆಚ್ಚಾಗುತ್ತೆ. ಕಾರಣ ನಾವೆಷ್ಟುತಿಂತಿದ್ದೀವಿ ಅನ್ನೋದೇ ಗೊತ್ತಾಗಲ್ಲ. ತಿಂಡಿಯ ರುಚಿಯ ಕಡೆ ಗಮನವೂ ಇರಲ್ಲ. ತಿನ್ನೋದನ್ನು ಆಸ್ವಾದಿಸಿಕೊಂಡು ತಿನ್ನದಿದ್ದರೆ ಆ ಊಟಕ್ಕೆ ಬೆಲೆ ಇರಲ್ಲ.

3. ಹೆಚ್ಚು ಗ್ಯಾಪ್‌ ಬೇಡ.

ಹೆಚ್ಚಿನವರು ಬೆಳಗ್ಗೆ ಎಂಟಕ್ಕೆಲ್ಲ ತಿಂಡಿ ತಿಂದರೆ ಆಮೇಲೆ ಮಧ್ಯಾಹ್ನವೇ ಊಟ ಮಾಡೋದು. ಹೀಗೆ ಮಾಡೋದಕ್ಕಿಂತ ಎರಡು ಅಥವಾ ಎರಡೂವರೆ ಗಂಟೆಗೊಮ್ಮೆ ಸ್ವಲ್ಪ ಸ್ವಲ್ಪ ತಿನ್ನೋದನ್ನು ರೂಢಿಸಿಕೊಳ್ಳಿ. ಒಂದೇ ಸಲ ಹೆಚ್ಚು ತಿನ್ನೋದಕ್ಕಿಂತ ನಾಲ್ಕೈದು ಸಲ ಸ್ವಲ್ಪ ಸ್ವಲ್ಪ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು.

ಎತ್ತರ: 5’9

ತೂಕ: 56 ಕೆಜಿ

ಸುತ್ತಳತೆ: 33-​27​-34

4. ರಾತ್ರಿ ಬೇಗ ಊಟ ಮುಗಿಸಿ, ಪ್ರಮಾಣ ಕಡಿಮೆ ಇರಲಿ.

ಕತ್ತಲಾದ ಮೇಲೆ ನಮ್ಮ ಚಟುವಟಿಕೆ ಕಡಿಮೆಯಾಗುತ್ತೆ. ಸಾಧ್ಯವಾದಷ್ಟುಬೇಗ ಅಂದರೆ ಏಳು ಅಥವಾ ಎಂಟು ಗಂಟೆಯೊಳಗೆ ರಾತ್ರಿ ಊಟ ಮುಗಿಸಿ. ಪ್ರಮಾಣ ಮಧ್ಯಾಹ್ನ ಉಂಡದ್ದರ ಅರ್ಧಕ್ಕಿಂತ ಕಡಿಮೆ ಇರಲಿ. ಆಮೇಲೆ ಹಸಿವಾದರೆ ಒಂದು ಲೋಟ ಹಾಲು ಕುಡಿಯಿರಿ.

5. ವರ್ಕೌಟ್‌ಅನ್ನು ಎನ್‌ಜಾಯ್‌ ಮಾಡಿ

ಇಂಥದ್ದೇ ವರ್ಕೌಟ್‌ ಮಾಡಿ ಅಂತ ಹೇಳ್ತಿಲ್ಲ. ಆದರೆ ಶರೀರಕ್ಕೆ ವ್ಯಾಯಾಮ ಬೇಕು, ನಿಮಗಿಷ್ಟವಾಗುವ ಎಕ್ಸರ್‌ಸೈಸ್‌ಗಳನ್ನೆ ಮಾಡಿ. ನನಗೆ ಪಿಲಾಟೆಸ್‌ ಇಷ್ಟ. ಅದನ್ನು ಎನ್‌ಜಾಯ್‌ ಮಾಡ್ತೀನಿ. ಇದು ಕಾಲು, ಕೈ, ಬೆನ್ನು ಸೊಂಟ ಹೀಗೆ ದೇಹದ ಎಲ್ಲ ಭಾಗಕ್ಕೂ ವ್ಯಾಯಾಮ ಕೊಡುತ್ತೆ.

6. ಸಿಕ್ಕಿದ್ದರಲ್ಲೇ ಎಕ್ಸರ್‌ಸೈಸ್‌ ಮಾಡಿ

ನಂಗೀವತ್ತು ಜಿಮ್‌ಗೆ ಹೋಗಕ್ಕಾಗ್ತಿಲ್ಲ ಅಂತ ವರ್ಕೌಟ್‌ ಮಿಸ್‌ ಮಾಡಬೇಡಿ. ಮನೆ ಮೆಟ್ಟಿಲನ್ನೇ ವೇಗವಾಗಿ ಹತ್ತಿಳಿದು ಮಾಡಿ, ಯಂತ್ರಗಳಿಲ್ಲದೇ ಗೋಡೆ ಹಿಡಿದು, ಕುರ್ಚಿ ಆಧರಿಸಿ ಮಾಡೋ ವರ್ಕೌಟ್‌ ಟ್ರೈ ಮಾಡಿ. ಒಂದಿನ ವ್ಯಾಯಾಮ ತಪ್ಪಿಸಿದರೆ ಮರುದಿನ ವರ್ಕೌಟ್‌ ಮಿಸ್‌ ಮಾಡಣ ಅಂತಲೇ ಅನಿಸುತ್ತೆ.