ರಕ್ತದಾನ ಮಾಡಿ; ಆರೋಗ್ಯ ಹೆಚ್ಚಿಸಿಕೊಳ್ಳಿ

Blood donation is good for health
Highlights

ರಕ್ತದಾನದ ಬಗ್ಗೆ ಅನೇಕರಲ್ಲಿ ಗೊಂದಲ, ಆತಂಕ ಈಗಲೂ ಇದೆ. ಅವಶ್ಯಕವಾಗಿರುವ ರಕ್ತದ ಸಿಗದಿರುವುದಕ್ಕೆ ಇದೇ ಕಾರಣ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ರಿಂದ 6 ಲೀಟರ್ನಷ್ಟು ರಕ್ತವಿರುತ್ತದೆ. ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಮಿ.ಲೀನಷ್ಟೇ ರಕ್ತವನ್ನುದಾನಿಯಿಂದ ಸ್ವೀಕರಿಸುವುದರಿಂದ ಯಾವುದೇ ಅಪಾಯವಾಗದು.

ರಕ್ತದಾನದ ಬಗ್ಗೆ ಅನೇಕರಲ್ಲಿ ಗೊಂದಲ, ಆತಂಕ ಈಗಲೂ ಇದೆ. ಅವಶ್ಯಕವಾಗಿರುವ ರಕ್ತದ ಸಿಗದಿರುವುದಕ್ಕೆ ಇದೇ ಕಾರಣ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ರಿಂದ 6 ಲೀಟರ್ ನಷ್ಟು ರಕ್ತವಿರುತ್ತದೆ. ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಮಿ.ಲೀನಷ್ಟೇ ರಕ್ತವನ್ನುದಾನಿಯಿಂದ ಸ್ವೀಕರಿಸುವುದರಿಂದ ಯಾವುದೇ ಅಪಾಯವಾಗದು.

18 ರಿಂದ 60 ವರ್ಷದೊಳಗಿನ, 45 ಕೆ.ಜಿ.ಗಿಂತಲೂ ಹೆಚ್ಚು ತೂಕವಿರುವ 12.5 ಗ್ರ್ಯಾಮ್‌ಗಿಂತಲೂ ಹೆಚ್ಚು  ಹಿಮೋಗ್ಲೋಬಿನ್ ಅಂಶ ಹೊಂದಿರುವ ಎಲ್ಲಾ ಆರೋಗ್ಯವಂತರೂ ರಕ್ತದಾನ ಮಾಡಬಹುದು. ಲಿವರ್, ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ಋತುಸ್ರಾವದಲ್ಲಿರುವವರು, ಹಾಲುಣಿಸುವ ತಾಯಂದಿರು, ರಕ್ತ ಹೀನತೆ, ಕ್ಯಾನ್ಸರ್, ಕ್ಷಯ, ಅಧಿಕ ರಕ್ತದೊತ್ತಡ, ಅಪಸ್ಮಾರ ಮುಂತಾದ ತೊಂದರೆಗಳಿರುವವರು ರಕ್ತದಾನ ಮಾಡಬಾರದು.

ರಕ್ತದಾನದ ಬಳಿಕ ಹೆಚ್ಚೆಂದರೆ ಒಂದು ತಾಸಿನ ವಿಶ್ರಾಂತಿ ಸಾಕು. ಆ ದಿನ ಹೆಚ್ಚು ನೀರನ್ನು ಕುಡಿದರೆ ಒಳ್ಳೆಯದು. ಮೂರು  ತಿಂಗಳೊಳಗಾಗಿ ದಾನಿಯ ದೇಹದಲ್ಲಿ ರಕ್ತವು ಮರು ತಯಾರಾಗುತ್ತದೆ. ದಾನಿಯಿಂದ ಪಡೆದ ರಕ್ತವನ್ನು ಸಾಮಾನ್ಯವಾಗಿ ೩೫ ದಿನಗಳವರೆಗೆ ವಿಶೇಷ ರೆಫ್ರಿಜರೇಟರ್ ಗಳಲ್ಲಿ ಶೇಖರಿಸಿಟ್ಟು ಉಪಯೋಗಿಸಬಹುದು. ಒಬ್ಬ ದಾನಿಯಿಂದ ಪಡೆದ ರಕ್ತವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ,
ಅವಶ್ಯಕತೆ ಅನುಸಾರ ಮೂರು ರೋಗಿಗಳಿಗೆ ಅದನ್ನು ಉಪಯೋಗಿಸಬಹುದು.

-ಡಾ. ವಿನಯಾ ಶ್ರೀನಿವಾಸ್  

loader