ಕಪ್ಪು ಬೆಕ್ಕನ್ನು ಮನೆಯಿಂದ ಹೊರ ಹಾಕುತ್ತಿದ್ದಾರೆ ಜನರು – ಯಾಕೆ ಗೊತ್ತಾ..?

First Published 30, Jan 2018, 1:41 PM IST
Black cats Getting Dumped because they Dont look good in Owners Selfies
Highlights

ಪ್ರಾಣಿ ರಕ್ಷಣಾ ಕೇಂದ್ರಗಳು ಇತ್ತೀಚೆಗೆ ಒಂದು ಮಾಹಿತಿಯನ್ನು  ಬಹಿರಂಗ ಮಾಡಿವೆ. ಅದರಲ್ಲಿ ಕಪ್ಪು ಬೆಕ್ಕುಗಳನ್ನು ಸಾಕಿದವರು ಮತ್ತೆ ಮನೆಗೆ ಸೇರಿಸಿಕೊಳ್ಳಲು ಒಪ್ಪುತ್ತಿಲ್ಲವಂತೆ.

ಬೆಂಗಳೂರು : ಪ್ರಾಣಿ ರಕ್ಷಣಾ ಕೇಂದ್ರಗಳು ಇತ್ತೀಚೆಗೆ ಒಂದು ಮಾಹಿತಿಯನ್ನು  ಬಹಿರಂಗ ಮಾಡಿವೆ. ಅದರಲ್ಲಿ ಕಪ್ಪು ಬೆಕ್ಕುಗಳನ್ನು ಸಾಕಿದವರು ಮತ್ತೆ ಮನೆಗೆ ಸೇರಿಸಿಕೊಳ್ಳಲು ಒಪ್ಪುತ್ತಿಲ್ಲವಂತೆ. ಅಲ್ಲದೇ ಹೆಚ್ಚಿನ ಜನರು ಅವುಗಳನ್ನು ಮನೆಯಿಂದ ಹೊರಹಾಕುತ್ತಿದ್ದಾರಂತೆ.

ಅದಕ್ಕೆ ಕಾರಣವನ್ನು ಕೇಳಿದರೆ ಚಕಿತವಾಗೋದು ಕಂಡಿತ. ಯಾಕೆ ಗೊತ್ತಾ ಜನರಿಗೆ ಕಪ್ಪು ಬೆಕ್ಕುಗಳೊಂದಿಗೆ ಫೊಟೊ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಅದು ಸುಂದರವಾಗಿ ಬರೋದಿಲ್ಲ ಎನ್ನುವ ಕಾರಣಕ್ಕಾಗಿ ಅವುಗಳನ್ನು ಮನೆಯಿಂದ ಹೊರಹಾಕುತ್ತಿದ್ದಾರಂತೆ.

ಅವುಗಳು ಉತ್ತಮವಾಗಿ ಕಾಣುವುದಿಲ್ಲ. ಅವುಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಒಳ್ಳೆಯದು ಎನಿಸದು ಎನ್ನುತ್ತಾರೆ ಮಾಲಿಕರು. ಅಲ್ಲದೇ ಕಪ್ಪು ಬೆಕ್ಕುಗಳು ಹೆಚ್ಚು ಬೋರಿಂಗ್ ಎನ್ನುವುದು ಕೂಡ ಕೆಲ ಜನರ ಅಭಿಪ್ರಾಯವಾಗಿದೆ.

loader