ಫಿಟ್ನೆಸ್ ಬುಕ್ ಬರೆಯಲಿದ್ದಾರೆ ಬಿಪಾಶ

https://static.asianetnews.com/images/authors/b348a094-0bef-5801-a1f6-61e57071185f.jpg
First Published 28, Jul 2018, 12:19 PM IST
Bipasha Basu to write fitness book and release Yoga videos
Highlights

ಬಿಪಾಶ ಬಸು ಪುಸ್ತಕದ ಜೊತೆ ತಾವು ವ್ಯಾಯಾಮ ಮಾಡುತ್ತಿರುವ ವಿಡಿಯೋಗಳು, ಫುಡ್ ಸ್ಟೈಲ್ ನ ಡೀಟೆಲ್ಸ್ ಗಳನ್ನು ಡಿವಿಡಿ ಮೂಲಕ ಹೊರತರುವ ಆಲೋಚನೆಯಲ್ಲಿದ್ದಾರೆ.

 

ದೊಡ್ಡ ಸ್ಟಾರ್ ನಟರ ಸಿಕ್ಸ್ ಪ್ಯಾಕ್, ನಟಿಯರ ಫಿಟ್ನೆಸ್ ಬಗ್ಗೆ ಎಲ್ಲರಿಗೂ ತೀರದ ಕುತೂಹಲ. ಬಾಲಿವುಡ್ ನಟಿಯರ ಬಗ್ಗೆಯಂತೂ ಈ ಕುತೂಹಲ ತುಸು ಹೆಚ್ಚೆ. ಅವರು ದಿನಕ್ಕೆಷ್ಟು ಗಂಟೆ ವ್ಯಾಯಾಮ ಮಾಡುತ್ತಾರೆ. ಫುಡ್ ಸ್ಟೈಲ್ಏನು? ಎನ್ನುವುದೆಲ್ಲವೂ ಅಭಿಮಾನಿಗಳ ಪಾಲಿಗೆ ಎಂದಿಗೂ ಇಂಟರೆಸ್ಟಿಂಗ್ ವಿಚಾರಗಳೇ. ಈಗ ಬಾಲಿವುಡ್‌ನ ಫಿಟ್ನೆಸ್ ಬೆಡಗಿ ಬಿಪಾಶ ಬಸು ಇದೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಹೊರಟಿದ್ದಾರೆ. ಅದು ತಾವೇ ತಮ್ಮ ಫಿಟ್ನೆಸ್ ಬಗ್ಗೆ ಪುಸ್ತಕ ಬರೆಯುವ ಮೂಲಕ. ‘ನನಗೆ ಫಿಟ್ ಆಗಿ ಇರುವುದೆಂದರೆ ತುಂಬಾ ಇಷ್ಟ. ನನ್ನ ಪಾಲಿಗೆ ಅದೇ ದೊಡ್ಡ ಶಕ್ತಿ. ನನ್ನ ರೀತಿಯೇ ಎಲ್ಲರಿಗೂ ಫಿಟ್ ಆಗಿ ಇರಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಆದರೆ ಅದು ಹೇಗೆ ಎನ್ನುವುದು ಸರಿಯಾಗಿ ಗೊತ್ತಿರುವುದಿಲ್ಲ. ಹಾಗಾಗಿಯೇ ನಾನು ಫಿಟ್ನೆಸ್ ಬಗ್ಗೆ ನನ್ನದೇ ಅನುಭವಗಳನ್ನು ಪುಸ್ತಕ ರೂಪದಲ್ಲಿ ತರಲು ಮುಂದಾಗಿದ್ದೇನೆ’ ಎಂದು ಹೇಳಿಕೊಂಡಿರುವ ಬಿಪಾಶ ಇನ್ನೇನು ಪುಸ್ತಕ ತಯಾರಿಯಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಪುಸ್ತಕ ಕೈ ಸೇರುವ ಸಮಯ ಮಾತ್ರ ಸದ್ಯಕ್ಕೆ ಗೊತ್ತಿಲ್ಲ.

ಇದರ ಜೊತೆಗೆ ಮತ್ತೊಂದು ಸಿಹಿ ಸುದ್ದಿ ಇದೆ. ಅದೆಂದರೆ, ಬಿಪಾಶ ಬಸು ಪುಸ್ತಕದ ಜೊತೆಗೆ ತಾವು ವ್ಯಾಯಾಮ ಮಾಡುತ್ತಿರುವ ವಿಡಿಯೋಗಳು, ಫುಡ್ ಸ್ಟೈಲ್‌ನ ಡೀಟೆಲ್ಸ್‌ಗಳನ್ನು ಡಿವಿಡಿ ಮೂಲಕ ಹೊರತರುವ ಆಲೋಚನೆಯನ್ನು ಹೊಂದಿದ್ದಾರೆ. ಇದು ಸಾಧ್ಯವಾದಾಗ ಫಿಟ್ನೆಸ್ ಪ್ರಿಯರಿಗೆ ಓದು ಮತ್ತು ವಿಡಿಯೋ ಮೂಲಕ ಬಿಪಾಶ ಫಿಟ್ನೆಸ್ ಗುಟ್ಟು ತಿಳಿಯಬಹುದು ಮತ್ತು ತಾವೂ ಸ್ವತಃ ಫಿಟ್ ಆಗಿರಲು ಟ್ರೈ ಮಾಡಬಹುದು.

loader