ಕೊಡಗಿನ ಕಡೆ ಮನೆಯಲ್ಲಿಯೇ ತಯಾರಿಸುವ ವೈನ್ ರುಚಿ ಸವಿದವವನೇ ಬಲ್ಲ. ವಿವಿಧ ಫ್ಲೇವರ್‌ಗಳಲ್ಲಿ ಲಭ್ಯವಾಗೋ ವೈನ್‌ನಲ್ಲಿ ಕಡಿಮೆ ಪ್ರಮಾಣದ ಆಲ್ಕೋಹಾಲ್ ಅಂಶವಿದ್ದು, ಆರೋಗ್ಯಕಾರಿ ಗುಣಗಳೂ ಇವೆ. ಕುಡಿಯದೇ ಹೋದರೂ ಪರ್ವಾಗಿಲ್ಲ, ವಿಧ ವಿಧವಾಗಿ ಬಳಸಿದರೂ ಆರೋಗ್ಯಕ್ಕೆ ಒಳ್ಳೆಯದು. ಹೇಗೆ?

  • ದಿನಕ್ಕೆ ಅರ್ಧ ಗ್ಲಾಸ್ ಕುಡಿಯುವುದರಿಂದ ಮೊಡವೆ ಬರುವುದಿಲ್ಲ. ಕುಡಿಯದಿದ್ದರೂ  ಹತ್ತಿಯನ್ನು ವೈನ್‌ನಲ್ಲಿ ಅದ್ದಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆಯಬೇಕು. ಇದು ಮೊಡವೆಯನ್ನು ದೂರ ಮಾಡುತ್ತದೆ.
  • ಬೇಗ ಚರ್ಮದ ಕಾಂತಿ ಹೆಚ್ಚಾಗಬೇಕೆಂದರೆ ರೆಡ್ ವೈನ್ ಕುಡಿಯಬೇಕು.
  • ಇದರಲ್ಲಿ ಅ್ಯಂಟಿ ಆ್ಯಕ್ಸಿಡೆಂಟ್ ಅಂಶವಿದ್ದು, ಕ್ಯಾನ್ಸರ್ ತಡೆಯುತ್ತದೆ ಮತ್ತು ಕರುಳು ಸಮಸ್ಯೆ ಸರಿ ಹೋಗುತ್ತದೆ.
  • ವೈನ್‌ನಲ್ಲಿ ಮರೆಗುಳಿತನವನ್ನು ಕಡಿಮೆ ಮಾಡುವ ಅಂಶವೂ ಇದೆ.
  • ಫುಡ್ ಪಾಯಿಸನ್  ಆದಾಗ ಒಂದು ಗ್ಲಾಸ್ ವೈನ್ ಸೇವಿಸಿದರೊಳಿತು. 
  • ಆ್ಯಂಟಿ ಏಜಿಂಗ್ ಗುಣವಿರೋ ವೈನ್ ಮುಖ ಸುಕ್ಕಾಗದಂತೆ ತಡೆಯುತ್ತದೆ.