Asianet Suvarna News Asianet Suvarna News

ಮನೆಯಲ್ಲಿ ಶಂಖವಿದ್ದರೆ ಖುಲಾಯಿಸುತ್ತದೆ ನಿಮ್ಮ ಅದೃಷ್ಟ!

ವಿಷ್ಣುವಿನ ಸ್ವರೂಪವಾದ ಶಂಖವನ್ನುಮನೆಯಲ್ಲಿಟ್ಟುಕೊಂಡರೆ, ಮನೆಗೆ, ಮನೆಯವರಿಗೆ ಒಳ್ಳೆಯದು. ಅದರಿಂದ ಬರುವ ‘ಓಂ’ ಶಬ್ದ  ಎಲ್ಲಾಋಣಾತ್ಮಕ ಶಕ್ತಿಯನ್ನು ದೂರವಾಗಿಸಬಲ್ಲದು.  

Benefits of having Shanka st home
Author
Bengaluru, First Published Oct 14, 2018, 3:30 PM IST

ಮನೆಗೊಂದು ದೇವರ ಕೋಣೆ ಹಾಗೂ ಅಲ್ಲೊಂದು ಶಂಖವಿದ್ದರೆ ಮನೆಯ ವರ್ಚಸ್ಸು ಹೆಚ್ಚಿಸುತ್ತದೆ. ಇಂಥ ಶಂಖ ತರುವಾಗ ಕೆಲವು ಅಂಶಗಳನ್ನು ಗಮನಿಸಬೇಕು. ಶಂಖ ತರಲು, ಮನೆಯಲ್ಲಿ ಇಟ್ಟುಕೊಳ್ಳಲು ಏನು ಟಿಪ್ಸ್?

  • ಶಾಸ್ತ್ರದ ಪ್ರಕಾರ ಎರಡು ಶಂಖಗಳನ್ನು ತರಬೇಕು. 
  • ಶಂಖವನ್ನು ಹಳದಿ ಬಟ್ಟೆ ಮೇಲಿಟ್ಟು ದೇವರ ಕೋಣೆಯಲ್ಲಿ ಮಾತ್ರ ಇಡಬೇಕು. 
  • ಶಂಖವನ್ನು ಶಿವ ಲಿಂಗದಿಂದ ದೂರವಿಡಬೇಕು.
  • ಯಾವುದೇ ಕಾರಣಕ್ಕೂ ಇದರಿಂದ ನೀರನ್ನು ಎತ್ತಿ ಲಿಂಗದ ಮೇಲೆ ಹಾಕಬಾರದು.  
  • ಪೂಜಿಸುವ ಶಂಖ ಮತ್ತು ಊದುವ ಶಂಖ ಬೇರೆ ಬೇರೆಯಾಗಿರಬೇಕು.
  • ಪೂಜಿಸುವ ಶಂಖವನ್ನು ಊದುವ ಶಂಖಕ್ಕಿಂತ ಎತ್ತರದ ಜಾಗದಲ್ಲಿಡಬೇಕು. 
  • ಮನೆಯ ಹಿರಿಯರು ಶಂಖವನ್ನು ಬೆಳಗ್ಗೆ ಹಾಗೂ ಸಂಜೆ ಊದಬೇಕು. 
  • ಬಳಸದ ಸಮಯದಲ್ಲಿ ಅದನ್ನು ಗಂಗಾಜಲದಲ್ಲಿ ತೂಳೆದು ಬಿಳಿ ಬಟ್ಟೆಯಲ್ಲಿ ಸುತ್ತಿಡಬೇಕು. 

 

ಉಪಯೋಗವೇನು?

  • ಶಂಖವನ್ನು ಊದುವವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ.
  • ಇದನ್ನು ಊದಿದಾಗ ಅದರಲ್ಲಿ ‘ಓಂ’ ಶಬ್ದ ಹೊರ ಬರುತ್ತದೆ. ಇದು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.
  • ತೊದಲು ಮಾತಾಡುವ ಮಗುವಿಗೆ ದಿನ ಶಂಖ ಊದುವುದನ್ನು ಹೇಳಿಕೊಟ್ಟರೆ, ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತದೆ.
  • ಮೈ ಚರ್ಮದ ಮೇಲೆ ಬಿಳಿ ದದ್ದಾದರೆ ಶಂಖದ ನೀರಿನಿಂದ ಮಸಾಜ್ ಮಾಡಿಕೊಂಡರೆ, ಸರಿ ಹೋಗುತ್ತದೆ.
Follow Us:
Download App:
  • android
  • ios