Asianet Suvarna News Asianet Suvarna News

ಕೂದಲು – ಮುಟ್ಟಿನ ಸಮಸ್ಯೆಗೆ ದಾಸವಾಳ ಬೆಸ್ಟ್ ಮದ್ದು: ಹೇಗೆ ಉಪಯೋಗ ಗೊತ್ತೆ.?

ದಾಸವಾಳದ  ಗಿಡವನ್ನು ಸಾಮಾನ್ಯವಾಗಿ ಎಲ್ಲರ ಮನೆಯಂಗಳದಲ್ಲಿಯೂ ಕೂಡ ಕಾಣಬಹುದಾಗಿದೆ.  ಇದೊಂದು ಪೊದೆ ರೀತಿಯಾದ ಸಸ್ಯವಾಗಿದ್ದು, ಇದರ ಭಾಗಗಳೆಲ್ಲವೂ ಕೂಡ ಔಷಧೀಯ ಆಗರವಾಗಿದೆ. ಇದರಲ್ಲಿ ಅನೇಕ ರೀತಿಯಾದ ಆರೋಕ್ಯಕಾರಿಯಾದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Benefit Of Hibiscus

ದಾಸವಾಳದ ಉಪಯೋಗಗಳು

*ದಾಸವಾಳದ ಹೂವನ್ನು ಕೊಬ್ಬರಿ ಎಣ್ಣೆಯಲ್ಲಿ ಕಾಯಿಸಿ ಶೋಧಿಸಿ, ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ, ಕಪ್ಪಾಗಿ ಬೆಳೆಯುತ್ತದೆ.

*ಇದರ ಹೂವುಗಳನ್ನು ಗೋ ಮೂತ್ರದಲ್ಲಿ ರುಬ್ಬಿ ತಲೆಗೆ ಹಚ್ಚುವುದರಿಂದ ನೆರೆಗೂದಲು ಕಡಿಮೆಯಾಗುತ್ತದೆ.

*ದಾಸವಾಳ ಮೊಗ್ಗನ್ನು ಹಾಲಿನಲ್ಲಿ ಅರೆದು ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಾಗುವ ಅತಿಯಾದ ರಕ್ತಸ್ರಾವ ಕಡಿಮೆಯಾಗುತ್ತದೆ.

ದಾಸವಾಳದ ಪುಷ್ಪವನ್ನು  ಬಾಯಿ ಹುಣ್ಣು ಇದ್ದಲ್ಲಿ ಚೆನ್ನಾಗಿ ಅಗಿದು ತಿನ್ನುವುದು ಉಪಯುಕ್ತ.

ತಲೆಹೊಟ್ಟಿಗೆ ದಾಸವಾಳದ ಎಲೆ ಮತ್ತು ಹೂವನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಬೇಕು.

ಬೇಸಗೆ ಸಮಯದಲ್ಲಿ ದಾಸವಾಳದ ಹೂವನ್ನು ರಾತ್ರಿ ನೆನೆಹಾಕಿ ಪ್ರಾತಃಕಾಲದಲ್ಲಿ ಆ ನೀರನ್ನು ಕುಡಿಯುವುದರಿಂದ ದೇಹಕ್ಕೆ ತಂಪಾಗುತ್ತದೆ.

Follow Us:
Download App:
  • android
  • ios