Asianet Suvarna News Asianet Suvarna News

ಅತ್ತೆ ಉಪಟಳ ಸಹಿಸೋದು ಹೇಗೆ?

'There is such things as perfect spouse and perfect married life..' ಎನ್ನುವ ಮಾತಿದೆ. ಹಾಗೆಯೇ ವಿಶ್ವದಲ್ಲಿ ಸೂಕ್ತ ಅತ್ತೆಗೆ ತಕ್ಕ ಸೊಸೆಯೂ ಸಿಗೋಲ್ಲ, ಸೊಸೆಗೆ ಅಮ್ಮನಂಥ ಅತ್ತೆಯೂ ಸಿಗೋಲ್ಲ. ಬಹುತೇಕ ಕೌಟುಂಬಿಕ ಸಮಸ್ಯೆಗಳಿಗೆ, ವಿವಾಹ ವಿಚ್ಛೇದನಕ್ಕೆ ಅತ್ತೆ-ಸೊಸೆಯ ಹದಗಟ್ಟ ಸಂಬಂಧವೇ ಕಾರಣವೆನ್ನಲಾಗುತ್ತಿದೆ. ಇಂಥದೊಂದು ಸಮಸ್ಯೆಗೆ ನಿಮ್ಮ ಸಲಹೆ ಏನು, ಅತ್ತೆಯೊಂದಿಗಿನ ಬಾಂಧವ್ಯವನ್ನು ಸುಧಾರಿಸಿಕೊಳ್ಳುವುದು ಹೇಗೆ?

being plagued by mother in law suggest to overcome it

ಮದುವೆಯಾಗಿ ಏಳು ತಿಂಗಳು ಕಳೆಯಿತು. ನಾನು ಮೊದಲಿನಿಂದಲೂ ತುಂಬಾ ಸ್ವತಂತ್ರವಾಗಿ ಬೆಳೆದವಳು. ಈಗ ಅತ್ತೆಯ ಮಡಿವಂತಿಕೆಯನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತಿದೆ. ಈವಾಗ ಆಷಾಢ ಮಾಸದ ಕಾರಣ ಅಮ್ಮನ ಮನೆಗೆ ಬಂದಿದ್ದೇನೆ. 

ಇಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದೇನೆ. ಆದರೆ ಮತ್ತೆ ಗಂಡನ ಮನೆಗೆ ಹೋಗಿ ಅತ್ತೆಯ ಉಪಟಳಗಳನ್ನು ಸಹಿಸಿಕೊಳ್ಳಬೇಕು ಎನ್ನುವುದನ್ನು ನೆನಪಿಸಿಕೊಂಡರೆ ಅಳು ಬರುತ್ತೆ. ಗಂಡನಿಗೆ ಇದನ್ನು ಹೇಳಿದರೆ ಎಲ್ಲವನ್ನೂ ಸಹಿಸಿಕೋ ಎನ್ನುತ್ತಾರೆ. ಯಾರಿಗೇ ಹೇಳಿದರೂ ಹೀಗೇ ಉತ್ತರ ಕೊಡುತ್ತಾರೆ. ನನಗೆ ಸಮಾಧಾನಕ್ಕಿಂತ ಸಮಸ್ಯೆಗೆ ಪರಿಹಾರ ಬೇಕು. ಏನಾದರೂ ಪರಿಹಾರ ಹೇಳಿ. 

- ಸುಗುಣ(ಹೆಸರು ಬದಲಿಸಲಾಗಿದೆ) ಉಡುಪಿ

ನಿಮ್ಮ ಸಲಹೆ ಸೂಚನೆಗಳನ್ನು suvarnanewsindia@gmail.comಗೆ ಕಳುಹಿಸಿ....

 

Follow Us:
Download App:
  • android
  • ios