ಆ ಸೋಪ್, ಈ ಕ್ರೀಂ, ಮತ್ತೊಂದು ಫೇಸ್ ವಾಷ್...ಹೀಗೆ ಸೌಂದರ್ಯ ಹೆಚ್ಚಿಸಿಕೊಳ್ಳಲು ಏನೇನೋ ಸರ್ಕಸ್ ಮಾಡುತ್ತಲೇ ಇರುತ್ತಾರೆ ಹೆಂಗಳೆಯರು. ಆದರೆ, ಕಡ್ಲೆ ಹಿಟ್ಟೆಂಬ ಸೌಂದರ್ಯ ವರ್ಧಕದ ಬಗ್ಗೆ ನಿಮಗೇನು ಗೊತ್ತು?

ಕಡ್ಲೆಹಿಟ್ಟಿಗೆ ಪುರಾತನ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ. ಇಂದಿಗೂ ಇದನ್ನು ಜನರು ವಿಧ ವಿಧವಾಗಿ ಬಳಸುತ್ತಾರೆ. ಕೇವಲ ಅಡುಗೆಗೆ ಮಾತ್ರವಲ್ಲ ಬದಲಾಗಿ ಸೌಂದರ್ಯ ಹೆಚ್ಚಿಸಲೂ ಉಪಯೋಗಿಸುತ್ತಾರೆ. ಏನಿದೆ ಇದರ ಪ್ರಯೋಜನ? 

Add Asianetnews Kannada as a Preferred SourcegooglePreferred

ಕಲೆ ರಹಿತ ಮುಖ: ಮುಖ ಕಲೆ ರಹಿತವಾಗಿರಬೇಕು ಎಂದಾದರೆ, ಮುಖಕ್ಕೆ ಸೋಪ್ ಹಾಕುವ ಬದಲು ಕಡ್ಲೆ ಹಿಟ್ಟನ್ನು ಹಚ್ಚಿದರೆ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. 

ಮೊಡವೆ ನಿವಾರಣೆ: ಪಿಂಪಲ್ ಸಮಸ್ಯೆ ಕಾಣಿಸಿಕೊಂಡರೆ, ಕಡ್ಲೆಹಿಟ್ಟಿನ ಜೊತೆ ಸ್ವಲ್ಪ ಹಾಲು, ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿ. 

ಸುಂದರ ತ್ವಚೆ: ಕಡ್ಲೆ ಹಿಟ್ಟಿಗೆ ಮೊಸರು ಮತ್ತು ನಿಂಬೆ ರಸ ಬೆರೆಸಿ, ಚಿಟಿಕೆ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿದರೆ ಸುಂದರ ತ್ವಚೆ ಪಡೆಯಬಹುದು. 

ಎಣ್ಣೆ ತ್ವಚೆ : ಮೊಸರು ಮತ್ತು ಕಡ್ಲೆ ಹಿಟ್ಟಿನ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆದರೆ, ಮುಖದ ಎಣ್ಣೆ ಅಂಶ ಕಡಿಮೆಯಾಗುತ್ತದೆ. 

ಕಪ್ಪು ಕಲೆ ನಿವಾರಣೆ : ಕೈ, ಕುತ್ತಿಗೆ ಕಪ್ಪಾಗಿದ್ದರೆ ಕಡ್ಲೆ ಹಿಟ್ಟಿಗೆ ಮೊಸರು ಮತ್ತು ನಿಂಬೆ ರಸ ಬೆರೆಸಿ ಹಚ್ಚಬೇಕು. ಕಪ್ಪು ಕಲೆ ನಿವಾರಣೆಯಾಗಿ, ಬಿಳಿಯಾಗುತ್ತದೆ. 

ಮುಖದ ಮೇಲಿನ ಕೂದಲು: ಕಡ್ಲೆಹಿಟ್ಟಿನ ಜೊತೆ ಮೆಂತೆ ಪುಡಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆದರೆ ಮುಖದ ಮೇಲಿನ ಕೂದಲು ಕಡಿಮೆಯಾಗುತ್ತದೆ. 

ಕಲೆ ರಹಿತ, ಸುಂದರ ವದನಕ್ಕೆ ಅಕ್ಕಿಹಿಟ್ಟಿನ ಮದ್ದು....