ಸೀಸನ್‌ಗೆ ತಕ್ಕಂತೆ ನಮ್ಮ ತ್ವಚೆಯೂ ತನ್ನ ಕಳೆಗುಂದುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಚರ್ಮ ಒಣಗಿ, ನೋಡಲು ವಿಕಾರವಾಗಿ ಕಾಣಿಸುತ್ತದೆ. ಚರ್ಮದಲ್ಲಿ ತೈಲದ ಅಂಶವಿದ್ದರೆ ಕಳಾಹೀನವಾಗುವುದಿಲ್ಲ. ಮುಖದ ಕಳೆ ಕುಂದದಂತೆ ಏನು ಮಾಡಬಹುದು? 

ಮಾಯಿಶ್ಚರೈಸರ್ ಬಳಕೆ: ಸ್ಕಿನ್ ಮಾಯಿಶ್ಚರೈಸ್ ಆಗಿರಬೇಕು. ಅದಕ್ಕೆ ವಿಟಮಿನ್ ಇ, ಶಿಯಾ ಬಟರ್ ಮತ್ತು ಇತರೆ ಎಣ್ಣೆಯಂಶ ಇರುವ ಮಾಯಿಶ್ಚರೈಸರ್ ಬಳಸಿ. 

ಅವಸರ ಬೇಡ: ಆಫೀಸ್ ಹೋಗುವ ಸಮಯದಲ್ಲಿ ಪುರುಷರು ಅರ್ಜೆಂಟ್ ಆಗಿ ಶೇವ್ ಮಾಡಿಕೊಳ್ಳುತ್ತಾರೆ. ಇದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ನಿಧಾನವಾಗಿ ಶೇವ್ ಮಾಡಿದರೆ, ಗುಳ್ಳೆಗಳಾಗುವುದಿಲ್ಲ. 

ಗ್ಲೋಯಿಂಗ್ ಸ್ಕಿನ್‌ಗೆ: ಸನ್ ಸ್ಕ್ರೀನ್ ಸರಿಯಾದ ರೀತಿಯಲ್ಲಿ ಬಳಸಿದರೆ ಚರ್ಮಕ್ಕೊಳ್ಳೆಯದು. ಎಸ್ಪಿಎಫ್ 15 ಪವರ್ ಹೊಂದಿರುವ ಸನ್‌ಸ್ಕ್ರೀನ್ ಬಳಸಿ.  ತುಂಬಾ ಹೊತ್ತು ಬಿಸಿಲಿನಲ್ಲಿ ಇರುವುದಾದ್ರೆ ಎಸ್ಪಿಎಫ್ 30 ಹೊಂದಿರುವ ಕ್ರೀಮ್ ಬಳಸಿದರೆ ತ್ವಚೆ ಸ್ವಚ್ಛವಾಗಿರುತ್ತದೆ. 

ಕ್ಲೀನಿಂಗ್: ಮುಖವನ್ನು ಯಾವಾಗಲೂ ಕ್ಲೀನ್ ಆಗಿ ಇಟುಕೊಳ್ಳಲು ಕ್ಲೆನ್ಸರ್ ಬಳಸಿ. ಸ್ನಾನ ಮಾಡಿದ ನಂತರ ಹಾಗೂ ನಿದ್ರೆ ಮಾಡುವ ಮುನ್ನ ಇದನ್ನು ಬಳಸಬಹುದು.

ಸ್ಕ್ರಬ್ ಮಾಡಿ: ಡೆಡ್ ಸ್ಕಿನ್, ಬ್ಲ್ಯಾಕೆಡ್ಸ್ ಮತ್ತು ವೈಟೆಡ್ಸ್ ನಿವಾರಿಸಲು ವಾರದಲ್ಲಿ ಎರಡು ಬಾರಿಯಾದರೂ ಸ್ಕ್ರಬ್ಬಿಂಗ್ ಮಾಡಿ. ಅದರಲ್ಲೂ ಅಕ್ಕಿ ಹಿಟ್ಟಿನಲ್ಲಿ ಸ್ಕ್ರಬ್ಬಿಂಗ್ ಮಾಡಿದರೊಳಿತು.