ಕೊರಿಯನ್ ಸ್ಕಿನ್ ಬ್ಯೂಟಿ ನಿಮ್ಮದಾಗ್ಬೇಕಾ? ಚರ್ಮದ ಹೊಳಪಿಗೆ ಇಲ್ಲಿವೆ ಟಿಪ್ಸ್
ಕೊರಿಯನ್ ಸ್ಕಿನ್‌ಕೇರ್ ಉತ್ಪನ್ನಗಳ ಬಗ್ಗೆ ಇಂದಿನವರಿಗೆ ಭಾರೀ ಕ್ರೇಜ್. ಯಾವುದನ್ನೆಲ್ಲ ಭಾರತೀಯರ ಚರ್ಮಕ್ಕೆ ಬಳಕೆ ಮಾಡಬಹುದು ಎನ್ನುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಆದರೂ, ಯಾವುದೇ ಉತ್ಪನ್ನಗಳನ್ನು ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿಸಿಕೊಳ್ಳಲು ಮರೆಯದಿರಿ ಎನ್ನುವುದು ತಜ್ಞರ ಎಚ್ಚರಿಕೆ.
ಕೊರಿಯಾದ ಹುಡುಗಿಯರ ಮುಖದ ಸೌಂದರ್ಯ ಅಚ್ಚರಿ ಮೂಡಿಸುವಂಥದ್ದು. ಅಷ್ಟು ಹೊಳಪು ಹಾಗೂ ನಯ. ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯಕರ ಮುಖದ ತ್ವಚೆಯಿಂದಾಗಿ ಕೊರಿಯಾ ಹುಡುಗಿಯರಿಗೆ ಎಲ್ಲ ಕಡೆ ಮನ್ನಣೆ. ಇತ್ತೀಚಿನ ದಿನಗಳಲ್ಲಿ ಕೊರಿಯಾ ಮಾದರಿಯ ಸೌಂದರ್ಯಕ್ಕಾಗಿ ಇಂದಿನ ಝಡ್ ಜನರೇಷನ್ ಹಾಗೂ ಮಿಲೆನಿಯಲ್ಸ್ ಮಂದಿ ಹಾತೊರೆಯುವುದು ಹೆಚ್ಚಾಗಿದೆ. ಕೋವಿಡ್ ಬಳಿಕವಂತೂ ಕೆ-ಬ್ಯೂಟಿಗೆ ಅಪಾರ ಬೇಡಿಕೆ. ಕೊರಿಯಾದಲ್ಲಿ ಸೌಂದರ್ಯವರ್ಧನೆಗೆ ಬಳಸುವ ವಸ್ತುಗಳನ್ನು ಬಳಕೆ ಮಾಡುವ ಪರಿಪಾಠ ಹೆಚ್ಚುತ್ತಿದೆ. ಇ-ಕಾಮರ್ಸ್ ಸಂಸ್ಥೆಗಳು ಸೌಂದರ್ಯ ಉತ್ಪನ್ನಗಳು ಸುಲಭವಾಗಿ ಕೈಗೆ ದೊರಕಿಸುತ್ತಿವೆ. ಕೊರಿಯನ್ ಬ್ರ್ಯಾಂಡ್ ಸೌಂದರ್ಯವರ್ಧಕಗಳ ಮಾರುಕಟ್ಟೆ ಭಾರತದಲ್ಲಿ ಜೋರಾಗಿದೆ. ಕೆಲವು ಅನ್ವೇಷಣಾತ್ಮಕ ಹಾಗೂ ವಿಶಿಷ್ಟ ಮೂಲಪರಿಕರಗಳನ್ನು ಅವರು ಬಳಸುವುದು ಜಗಜ್ಜಾಹೀರಾಗಿದೆ. ಬಸವನಹುಳುವಿನ ಅಂಶ ಸೇರಿದಂತೆ ಹಲವು ನೈಸರ್ಗಿಕ ವಸ್ತುಗಳನ್ನು ಅವರು ಬಳಕೆ ಮಾಡುತ್ತಾರೆ. ಕೊರಿಯನ್ ಸ್ಕಿನ್ ಕೇರ್ ಪದ್ಧತಿ ವಿಶಿಷ್ಟವಾಗಿದ್ದು, ಆರೋಗ್ಯವಂತ ಮುಖದ ತ್ವಚೆಗೆ ಅವುಗಳನ್ನು ಅನುಸರಿಸಲಾಗುತ್ತದೆ. ಚರ್ಮದ ಬಣ್ಣಕ್ಕಿಂತ ಹೆಚ್ಚಾಗಿ ಆರೋಗ್ಯಕ್ಕೆ ಇಲ್ಲಿ ಮಹತ್ವ ನೀಡಲಾಗುತ್ತದೆ ಎನ್ನುವುದು ವಿಶೇಷ.
ಡಬಲ್ ಕ್ಲೆನ್ಸಿಂಗ್ (Double Cleansing)
ಕೊರಿಯನ್ ಸ್ಕಿನ್‌ಕೇರ್ (Skincare) ಪದ್ಧತಿಯಲ್ಲಿ ಎರಡು ಬಾರಿ ಕ್ಲೆನ್ಸಿಂಗ್ ಮಾಡುವ ಮೂಲಕ ಉತ್ತಮವಾಗಿ ಚರ್ಮದ ಮೇಲಿನ ಪದರು ಉದುರುವಂತೆ ಮಾಡಲಾಗುತ್ತದೆ. ಇದರಲ್ಲಿ ಮೊದಲು ತೈಲವನ್ನು (Oil) ಒಳಗೊಂಡ ಕ್ಲೆನ್ಸರ್ (Cleanser) ಉತ್ಪನ್ನವನ್ನು ಮುಖಕ್ಕೆ ಲೇಪಿಸಲಾಗುತ್ತದೆ. ನಂತರ, ನೀರು (Water) ಬಳಸಲಾಗುತ್ತದೆ. ಈ ಮೂಲಕ ಚರ್ಮದಲ್ಲಿರುವ ಕೊಳೆ, ಮೇಕಪ್ ಅಥವಾ ಹೆಚ್ಚುವರಿ ಜಿಡ್ಡನ್ನು ತೆಗೆಯಲಾಗುತ್ತದೆ. ಭಾರತೀಯರು (Indians) ಸಹ ಚರ್ಮದಲ್ಲಿ ಜಿಡ್ಡಿನಂಶ ಹೊಂದಿರುವುದು ಹಾಗೂ ಚರ್ಮವನ್ನು ಮಾಲಿನ್ಯಕ್ಕೆ ಒಡ್ಡುವುದು ಹೆಚ್ಚು. ಡಬಲ್ ಕ್ಲೆನ್ಸಿಂಗ್ ಪದ್ಧತಿ ಇಲ್ಲಿಯೂ ಸಹಕಾರಿಯಾಗುತ್ತದೆ ಎನ್ನುತ್ತಾರೆ ತಜ್ಞರು.
ಬೇಸಿಗೆಯಲ್ಲಿ ತ್ವಚೆ ಹಾಳಾಗುತ್ತೆ ಅಂತ ಪ್ರತಿದಿನ ಬಾಡಿ ಲೋಷನ್ ಹಚ್ಚಿದ್ರೆ ಹೀಗೆಲ್ಲಾ ಆಗುತ್ತೆ ನೋಡಿ!
ಚರ್ಮಕ್ಕೆ ಯಾವುದೇ ಹಾನಿ ಮಾಡಿಕೊಳ್ಳದೇ, ಶುಷ್ಕವಾಗಲು ಬಿಡದೇ ಡಬಲ್ ಕ್ಲೆನ್ಸಿಂಗ್ ಮಾಡಿಕೊಳ್ಳುವುದು ಅಗತ್ಯ. ಚರ್ಮದ ಮೇಲಿನ ಹುರುಪೆಗಳನ್ನು ಸರಿಯಾಗಿ ಉದುರಿಸುವುದು ಸಹ ಒಂದು ಕ್ರಮ. ಮೇಲಿರುವ ಸತ್ತ ಚರ್ಮ ಸರಿಯಾಗಿ ಉದುರಿದರೆ ಮುಖ ಹೊಳಪಿನಿಂದ (Radiates) ಕೂಡಿರುತ್ತದೆ. ರಂಧ್ರಗಳನ್ನು ಓಪನ್ ಮಾಡುವುದು, ಕಪ್ಪುಕಲೆಗಳನ್ನು ಮಸುಕಾಗಿಸುವುದು ಇದರಿಂದ ಸಾಧ್ಯ.
ಸ್ಕಿನ್ ಹೈಡ್ರೇಷನ್ (Skin Hydration)
ಚರ್ಮ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಮತ್ತೊಂದು ಉತ್ತಮ ಮಾರ್ಗ. ಚರ್ಮ ಶುಷ್ಕವಾಗಿದ್ದರೆ ಹೊಳಪು ಮಾಯವಾಗುತ್ತದೆ. ಆರೋಗ್ಯಕರ (Healthy) ಎನಿಸುವುದಿಲ್ಲ. ಕೆ-ಬ್ಯೂಟಿ ಪದ್ಧತಿ ಚರ್ಮದ ಹೈಡ್ರೇಷನ್ ಗೆ ಒತ್ತು ನೀಡುತ್ತದೆ. ರಕ್ತಸಾರ ಅಥವಾ ಸೀರಂ, ಆಂಪ್ಯೂಲ್, ಸುಗಂಧಭರಿತ ಹಗುರವಾದ (Lightweight) ಹೈಡ್ರೇಟಿಂಗ್ ಉತ್ಪನ್ನಗಳನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಕೊರಿಯನ್ (Korean) ಉತ್ಪನ್ನಗಳಲ್ಲಿ ಸೋಯಾಬೀನ್ ಅಂಶ, ಅಕ್ಕಿ ಸೇರಿದಂತೆ ಹುದುಗುಬರಿಸಿದ ಅಂಶಗಳನ್ನು ಕಾಣಬಹುದು. ಇವು ಅಲ್ಲಿ ಜನಪ್ರಿಯವಾಗಿವೆ. ಇವು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತವೆ. ಜಿಡ್ಡು ಉಂಟುಮಾಡದೇ ಪೋಷಕಾಂಶ ನೀಡುತ್ತವೆ.
ಇನ್ನು, ಮುಂದುವರಿದ ತಂತ್ರಜ್ಞಾನಗಳೂ ಕೊರಿಯನ್ ಪದ್ಧತಿಯಲ್ಲಿ ಕಾಣಬಹುದು. ಬಯೋ ರಿಮಾಡೆಲಿಂಗ್ ಮತ್ತು ಹೈಡ್ರೊಸ್ಟ್ರೆಚ್ ಥೆರಪಿಗಳು ಸಹ ಅಲ್ಲಿ ಜನಪ್ರಿಯ. ಚರ್ಮದ ತೇವಾಂಶವನ್ನು (Moisture) ಮರುಪಡೆಯಲು, ಮುಖದ ನೆರಿಗೆಗಳನ್ನು ತಡೆಗಟ್ಟು ಇವು ಸಹಕಾರಿ. ಪ್ರೊಫಿಲೊ ಎನ್ನುವ ಸ್ಕಿನ್ ಕೇರ್ ಉಪಚಾರ ಜನಪ್ರಿಯವಾಗಿದ್ದು, ಇದರಲ್ಲಿ ಅಲ್ಟ್ರಾಪ್ಯೂರ್ ಹೈಲಾರಿಕ್ ಆಸಿಡ್ ಬಳಕೆ ಮಾಡಲಾಗುತ್ತದೆ. ವಿಸ್ಕೊಡರ್ಮ್ ಸೇರಿದಂತೆ ಇನ್ನೂ ಹಲವು ಚಿಕಿತ್ಸೆಗಳು ಚರ್ಮಕ್ಕೆ ಯೌವನವನ್ನು ಮರುಕಳಿಸುತ್ತವೆ.
ಆಂಟಿಆಕ್ಸಿಡಂಟ್ಸ್ (Antioxidants) ಶಕ್ತಿ
ಚರ್ಮದ ಮೇಲೆ ಆಂಟಿಆಕ್ಸಿಡಂಟ್‌ಗಳ ಪ್ರಭಾವ ಅಧಿಕ. ಚರ್ಮವನ್ನು ಯಾವುದೇ ರೀತಿಯ ಹಾನಿಯಿಂದ ಇವು ತಡೆಗಟ್ಟುತ್ತವೆ ಹಾಗೂ ಚರ್ಮದ ವಯಸ್ಸಾಗುವಿಕೆಯನ್ನು ತಡೆಯುತ್ತವೆ. ಕೊರಿಯನ್ ಸ್ಕಿನ್ ಕೇರ್ ಉತ್ಪನ್ನಗಳು ವಿಟಮಿನ್ ಸಿ, ಗ್ರೀನ್ ಟೀ, ನಿಯಾಸಿನಮೈಡ್ ನಂತಹ ಹಲವಾರು ಆಂಟಿಆಕ್ಸಿಡಂಟ್ ಗಳಿಂದ ಕೂಡಿರುತ್ತವೆ. ಇವು ಚರ್ಮದಲ್ಲಿ ಉರಿಯೂತವಾಗದಂತೆ ಮಾಡಿ ಮೈ ಬಣ್ಣವನ್ನು ಆರೋಗ್ಯಕರವಾಗಿ ಹೆಚ್ಚಿಸುತ್ತವೆ. ಇಂತಹ ಅಂಶಗಳ ಬಳಕೆ ಮಾಡುವುದು ಭಾರತೀಯರ ಚರ್ಮಕ್ಕೂ ಅನುಕೂಲ.
ಶೀಟ್ ಮಾಸ್ಕ್ (Sheet Mask)
ಶೀಟ್ ಮಾಸ್ಕ್‌ಗಳು ಕೊರಿಯನ್ ಸ್ಕಿನ್‌ಕೇರ್ ಪದ್ಧತಿಯಾಗಿವೆ. ಇವು ಚರ್ಮಕ್ಕೆ ಬೇಕಾದ ಪೋಷಕಾಂಶಗಳನ್ನು ತ್ವರಿತವಾಗಿ ನೀಡುತ್ತವೆ. ಹೈಲಾರಿಕ್ ಆಸಿಡ್, ಕೊಲಾಜನ್ ಸೇರಿದಂತೆ ಗ್ರೀನ್ ಟೀ, ಸೌತೆಕಾಯಿ, ಜೆಲ್ಲಿ, ಚಾರ್ಕೋಲ್, ಮುತ್ತು, ಬಸವನಹುಳುವಿನ ಅಂಶ ಸೇರಿದಂತೆ ಹಲವಾರು ನೈಸರ್ಗಿಕ (Natural) ವಸ್ತುಗಳಿಂದ ಶೀಟ್ ಮಾಸ್ಕ್ ತಯಾರಿಸಲಾಗುತ್ತದೆ. ಇವುಗಳಿಂದ ಚರ್ಮಕ್ಕೆ ಆಳವಾದ ಹೈಡ್ರೇಷನ್ ದೊರೆತು ಮೃದು (Soft) ವಾಗುತ್ತದೆ, ಆರೋಗ್ಯಕರವಾಗಿ ಹೊಳೆಯುತ್ತದೆ.
ಫೇರ್‌ನೆಸ್ ಕ್ರೀಂ ಅತಿಯಾಗಿ ಬಳಸ್ತೀರಾ? ಕಿಡ್ನಿ ಸಮಸ್ಯೆ ಬರಬಹುದು ಎಚ್ಚರ!
ಲೇಯರಿಂಗ್ (Layering) ತಂತ್ರಗಳು
ಕೆ ಬ್ಯೂಟಿ ಲೇಯರಿಂಗ್ ತಂತ್ರಗಳು ಎಂದರೆ ಬೇರೇನೂ ಅಲ್ಲ. ಸ್ಕಿನ್‌ಕೇರ್ ಉತ್ಪನ್ನಗಳು ನಿರ್ದಿಷ್ಟ ಪ್ರಮಾಣದಲ್ಲಿ ನಿರ್ದಿಷ್ಟ ಚರ್ಮಕ್ಕೆ ಹಚ್ಚಿಕೊಳ್ಳುವುದು. ಇದರಿಂದ ಅವುಗಳ ದಕ್ಷತೆ (Efficacy) ಹೆಚ್ಚುವಂತೆ, ಚರ್ಮಕ್ಕೆ ಹೆಚ್ಚು ಲಾಭವಾಗುವಂತೆ ಮಾಡಬಹುದು. ಚರ್ಮಕ್ಕೆ ಮೊದಲು ಹಗುರವಾದ ಉತ್ಪನ್ನಗಳಾದ ಟೋನರ್ ಅಥವಾ ಎಸೆನ್ಸ್ ಗಳನ್ನು ಹಚ್ಚುವುದು, ನಂತರ ಸೀರಂ ಅಥವಾ ಕ್ರೀಮ್‌ನಂತಹ ತುಸು ಭಾರದ ಅಂಶಗಳನ್ನು ಲೇಪಿಸುವುದು. ಈ ಪದ್ಧತಿ ಅನುಸರಿಸುವುದರಿಂದ ಅವುಗಳಲ್ಲಿರುವ ಆಕ್ಟಿವ್ ಇನ್ ಗ್ರೇಡಿಯಂಟ್ಸ್ ಹೆಚ್ಚು ಹೀರಿಕೊಳ್ಳಲು ಸಹಾಯವಾಗುತ್ತದೆ.