ಕ್ಸೆನಿಯಾ ಕಾರ್ಪೋವಾ ಎಂಬ ಯುವತಿ ತನ್ನ ಸ್ಲಿಮ್ ದೇಹಕ್ಕೆ ಕಾರಣವಾಗಿರುವ ಆಹಾರ ಪದ್ಧತಿಯನ್ನು ಬಹಿರಂಗಪಡಿಸಿದ್ದಾರೆ. ಅವರ ಆಹಾರ ಪದ್ಧತಿಯು ಅನೇಕರಲ್ಲಿ ಕುತೂಹಲ ಮೂಡಿಸಿದೆ ಮತ್ತು ಆರೋಗ್ಯದ ಬಗ್ಗೆ ಚಿಂತೆಯನ್ನೂ ಹುಟ್ಟುಹಾಕಿದೆ.

ಇತ್ತೀಚಿನ ದಿನಗಳಲ್ಲಿ ದೈಹಿಕವಾಗಿ ಸದೃಢವಾಗಿರುವುದಕ್ಕೆ ಹಾಗೂ ತಮ್ಮ ದೇಹವನ್ನು ಸಪೂರವಾಗಿ ಇಟ್ಟುಕೊಳ್ಳುವುದಕ್ಕೆ ಭಾರೀ ಕಸರತ್ತು ಮಾಡುತ್ತಾರೆ. ಇರುವುದೊಂದೇ ಜೀವನ ಎಲ್ಲವನ್ನೂ ತಿನ್ನೋಣ ಎನ್ನುವ ಮನೋಭಾವನೆಯನ್ನು ಬಿಟ್ಟು, ಡಯಟ್ ಫುಡ್ ಎಂದು ಕೋಳಿ ತಿನ್ನುವಷ್ಟು ಆಹಾರ ತಿಂದು ಕೈತೊಳೆದುಕೊಂಡು ದೇಹ ದಂಡಿಸುತ್ತಾರೆ. ಈ ಮೂಲಕ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ, ಇಲ್ಲೊಬ್ಬ ಯುವತಿ ಸಿಕ್ಕಿದ್ದೆಲ್ಲವನ್ನು ತಿಂದು ಹೇಗೆ ತೆಳ್ಳಗಿದ್ದಾಳೆ ನೀವೇ ನೋಡಿ..

ಅಂದರೆ, ನಾವೆಲ್ಲರೂ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಏನೇನೋ ಮಾಡ್ತೀವಿ. ಆದರೆ ಸರಿಯಾದ ಡಯಟ್, ವ್ಯಾಯಾಮ ಇಲ್ಲದಿದ್ದರೆ ನಾವು ಮಾಡುವ ತೆಳ್ಳಗಾಗುವ ಒಳ್ಳೆಯ ಪ್ರಯತ್ನವೂ ನಮಗೆ ಮುಳುವಾಗಿ ಕಾಡುತ್ತದೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ದಿನಾ ಏನ್ ತಿಂತೀವಿ, ಯಾವ ವ್ಯಾಯಾಮ ಮಾಡುತ್ತೇವೆ ಎಂದು ಹೇಳಿ ಕೊಡುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಹಾಗೆಂದು ಅವುಗಳನ್ನು ನೋಡುವವರ ಸಂಖ್ಯೆಯೇನೂ ಕಡಿಮೆ ಆಗುತ್ತಿಲ್ಲ. ಅಂತಹ ಎಲ್ಲ ವಿಡಿಯೋಗಳಿಗೂ ಲಕ್ಷಾಂತರ ವೀಕ್ಷಣೆಗಳು ಹಾಗೂ ಸಾವಿರಾರು ಲೈಕ್ಸ್‌ಗಳು ಬರುತ್ತವೆ.

ಅದೇ ರೀತಿ ಮಾಸ್ಕೋದ ಕ್ಸೆನಿಯಾ ಕಾರ್ಪೋವಾ ಅನ್ನೋರು ದಿನಾ ಏನ್ ತಿಂತಾರೆ ಅನ್ನೋ ವಿಡಿಯೋ ಹಾಕಿದ್ದು ಈಗ ಚರ್ಚೆಯಾಗುತ್ತಿದೆ. ಬೆಳಗ್ಗೆ ರೈಸ್ ಕೇಕ್, ಸೌತೆಕಾಯಿ, ಮೊಟ್ಟೆ ತಿಂತೀನಿ ಎಂದು ಹೇಳುತ್ತಾರೆ. ಇದಲ್ಲದೆ ಸಕ್ಕರೆ ಇಲ್ಲದ ಐಸ್ ಕ್ರೀಮ್, ಸಿನ್ನಮನ್ ರೋಲ್ಸ್ ಇತ್ಯಾದಿ ತಿಂಡಿಗಳನ್ನೂ ತಿನ್ನುವುದಾಗಿ ತಿಳಿಸಿದ್ದಾರೆ. ಜೊತೆಗೆ, ಪ್ರತಿದಿನ ನಾನು ಕನಿಷ್ಠ 25,000 ಹೆಜ್ಜೆಗಳನ್ನು ನಡೆಯುತ್ತೀನಿ. ಈ ಮೂಲಕ ನನ್ನ ದೇಹದಲ್ಲಿನ ಎಲ್ಲ ಕೊಬ್ಬಿನಾಂಶವನ್ನು ಕಳೆದುಕೊಳ್ಳುವುದಾಗಿ ಹೇಳಿದ್ದಾಳೆ.

ಇದನ್ನೂ ಓದಿ: ಏನೋ ಮಾಡಲು ಹೋಗಿ ಬಂದ್ ಆಯ್ತು ಬಾಯಿ: ವೈರಲ್ ವಿಡಿಯೋ

View post on Instagram

ಆದರೆ, ಈ ವಿಡಿಯೋವನ್ನು ನೋಡಿದ ಎಲ್ಲ ನೆಟ್ಟಿಗರು ಆಕೆಯ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಕಾರಣ ಈ ವಿಡಿಯೋದಲ್ಲಿ ಆಕೆ ತುಂಬಾ ಸ್ಲಿಮ್ ಆಗಿ ಕಾಣುತ್ತಿದ್ದಾಳೆ ನಿಜ. ಆದರೆ, ಆಕೆಯ ದೇಹದಲ್ಲಿರುವ ಎಲ್ಲಾ ಎಲುಬುಗಳು ಕಾಣುತ್ತಿವೆ. ಈಕೆ ಹೇಗಿದ್ದಾಳೆಂದರೆ ಮೂಳೆಗಳಿಗೆ ಚರ್ಮ ಸುತ್ತಿದಂತಿದ್ದಾಳೆ. ಹೀಗೆ ಕಾಣುವ ಈಕೆಯನ್ನು ನೋಡಿ, ನೀವು ಹೇಳಿದ ಎಲ್ಲ ಆಹಾರಗಳನ್ನು ನಿಜವಾಗಿಯೂ ತಿನ್ನುತ್ತೀರಾ ಎಂದು ಕುತೂಹಲದಿಂದ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಆಕೆಯ ಮುಖ ನೋಡಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್ ಮಾಡಿದ ಕಾರನ್ನು ಹೋಗಲು ಬಿಟ್ಟ ಪೊಲೀಸರು..!

ನೋಡಲು ಸಣಕಲು ಕಡ್ಡಿಯಂತಿರುವ ನೀವು ಇಲ್ಲಿ ಹೇಳಿರುವ ಎಲ್ಲ ಆಹಾರ ತಿನ್ನುತ್ತೀರಿ ಎಂಬುದರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಆದರೆ, ಆಕೆ ನಿಜಕ್ಕೂ 178 ಸೆಂ.ಮೀ ಎತ್ತರವಿದ್ದು, ಆಕೆಯ ದೇಹದ ತೂಕ 50 ಕೆ.ಜಿ. ಇದೆ ಎಂದು ಹೇಳಿದ್ದಾಳೆ. ಅಂದರೆ ಇದು ವೈಜ್ಞಾನಿಕವಾಗಿ ಆರೋಗ್ಯವಂತ ವ್ಯಕ್ತಿಗೆ ಇರುವ ದೇಹದ ತೂಕವಾಗಿದೆ. ಆದರೆ, ಆಕೆಯ ದೇಹದಲ್ಲಿ ಕಾಣುವ ಮೂಳೆಗಳನ್ನು ನೋಡಿದ ಜನರು ಇಷ್ಟೊಂದು ತೆಳ್ಳಗಿರುವುದು ನಿನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಕಮೆಂಟ್ ಮೂಲಕ ಆಕೆಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.