ಇಲ್ಲೊಬ್ಬ ಕೆಲಸವಿಲ್ಲದ ಮೂಢಾತ್ಮ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕಾಗಿ ಕ್ಯಾಮರಾ ರೆಕಾರ್ಡಿಂಗ್‌ನಲ್ಲಿಟ್ಟು ತನ್ನ ತುಟಿಗಳಿಗೆ ಈ ಫಾಸ್ಟ್‌ಗಮ್ ಹಾಕಿ ಅಂಟಿಸಿಕೊಂಡಿದ್ದಾನೆ. ಮುಂದೇನಾಯ್ತು ನೋಡಿ.
ಸಾಮಾಜಿಕ ಜಾಲತಾಣದಿಂದಾಗಿ ಇಂದು ಹೇಗಿದ್ದವರು ಹೇಗೋ ಆಗಿದ್ದಾರೆ. ಇನ್ನು ಕೆಲವರು ಇನ್ನೇನೂ ಆಗುವುದಕ್ಕೆ ಪ್ರಯತ್ನಿಸುತ್ತಾರೆ. ಇದಕ್ಕಾಗಿ ಮಾಡಬಾರದ ಸಾಹಸ ಮಾಡಲು ಹೋಗಿ ಅನಾಹುತ ಸೃಷ್ಟಿಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವುದಕ್ಕೆ ವಿಚಿತ್ರ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡಂತಹ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಆದರೂ ಕೆಲ ಇನ್‌ಫ್ಲುಯೆನ್ಸರ್‌ಗಳ ಹುಚ್ಚು ಸಾಹಸಗಳು ಕಡಿಮೆ ಆಗಿಲ್ಲ, ಕೆಲವರು ಇದರಿಂದ ಮೋನಾಲಿಸಾ ರೀತಿ ರಾತ್ರೋರಾತ್ರಿ ಫೇಮಸ್ ಆಗಿದ್ದರೆ, ಮತ್ತೆ ಕೆಲವರು ಪಡಬಾರದ ಪಾಡು ಪಟ್ಟಿದ್ದಾರೆ. ಅದೇ ರೀತಿ ಇಲ್ಲೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಸ್ಟಂಟ್ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾಗಂತ ಆತ ಅಂತಹ ದೊಡ್ಡ ಸಾಹಸವೇನು ಮಾಡಿಲ್ಲ, ಆದರೆ ಮಾಡಬಾರದನ್ನ ಮಾಡಿದ್ದಾನೆ. ಹಾಗಿದ್ರೆ ಆತ ಏನು ಮಾಡಿದ ಎಂಬುದು ವೀಡಿಯೋದಲ್ಲಿದೆ ಮುಂದೆ ಹೋಗಿ
ಚಪ್ಪಲಿಗಳಿಗೆ ಫಾಸ್ಟ್‌ಗಮ್ ಹಾಕಿ ಅಂಟಿಸುವುದನ್ನು ನೀವು ನೋಡಿರಬಹುದು. ಇದರ ಜೊತೆಗೆ ಇನ್ನು ಅನೇಕ ತುಂಡಾಗಿರುವುದನ್ನು ಅಂಟಿಸುವಂತಹ ಕೆಲಸಕ್ಕೆ ಈ ಫಸ್ಟ್ ಗಮ್ ಕೆಲಸಕ್ಕೆ ಬರುವುದು. ಈ ಫಸ್ಟ್ ಗಮನ್ನು ಈ ರೀತಿ ಅಂಟಿಸುವಾಗ ಬಹಳ ಜಾಗರೂಕವಾಗಿ ಕೈಗೆ ಮೈಗೆ ಅಂಟದಂತೆ ನೋಡಿಕೊಳ್ಳಲಾಗುತ್ತದೆ. ಏಕೆಂದರೆ ಇದು ಒಮ್ಮೆ ಕೈಗೆ ಅಂಟಿದರೆ ಕೈ ಸಿಪ್ಪೆ ಸುಲಿಕೊಂಡೆ ಬೆರಳುಗಳನ್ನು ಬೇರ್ಪಡಿಸಬೇಕಷ್ಟೇ ಅಷ್ಟೊಂದು ಪರಿಣಾಮಕಾರಿಯಾಗಿರುವ ಈ ಗಮ್ ಅತ್ಯಂತ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ ಇಲ್ಲೊಬ್ಬ ಕೆಲಸವಿಲ್ಲದ ಮೂಢಾತ್ಮ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕಾಗಿ ಕ್ಯಾಮರಾ ರೆಕಾರ್ಡಿಂಗ್‌ನಲ್ಲಿಟ್ಟು ತನ್ನ ತುಟಿಗಳಿಗೆ ಈ ಫಾಸ್ಟ್‌ಗಮ್ ಹಾಕಿ ಅಂಟಿಸಿಕೊಂಡಿದ್ದಾನೆ. ಕೂಡಲೇ ಈತನ ಬಾಯಿ ಬಂದ್ ಆಗಿದ್ದು, ಆದರ ವಾಸನೆಗೆ ಉಸಿರು ಕೂಡ ಕಟ್ಟಿದಂತಾಗಿದೆ. ಆದರೆ ಬಾಯನ್ನು ತೆರೆಯಲು ಸಾಧ್ಯವಾಗದೇ ಸಂಕಟ ಪಟ್ಟಿದ್ದಾನೆ.
ಈತನ ವೀಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜನ ಈತನ ಮೂರ್ಖತನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಬಡಿಸ್ ಟಿವಿ ಎಂಬ ಪೇಜ್‌ನಿಂದ ಪೇಸ್ಟ್ ಮಾಡಲಾಗಿದೆ. ಈತ ಅರಿವಿದ್ದೇ ಈ ಕೆಲಸ ಮಾಡಿದ್ದಾನೋ ಅಥವಾ ಅರಿವಿಲ್ಲದೆಯೇ ಮಾಡಿದ್ದಾನೋ ಎಂಬುದು ಗೊತ್ತಿಲ್ಲ, ಮೊದಲಿಗೆ ನಗುವಿನೊಂದಿಗೆ ವೀಡಿಯೋ ಶುರು ಮಾಡಿದ ಈತ ಅಳುವಿನೊಂದಿಗೆ ವೀಡಿಯೋ ಮುಗಿಸುವಂತಾಗಿದೆ. ಆದರೆ ಈತನ ಕತೆ ಮುಂದೇನಾಯ್ತು ಎಂಬುದು ವೀಡಿಯೋದಲ್ಲಿ ಇಲ್ಲ, ಈ ವೀಡಿಯೋ ನೋಡಿದ ಸಾಮಾಜಿಕ ಜಾಲತಾಣಿಗರು ಕೂಡ ಹಲವು ಕಾಮೆಂಟ್ ಮಾಡಿದ್ದಾರೆ. ಕೆಲವರು ಸ್ವಲ್ಪ ಹಾಗೆ ಕಣ್ಣಿಗೂ ಹಾಕಬೇಕಿತ್ತು ಎಂದಿದ್ದಾರೆ. ಹಾಗೆಯೇ ಕೆಲವರು ಆತನಿಗೆ ಕಾಮೆಂಟ್‌ನಲ್ಲಿ ಬ್ಲೇಡ್ ಕಳುಹಿಸಿದ್ದಾರೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
