ಟ್ಯಾಟೂ ಕ್ರೇಜ್‌ನ ಹೆಚ್ಚಾಗ್ತಿದೆ. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಹಾಗೂ ನಂತರ ಎಚ್ಚರ ವಹಿಸುವುದು ಅತ್ಯಗತ್ಯ.  ಟ್ಯಾಟೂ ಕಲಾವಿದ ಗ್ಲೌಸ್ ಧರಿಸಿರುವನೇ, ಶುದ್ಧೀಕರಿಸಿದ ಸೂಜಿ ಬಳಸುತ್ತಿರುವನೇ ಎಂಬುದನ್ನು ಗಮನಿಸಿ. ಮೊದಲಿಗೆ ಒಂದೇ ಟ್ಯಾಟೂ ಹಾಕಿಸಿಕೊಳ್ಳುವುದು ಒಳಿತು.  ಮಾದಕ ದ್ರವ್ಯ ಅಥವಾ ಮದ್ಯಸೇವನೆ ಮಾಡಿ ಟ್ಯಾಟೂ ಹಾಕಿಸಿಕೊಳ್ಳುವುದು ಹಿತಕರವಲ್ಲ. 

- ರಾಜೇಶ್ವರಿ ಜಯಕೃಷ್ಣ

- ಅನಾರೋಗ್ಯವಿದ್ದಾಗಲೂ ಟ್ಯಾಟೂ ಹಾಕಿಸಿಕೊಳ್ಳಬಾರದು.
- ಟ್ಯಾಟೂ ಹಾಕಿಸಿದ ಇಪ್ಪತ್ತನಾಲ್ಕು ಗಂಟೆಯಲ್ಲಿ ಬ್ಯಾಂಡೇಜ್ ತೆಗೆದು ಬ್ಯಾಕ್ಟೀರಿಯಾ ನಾಶಕ ಮುಲಾಮನ್ನು ಹಚ್ಚಿ. ಗಾಯ ಮಾಯುವವರೆಗೆ ಪ್ರಖರ ಬಿಸಿಲಿಗೆ ಹೋಗದಿರಿ; ಈಜುವುದೂ ಬೇಡ.

- ಟ್ಯಾಟೂ ಹಾಕಿಸಿದ ಕೆಲ ತಿಂಗಳವರೆಗೂ ರಕ್ತದಾನ ಮಾಡದಿರಲು ವೈದ್ಯರು ಸೂಚಿಸುತ್ತಾರೆ.

- ಸೂಕ್ತ ಡಿಸೈನ್ ಮೂಡಿಸುವುದಕ್ಕೋಸ್ಕರ ಸೂಜಿಯನ್ನು ಕೆಲವೊಮ್ಮೆ ಶುದ್ಧೀಕರಣ ಮಾಡುವುದಿಲ್ಲ. ಆಗ ಸೋಂಕು ರೋಗಗಳು ತಗಲುವ ಸಂಭವ ಜಾಸ್ತಿ. ಹೆಪಟೈಟಿಸ್ ಬಿ ಮತ್ತು ಸಿ, ಟೆಟಾನಸ್ ಮುಂತಾದ ರಕ್ತಸಂಬಂಧಿ ರೋಗಗಳು ಬರಬಹುದು. ಎಚ್.ಐ.ವಿ ಬರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಎಚ್ಚರ ವಹಿಸಿ.

- ಟ್ಯಾಟೂಗೆ ಬಳಸುವ ಶಾಯಿಯಿಂದ ಚರ್ಮ ಕೆಂಪಗಾಗಿ ಊದಿಕೊಂಡು ಕೀವಾಗಬಹುದು. ಮಚ್ಚೆಗಳ ಮೇಲೆ ಟ್ಯಾಟೂ ಹಾಕಿಸಿದರೆ ರೋಗಗಳ ಪರೀಕ್ಷೆ-ಪತ್ತೆಗೆ ಅಡ್ಡಿಯಾಗಬಹುದು.

- ಶಾಶ್ವತ ಟ್ಯಾಟೂ ಹಾಕಿಸಿದವರು ಮತ್ತೆ ಅದನ್ನು ತೆಗೆಸಬೇಕೆಂದರೂ ಕಷ್ಟಸಾಧ್ಯ. ಲೇಸರ್ ಚಿಕಿತ್ಸೆಯಿಂದ ತೆಗೆಯಬಹುದಾದರೂ ಬಹಳಷ್ಟು ಅಡಚಣೆ, ರಿಸ್ಕ್‌ಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಟ್ಯಾಟೂ ತನಗೆ ಬೇಕೇ ಬೇಡವೇ ಎಂದು ಮತ್ತೊಮ್ಮೆ ಮಗದೊಮ್ಮೆ ಯೋಚಿಸಿ.