ನಂತರ ಆಕೆಗೆ ಮದುವೆಯಾಗುವುದಾಗಿ ನಂಬಿಸಿ 10ಕ್ಕೂ ಹೆಚ್ಚು ಭಾರಿ ಆಕೆಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ಈಕೆಯನ್ನ ಲೈಂಗಿಕ ಕ್ರಿಯೆಗೆ ಬಳಸಿಕೋಳ್ಳಲು ಲಕ್ಷಗಟ್ಟಲೇ ಸಾಲ  ಮಾಡಿ ಆಕೆಯನ್ನ ಫಾರಿನ್​ ಟ್ರಿಪ್​​ಗಳಿಗೆ ಕರೆದುಕೊಂಡು ಹೋಗಿದ್ದಾನೆ.

ಮದುವೆಗಾಗಿ ಸಾಲ ಮಾಡಿದ್ದು ನೋಡಿದ್ದಿವಿ , ಮಾಡಿದ್ದ ಸಾಲವನ್ನ ತೀರಿಸೋಕೆ ಸಾಲ ಮಾಡಿದ್ದನ್ನ ನೋಡಿದ್ದೀವಿ ಆದರೆ ಇಲ್ಲೊಬ್ಬ ಅಸಾಮಿ ಯುವತಿಗಾಗಿ ಬರೋಬ್ಬರಿ 80 ಲಕ್ಷ ರೂ. ಸಾಲ ಮಾಡಿರೋ ಘಟನೆ ಜಯನಗರ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಈಗೇ ಸಾಲ ಮಾಡಿ ಜೈಲು ಸೇರಿದ್ದು ಬೇರಾರು ಅಲ್ಲ ಜಯನಗರ ಮೂಲದ ಸಾಪ್ಟ್​​ವೇರ್ ಇಂಜೀನಿಯರ್​​ ಅಜಯ್​​ ಎಂಬಾತ . ​​ ಕಳೆದ ಒಂದು ವರ್ಷದ ಹಿಂದೆ ಫೇಸ್​ಬುಕ್​ನಲ್ಲಿ ಜಯನಗರದ ಮೂಲದ ಯುವತಿಯೊಬ್ಬಳನ್ನ ಪರಿಚಯ ಮಾಡಿಕೊಂಡಿದ್ದಾನೆ. ಫೇಸ್​​ಬುಕ್​ನಲ್ಲಿ ಪರಿಚಯವಾದ ಒಂದು ವಾರದ ನಂತರ ಯುವತಿಯನ್ನ ರೆಸ್ಟೋರೆಂಟ್​​ನಲ್ಲಿ ಭೇಟಿ ಮಾಡಿ ಪ್ರೀತಿ ನಿವೇದನೆ ಮಾಡಿದ್ದಾನೆ.

ನಂತರ ಆಕೆಗೆ ಮದುವೆಯಾಗುವುದಾಗಿ ನಂಬಿಸಿ 10ಕ್ಕೂ ಹೆಚ್ಚು ಭಾರಿ ಆಕೆಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ಈಕೆಯನ್ನ ಲೈಂಗಿಕ ಕ್ರಿಯೆಗೆ ಬಳಸಿಕೋಳ್ಳಲು ಲಕ್ಷಗಟ್ಟಲೇ ಸಾಲ ಮಾಡಿ ಆಕೆಯನ್ನ ಫಾರಿನ್​ ಟ್ರಿಪ್​​ಗಳಿಗೆ ಕರೆದುಕೊಂಡು ಹೋಗಿದ್ದಾನೆ. ಹೀಗೆ ಟ್ರಿಪ್​ಗೆ ಕರೆದುಕೊಂಡು ಹೊದಂತ ಸಂದಂಭದಲ್ಲಿ ಆಕೆಯನ್ನ ನಿರಂತರವಾಗಿ ನಂಬಿಸಿ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ನಂತರ ತನ್ನ ಮನೆಯವರು ಮದುವೆಗೆ ಒಪ್ಪುತ್ತಿಲ್ಲ ಎಂದು ಯುವತಿಗೆ ಕೈಕೊಟ್ಟಿ ಎಸ್ಕೇಪ್​​ ಆಗಿದ್ದಾನೆ. ಈ ಸಂಬಂಧ ಜಯನಗರ ಪೊಲೀಸ್​​ ಠಾಣೆಯಲ್ಲಿ ಯುವಕನ ವಿರುದ್ಧ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಾಳೆ . ಪ್ರಕರಣ ಸಂಬಂಧ ಆರೋಪಿ ಅಜಯ್​ನನ್ನ ಜಯನಗರ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.