Asianet Suvarna News Asianet Suvarna News

ಕದ್ದು ಕಬ್ಬು ತಿನ್ನೋವಾಗ ಸಿಕ್ಕಿಬಿತ್ತು ಪುಟ್ಟ ಆನೆ..! ಆಮೇಲೇನಾಯ್ತು ನೋಡಿ

ಕದ್ದು ಹೊಲಕ್ಕೆ ನುಗ್ಗಿ ಸಿಹಿ ಕಬ್ಬು ತಿನ್ನುತ್ತಿದ್ದ ಮುದ್ದು ಆನೆ ಮರಿಯೊಂದು ಸಿಕ್ಕಿಬಿದ್ದಿದೆ. ಮುಂದೇನಾಯ್ತು ನೋಡಿ..

Baby Elephant Caught Eating Sugarcane Tries To Hide Behind A Pole dpl
Author
Bangalore, First Published Nov 20, 2020, 2:50 PM IST

ಪ್ರಾಣಿ ಪಕ್ಷಿಗಳು ಕೆಲವೊಮ್ಮೆ ಜನರ ಮಧ್ಯೆ ಸಿಕ್ಕಿ ಮುದ್ದು ಮುದ್ದಾಗಿ ವರ್ತಿಸುತ್ತವೆ. ಅವುಗಳ ವಿಡಿಯೋ, ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಕಬ್ಬು ಕದ್ದು ತಿನ್ನೋಕೆ ಬಂದ ಆನೆಮರಿಯೊಂದು ಏನು ಮಾಡಿದೆ ನೋಡಿ.

ಕಬ್ಬಿನ ಗದ್ದೆಗೆ ನುಗ್ಗಿ ಕಬ್ಬಯ ಸವಿದಾಗ ಪುಟ್ಟ ಆನೆ ಮರಿ ಸಿಕ್ಕಿಬಿದ್ದಿದೆ. ಇನ್ನೇನು ಮಾಡೋದು ಅಂತ ಅತ್ತಿದ್ದ ನೋಡಿ, ತನ್ನ ದೇಹವನ್ನು ಸರಿಯಾಗಿ ಅಡಗಿಸಿಕೊಳ್ಳಲಾಗದಿದ್ದರೂ, ಆದಷ್ಟು ಅಡಗಿಕೊಳ್ಳೋ ಪ್ರಯತ್ನ ಮಾಡಿದೆ ಮುದ್ದು ಆನೆ ಮರಿ.

ಶ್ರೀಕುಟ್ಟಿ ಫುಲ್ ಹ್ಯಾಪಿ: ಪುಟ್ಟ ಆನೆ ಮರಿಯ ಬರ್ತ್‌ಡೇ ಹೀಗಿತ್ತು ನೋಡಿ

ಮುದ್ದಾದ ಕಬ್ಬು ಕಳ್ಳ ಥಾಯ್‌ಲೆಂಡ್‌ನ ಚಿನಾಗ್ ಮೈನಲ್ಲಿ ರೆಡ್‌ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದೆ. ಖುಷಿಯಿಂದ ಕಬ್ಬು ತಿನ್ನುತ್ತಿದ್ದ ಆನೆ ತನ್ನತ್ತ ಜನ ಬರೋದನ್ನು ನೋಡಿ ಓಡಿ ಹೋಗಿಲ್ಲ, ಜನರ ಮೇಲೆ ದಾಳಿ ಮಾಡೋಕು ಬರಲಿಲ್ಲ, ಬದಲಾಗಿ ಮುದ್ದುಮುದ್ದಾಗಿ ಸಣ್ಣ ಕಂಬದ ಹಿಂದೆ ಅಡಗಿಕೊಂಡಿದೆ.

ಕಾಡಿಗೆ ಹೊರಡಲು ಸಿದ್ಧವಾಗಿದ್ದ ಅಭಿಮನ್ಯು ನೋಡಲು ಅರಮನೆ ಆವರಣಕ್ಕೆ ಬಂದ ಆದ್ಯವೀರ್

ಆನೆ ಅಡಗಿಕೊಂಡಿರುವ ಫೋಟೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದು, ಆನೆಯನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಹಿಂದೊಮ್ಮೆ ಗಾಡಿಯಲ್ಲಿದ್ದೇ ಪಕ್ಕದ ಗಾಡಿಯಿಂದ ಕಬ್ಬು ತಿನ್ನುವ ಆನೆಯ ವಿಡಿಯೋ ವೈರಲ್ ಆಗಿತ್ತು.

Follow Us:
Download App:
  • android
  • ios