Asianet Suvarna News Asianet Suvarna News

ಕಾಡಿಗೆ ಹೊರಡಲು ಸಿದ್ಧವಾಗಿದ್ದ ಅಭಿಮನ್ಯು ನೋಡಲು ಅರಮನೆ ಆವರಣಕ್ಕೆ ಬಂದ ಆದ್ಯವೀರ್

ಇನ್ನೇನು ಆನೆಗಳು ಕಾಡಿಗೆ ಹೊರಬೇಕು ಅಷ್ಟರಲ್ಲೇ ಅರಮನೆ ಆವರಣಕ್ಕೆ ಬಂದ ಆದ್ಯವೀರ್ ಅವುಗಳಿಗೆ ಬೀಳ್ಕೊಟ್ಟಿದ್ದಾರೆ

Yaduveer Wadiyar Round Palace With Son Adyaduveer snr
Author
Bengaluru, First Published Oct 29, 2020, 11:33 AM IST

ಮೈಸೂರು (ಅ.29):  ನಾಡಹಬ್ಬ ದಸರಾ ಮಹೋತ್ಸವ, ಖಾಸಗಿ ದರ್ಬಾರ್‌ ಮತ್ತಿತರ ಕಾರಣದಿಂದ ಕೆಲಸದ ಒತ್ತಡದಲ್ಲಿದ್ದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌   ಮಗನೊಂದಿಗೆ ಅರಮನೆ ಆವರಣದಲ್ಲಿ ಸುತ್ತಾಡಿದರು.

ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಆನೆಗಳು  ಮರಳಿ ಕಾಡಿಗೆ ತೆರಳುತ್ತಿದ್ದವು. ಅರಮನೆ ಆವರಣದಲ್ಲಿ ಆನೆಗಳ ಬಿಡಾರ ಖಾಲಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಯದುವೀರ್‌ ಅವರು ಪುತ್ರ ಆದ್ಯವೀರ್‌ ಜೊತೆ ಕಾರಿನಲ್ಲಿ ಅರಮನೆ ಆವರಣದಲ್ಲಿ ಸುತ್ತಾಡಿದ್ದಾರೆ. ಮೊದಲು ಅರಮನೆಯ ಸೋಮೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಗಜಪಡೆಗೆ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿ ಪಾಲ್ಗೊಂಡರು.

'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' ...

ಈ ವೇಳೆ ಮಗನಿಗೆ ಆನೆಗಳನ್ನು ತೋರಿಸಿ ಸಂಭ್ರಮಿಸಿದರು. ನಂತರ ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಕ್ಯಾಪ್ಟನ್‌ ಅಭಿಮನ್ಯೂ ಜೊತೆ ಯದುವೀರ್‌ ಮತ್ತು ಆದ್ಯವೀರ್‌ ಫೋಟೋ ತೆಗೆಸಿಕೊಂಡರು. ಈ ವೇಳೆ ಪುತ್ರ ಆದ್ಯವೀರ್‌ ಅಭಿಮನ್ಯು ಆನೆಯನ್ನು ಮುಟ್ಟಿ ಸಂತಪಟ್ಟ. ನಂತರ ಕಾರಿನಲ್ಲಿಯೇ ಅರಮನೆ ಸುತ್ತ ಒಂದು ಸುತ್ತು ಹಾಕಿದರು.

Follow Us:
Download App:
  • android
  • ios