ಎಂಗ್ ಆ್ಯಂಡ್ ಎನರ್ಜಿಟಿಕ್ ಆಗಿರಲು ಈ ಫುಡ್‌ಗೆ ಬೈ ಹೇಳಿ

First Published 15, Jul 2018, 8:47 AM IST
Avoid these foods to be young and energetic
Highlights

ನಾವು ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ, ಅದೇ ರೀತಿ ನಮ್ಮ ಅರೋಗ್ಯ ಇರುತ್ತದೆ. ಒಂದೊಂದು ಆಹಾರವು ದೇಹಕ್ಕೆ ಒಂದೊಂದು ಲಾಭ ನೀಡುತ್ತದೆ. ಕೆಲವೊಮ್ಮೆ ನೀವು ಸೇವನೆ ಮಾಡುವ ಆಹಾರಗಳು ನಿಮ್ಮನ್ನು ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ. ನಿಮಗೆ ಹೀಗೆ ಕಾಣೋದು ಇಷ್ಟವಿಲ್ಲ ತಾನೇ? ಹಾಗಿದ್ದರೆ ಇಂದಿನಿಂದಲೇ ಈ ಏಳು ಆಹಾರಗಳ ಸೇವನೆಯನ್ನು ಬಿಡಿ... 

ವೆಜಿಟೇಬಲ್ ಆಯಿಲ್: ವೆಜಿಟೇಬಲ್ ಆಯಿಲ್, ಸೋಯಾಬಿನ್ ಎಣ್ಣೆ ಹೆಚ್ಚಾಗಿ ಸೇವಿಸಿದರೆ, ಸ್ಕಿನ್ ಸೆಲ್ ಡ್ಯಾಮೇಜ್ ಆಗುತ್ತದೆ. ಇದನ್ನು ಪ್ರತಿದಿನ ಸೇವನೆ ಮಾಡಿದರೆ ಬೇಗನೆ ವಯಸ್ಸಾದವರಂತೆ ಕಾಣಿಸುತ್ತೀರಿ. 

ಸಕ್ಕರೆ: ನೀವು ತಿನ್ನುವ ಕೆಚಪ್, ಸಾಫ್ಟ್ ಡ್ರಿಂಕ್ಸ್, ಸ್ವೀಟ್ಸ್, ಸಲಾಡ್ ಎಲ್ಲದರಲ್ಲೂ ಸಕ್ಕರೆ ಇರುತ್ತದೆ. ಆದುದರಿಂದ ಇದನ್ನು ಸಾಧ್ಯವಾದಷ್ಟು ಅವೈಯ್ಡ್ ಮಾಡಿದರೆ ಉತ್ತಮ. 

ಆಲ್ಕೋಹಾಲ್: ಲಿವರ್ ಹೆಲ್ತಿಯಾಗಿದ್ದರೆ ನಿಮ್ಮ ಸ್ಕಿನ್ ಸಹ ಹೆಲ್ತಿಯಾಗಿರುತ್ತದೆ. ಆದರೆ ನೀವು ಆಲ್ಕೋಹಾಲ್ ಸೇವನೆ ಮಾಡಿದರೆ ಲಿವರ್ ಡ್ಯಾಮೇಜ್ ಆಗುತ್ತದೆ. ಇದರಿಂದ ಸ್ಕಿನ್ ಮೇಲೂ ಪರಿಣಾಮ ಬೀರುತ್ತದೆ. ಅಂದ್ರೆ ಮೊಡವೆ, ನೆರಿಗೆ, ಮುಖ ಊದಿಕೊಳ್ಳುವುದು ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 

ಫಾಸ್ಟ್‌ಫುಡ್: ಫಾಸ್ಟ್‌ಫುಡ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಮತ್ತು ಸ್ಯಾಚುರೇಟೆಡ್ ಫ್ಯಾಟ್ ಇರುವುದರಿಂದ ಅತ್ಯಂತ ಅನಾರೋಗ್ಯಕರ ಆಹಾರವಾಗಿ ಪರಿಣಮಿಸಿದೆ. ಇದನ್ನು ಹೆಚ್ಚಾಗಿ ಸೇವಿಸಿದರೆ ಬೇಗನೆ ವಯಸ್ಸಾದವರಂತೆ ಕಾಣುತ್ತಾರೆ.

ಉಪ್ಪು: ಸ್ವಲ್ಪ ಉಪ್ಪು ಓಕೆ. ಆದರೆ ಅಗತ್ಯಕ್ಕಿಂತ ಹೆಚ್ಚು ಉಪ್ಪು ಸೇವಿಸಿದರೆ ಕಿಡ್ನಿ ಸಮಸ್ಯೆ, ಬ್ಲಡ್ ಪ್ರೆಷರ್ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಕಾಣಿಸಿಕೊಂಡರೆ ನೀವು ಫಿಟ್ ಆಗಿರಲು ಸಾಧ್ಯವಿಲ್ಲ. ಫಿಟ್ ಇಲ್ಲ ಅಂದ್ರೆ ಎಂಗ್ ಆಗಿ ಕಾಣುವುದಾದರೂ ಹೇಗೆ?

ಮಸಾಲೆಯುಕ್ತ ಆಹಾರ: ತುಂಬಾ ಸ್ಪೈಸಿ ಅಥವಾ ಖಾರವಾದ ಆಹಾರದ ಸೇವನೆ ತ್ವಚೆಯನ್ನು ಹಾನಿಗೊಳಿಸುತ್ತದೆ. ಇದರಿಂದ 20 ವರ್ಷದಲ್ಲಿಯೇ 30ರಂತೆ ಕಾಣುತ್ತೀರಿ.

loader