ನಾಲ್ಕನೇ ಹಂತದ ಕ್ಯಾನ್ಸರ್‌ನ್ನು ಹೊಡೆದೋಡಿಸಿದ 8 ವರ್ಷದ ಬಾಲಕನೊಬ್ಬ ಇದೀಗ 'ಸೂಪರ್ ಹೀರೋ' ಎಂದೇ ಫೇಮಸ್ ಆಗುತ್ತಿದ್ದಾನೆ. ಅತ್ಯಂತ ಅಪಾಯಕಾರಿ ಬ್ರೇನ್ ಟ್ಯೂಮರ್ ಕ್ಯಾಮರೂನ್ ಸ್ಕಾಟ್ ಎಂಬ ಬಾಲಕನ ಬೆನ್ನೆಲುಬಿನವರೆಗೂ ಹಬ್ಬಿಕೊಂಡಿತ್ತು. ಇದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕನೂ ಎದೆಗುಂದದೆ ಎಲ್ಲವನ್ನೂ ಧೈರ್ಯದಿಂದ ಎದುರಿಸಿದ್ದ. ಸದ್ಯ ಈತನ ಸಹನೆ ಹಾಗೂ ಧೈರ್ಯದ ಪ್ರತಿಫಲ ಎಂಬಂತೆ ಕ್ಯಾನ್ಸರ್ ಎಂಬ ಮಹಾಮಾರಿ ಮಾಯವಾಗಿದೆ.

ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳಿಗಾಗಿ ಸೇವೆ ಸಲ್ಲಿಸುತ್ತಿರುವ ಸೇಂಟ್ ಜೂಡ್ ಆಸ್ಪತ್ರೆಯಲ್ಲಿ 8 ವರ್ಷದ ಕ್ಯಾಮರೂನ್ ಸ್ಕಾಟ್ ಚಿಕಿತ್ಸೆ ಪಡೆಯುತ್ತಿದ್ದ. ಸದ್ಯ ಗುಣಮುಖನಾಗಿರುವ ಸ್ಕಾಟ್ ಹಾಗೂ ಆತನ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದು, ಆಸ್ಪತ್ರೆಯ  ಅಧಿಕೃತ ವೆಬ್‌ಸೈಟಿನಲ್ಲಿ ಬಾಲಕನ ನುಭವವನ್ನು ಹಂಚಿಕೊಳ್ಳಲಾಗಿದೆ. 

ನನಗೀಗ ಅದ್ಭುತವಾದ ಅನುಭವವಾಗುತ್ತಿದೆ. ಯಾಕೆಂದರೆ ನಾನು ಬಹುತೇಕ ಎಲ್ಲಾ ನೋವನ್ನೂ ತಿಂದಿದ್ದೇನೆ. ನನ್ನ ದೇಹದಿಂದ ನಾನು ಬೇರ್ಪಟ್ಟಿದ್ದೇನೋ ಎಂಬ ನುಭವ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ನನಗಾಗಿತ್ತು' ಎಂದಿದ್ದಾರೆ.

ಇನ್ನು ನಾಲ್ಕನೇ ಹಂತ ಕ್ಯಾನ್ಸರ್ ಎಂದರೆ ಸುಲಭದ ಮಾತಲ್ಲ. ಆರಂಭಿಕ ಹಂತದ ಕ್ಯಾನ್ಸರ್ ವಿರುದ್ಧ ಎದೆ ಗುಂದದೇ  ನಿಲ್ಲುವುದು ಕಷ್ಟವಿರುವಾಗ, ಈ ಪರುಟ್ಟ ಬಾಲಕ 4ನೇ ಹಂತ ಕ್ಯಾನ್ಸರ್ ನ್ನು ಹೊಡೆದೋಡಿಸಿರುವುದು ಅಸಾಮಾನ್ಯ ಎನ್ನಬಹುದು. ಚಿಕಿತ್ಸೆ ಬಳಿಕ ಬಾಲಕನ MRI ವರದಿ ವೀಕ್ಷಿಸಿದ ವೈದ್ಯರು ಕೂಡಾ ಒಂದು ಬಾರಿ ಅಚ್ಚರಿಗೊಳಗಾಗಿದ್ದಾರೆ. ಟ್ಯೂಮರ್ ನಾಪತ್ತೆಯಾಗಿದೆ ಎಂದು ನಂಬಲು ವೈದ್ಯರಿಗೇ ಕಷ್ಟವಾಗಿದೆ. ಹೀಗಾಗೇ ಮತ್ತೊಮ್ಮೆ MRI ಸ್ಕ್ಯಾನ್ ಮಾಡಿಸಿ ವರದಿಯನ್ನು ಮರು ಪರಿಶೀಲಿಸಿದ್ದಾರೆ.