Asianet Suvarna News Asianet Suvarna News

ಕೂದಲು ಹಾಗೂ ತ್ವಚೆಗೆ ಎಳನೀರ ಆರೈಕೆ!

ಎಳನೀರು ಹಲವಾರು ಆರೋಗ್ಯಕಾರಿ ಅಂಶಗಳನ್ನು ಹೊಂದಿದ ರಿಫ್ರೆಶಿಂಗ್ ಡ್ರಿಂಕ್. ಕೇವಲ ದೇಹಾರೋಗ್ಯವಲ್ಲದೆ, ತ್ವಚೆ ಹಾಗೂ ತಲೆಕೂದಲ ಆರೋಗ್ಯ ಹಾಗೂ ಸೌಂದರ್ಯ ಕಾಪಾಡುವಲ್ಲಿಯೂ ಎಳನೀರು ಒಂದು ಕೈ ಮೇಲೆಯೇ.
 

Amazing benefits of coconut water
Author
Bangalore, First Published Jul 9, 2019, 3:18 PM IST

ಎಳನೀರು ನೈಸರ್ಗಿಕವಾದ ಚೇತೋಹಾರಿ ಡ್ರಿಂಕ್. ಖನಿಜಾಂಶ, ಲವಣಾಂಶಗಳು ಅಧಿಕವಾಗಿರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದೇ ಕಾರಣಕ್ಕೆ ರೋಗಿಗಳಿಗೆ ಎಳನೀರು ನೀಡಲು ವೈದ್ಯರು ಶಿಫಾರಸು ಮಾಡುತ್ತಾರೆ. ಉರಿಮೂತ್ರ, ಡಿಹೈಡ್ರೇಶನ್, ವೀಕ್‌ನೆಸ್ ಎಲ್ಲವನ್ನೂ ತಕ್ಷಣದಲ್ಲಿ ತಗ್ಗಿಸುವ ಸಾಮರ್ಥ್ಯ ಹೊಂದಿದ ಎಳನೀರು ಕೂದಲು ಹಾಗೂ ಚರ್ಮದ ಪೋಷಣೆ ಮಾಡುವಲ್ಲಿಯೂ ಪಾತ್ರ ವಹಿಸುತ್ತದೆ. ಹೀಗಾಗಿ ಆಹಾರಗಳಲ್ಲಿ ಎಳನೀರನ್ನು ಹೆಚ್ಚು ಹೆಚ್ಚಾಗಿ ಬಳಸುವುದನ್ನು ರೂಢಿಸಿಕೊಳ್ಳಿ. ಫೇಶಿಯಲ್, ಹೇರ್‌ಪ್ಯಾಕ್‌ಗಳಲ್ಲಿಯೂ ಬಳಸಬಹುದು. ಎಳನೀರಿನಿಂದ ರುಚಿರುಚಿಯಾದ ಸ್ಮೂತಿಗಳನ್ನು ತಯಾರಿಸುವ ವಿಧಾನಗಳು ಇಲ್ಲಿವೆ. 

ಕೊಬ್ಬರಿ ಎಣ್ಣೆ ದೇಹಕ್ಕೆ ‘ವಿಷ’ವೇ ?

ಗ್ರೀನ್ ಕೋಕೋನಟ್ ಸ್ಮೂತಿ

1 ಲೋಟ ಎಳನೀರು ತೆಗೆದುಕೊಳ್ಳಿ. ಇದನ್ನು ಬ್ಲೆಂಡರ್‌ಗೆ ಹಾಕಿ 1 ಚಮಚ ಹುರಿದ ಫ್ಲ್ಯಾಕ್ಸ್ ಸೀಡ್ಸ್, 1 ಬೆಣ್ಣೆಹಣ್ಣಿನ ತಿರುಳು, 2 ಚಮಚ ಜೇನುತುಪ್ಪ, 7-8 ಕಿವಿ ಹಣ್ಣಿನ ಹೋಳುಗಳನ್ನು ಹಾಕಿ.

1 ನಿಮಿಷ ಚೆನ್ನಾಗಿ ಬ್ಲೆಂಡ್ ಮಾಡಿ. ಇದ್ನು ಗ್ಲಾಸ್‌ಗೆ ಬಗ್ಗಿಸಿ, ತೆಳುವಾದ ಕಾಯಿಯನ್ನು ಮೇಲೆ ಹರಡಿ. ವಾರಕ್ಕೆ ಮೂರುವ ದಿನಗಳಂತೆ ಈ ಸ್ಮೂತಿ ಕುಡಿಯಿರಿ.

ಕ್ಯಾಶ್ಯೂ ಕೋಕೋನಟ್ ಸ್ಮೂತಿ

ಅರ್ಧ ಕಪ್ ಗೋಡಂಬಿ ತೆಗೆದುಕೊಳ್ಳಿ. ಇದಕ್ಕೆ 2 ಚಮಚ ಎಳನೀರ ಕಾಯಿಯನ್ನು ಹಾಕಿ. ಬ್ಲೆಂಡರ್‌ನಲ್ಲಿ ನುಣುಪಾಗಿ ಪೇಸ್ಟ್ ಮಾಡಿ. ಅದಕ್ಕೆ 1 ಲೋಟ ಎಳನೀರು ಸೇರಿಸಿ. 1 ಬಾಳೆಹಣ್ಣು, ಅರ್ಧ ಲೋಟ ಬಾದಾಮಿ ಹಾಲು, 1 ಚಮಚ ಇನ್ಸ್ಟಂಟ್ ಕಾಫಿ ಸೇರಿಸಿ. ಮತ್ತೊಮ್ಮೆ ಹೈ ಸ್ಪೀಡ್‌ನಲ್ಲಿ ಬ್ಲೆಂಡ್ ಮಾಡಿ. ಗ್ಲಾಸ್‌ಗೆ ಬಗ್ಗಿಸಿ, ಮೇಲೆ ತೆಳುವಾದ ಎಳೆ ಕಾಯಿಯನ್ನು ಹಾಕಿ. ವಾರಕ್ಕೆ ಮೂರು ಬಾರಿಯಂತೆ ಮಾಡಿ ಸವಿಯಿರಿ.

Amazing benefits of coconut water

ಓಟ್ಸ್ ಕೋಕೋನಟ್ ಸ್ಮೂತಿ

ಒಂದು ಲೋಟ ಎಳನೀರನ್ನು ಬ್ಲೆಂಡರ್‌ಗೆ ಹಾಕಿ 1 ಚಮಚ ಹುರಿದ ಫ್ಲ್ಯಾಕ್ಸ್ ಬೀಜಗಳನ್ನು ಹಾಕಿ. ಇದಕ್ಕೆ ಅರ್ಧ ಕಪ್ ರೋಲ್ಡ್ ಓಟ್ಸ್ ಹಾಕಿ. 2 ಚಮಚ ಜೇನುತುಪ್ಪ ಸೇರಿಸಿ. ಅರ್ಧ ಲೋಟ ಎಳನೀರ ಕಾಯಿ, ನಾಲ್ಕು ಚಮಚ ವಾಲ್‌ನಟ್ ಪೌಡರ್ ಸೇರಿಸಿ. ಹೈ ಸ್ಪೀಡ್‌ನಲ್ಲಿ ಬ್ಲೆಂಡ್ ಮಾಡಿ. ಗ್ಲಾಸ್‌ಗೆ ಬಗ್ಗಿಸಿ ಸೇವಿಸಿ. 

ಮೆಂತ್ಯೆ ಹಾಗೂ ಎಳನೀರ ಪ್ಯಾಕ್

ಅರ್ಧ ಕಪ್ ಮೆಂತ್ಯೆಯನ್ನು ಹಾಲಿನಲ್ಲಿ ರಾತ್ರಿ ಪೂರ್ತಿ ನೆನೆಯಲು ಬಿಡಿ. ಬೆಳಗ್ಗೆ ಇವೆರಡನ್ನೂ ಸೇರಿಸಿ ಬ್ಲೆಂಡ್ ಮಾಡಿ. ಇದಕ್ಕೆ ಅರ್ಧ ಲೋಟ ಎಳನೀರು ಸೇರಿಸಿ. ಮತ್ತೆ ಬ್ಲೆಂಡ್ ಮಾಡಿ. ಕೂದಲನ್ನು ಒದ್ದೆ ಮಾಡಿ ಈ ಪೇಸ್ಟ್ ಹಚ್ಚಿಕೊಳ್ಳಿ. 30 ನಿಮಿಷಗಳ ಕಾಲ ತಲೆಯಲ್ಲಿರಲಿ. ಮೊದಲು ಬರಿಯ ನೀರಿನಲ್ಲಿ ತೊಳೆದು ತೆಗೆಯಿರಿ. ನಂತರ ನೀವು ಯಾವಾಗಲೂ ಬಳಸುವ ಶಾಂಪೂ ಹಾಗೂ ಕಂಡೀಶನರ್‌ನಿಂದ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ಪ್ಯಾಕ್ ಬಳಸಿ.

ಹಾರ್ಮೋನ್‌ ಬ್ಯಾಲೆನ್ಸ್‌ಗಿವು ಬೆಸ್ಟ್ ಫುಡ್

ಎಳನೀರು ಹಾಗೂ ನಿಂಬೆಹಣ್ಣು

1 ಲೋಟ ಎಳನೀರಿಗೆ 1 ಲಿಂಬೆಹಣ್ಣಿನ ರಸ ಹಿಂಡಿ. ಇದನ್ನು ಕೂದಲಿಗೆ ಹಾಕಿ ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತಲೆಸ್ನಾನ ಮಾಡಿ. ವಾರಕ್ಕೊಮ್ಮೆ ಈ ರೀತಿ ಮಾಡಿ.

ಇವು ಹೇಗೆ ಪ್ರಯೋಜನಕಾರಿ?

- ಎಳನೀರು ಉತ್ತಮ ನ್ಯೂಟ್ರಿಯೆಂಟ್ಸ್‌ನಿಂದ ತುಂಬಿದೆ. 1 ಲೋಟ  ಎಳನೀರಿನಲ್ಲಿ ಕಾರ್ಬೋಹೈಡ್ರೈಟ್ಸ್ ಬಹಳ ಕಡಿಮೆ ಇದ್ದು, 3 ಗ್ರಾಂನಷ್ಟು ಫೈಬರ್ ಇರುತ್ತದೆ. ಮ್ಯಾಂಗನೀಸ್, ಪೊಟ್ಯಾಶಿಯಂ, ಕ್ಯಾಲ್ಶಿಯಂನಂಥ ಮಿನರಲ್ಸ್‌ಗಳು ಹೇರಳವಾಗಿರುತ್ತವೆ. 

- ಎಳನೀರಿನಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ಕೂದಲು ಹಾಗೂ ತ್ವಚೆಯ ಆರೋಗ್ಯ ಕಾಪಾಡುತ್ತದೆ. 

- ಆ್ಯಂಟಿ ಆಕ್ಸಿಡೆಂಟ್ಸ್ ದೇಹಕ್ಕೆ ಬಹಳ ಅಗತ್ಯ. ಎಳನೀರಿನಲ್ಲಿ ಇವು ಹೇರಳವಾಗಿರುತ್ತವೆ. ಅವು ಚರ್ಮವನ್ನು ಕಾಂತಿಯುತವಾಗಿಸುವುದಷ್ಟೇ ಅಲ್ಲ, ಕ್ಯಾನ್ಸರ್ ವಿರುದ್ಧವೂ ರಕ್ಷಣೆ ಒದಗಿಸುತ್ತವೆ. 

- ಡಿಹೈಡ್ರೇಶನ್ ಹೋಗಿಸುವಲ್ಲಿ ಎಳನೀರು ಕ್ಷಣದಲ್ಲಿ ಮ್ಯಾಜಿಕ್ ಮಾಡುತ್ತದೆ. ಏಕೆಂದರೆ ಇದರಲ್ಲಿ ಮಿನರಲ್ಸ್ ಹಾಗೂ ಎಲೆಕ್ಟ್ರೋಲೈಟ್ಸ್ ಸಾಕಷ್ಟು ಪ್ರಮಾಣದಲ್ಲಿವೆ. ಹೀಗಾಗಿ, ತಕ್ಷಣಕ್ಕೆ ವೀಕ್‌ನೆಸ್ ಹೋಗಲಾಡಿಸುತ್ತದೆ.

- ಪ್ರತಿದಿನ ಎಳನೀರು ಸೇವಿಸುವುದರಿಂದ ರಕ್ತದೊತ್ತಡ ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ತೆಂಗು ಬೆಳೆಯಲು ವಾತಾವರಣ ಹೇಗಿರಬೇಕು?

- ಕಿಡ್ನಿ ಸ್ಟೋನ್ ತಡೆಯುವಲ್ಲಿ ಹಾಗೂ ಕಿಡ್ನಿ ಸ್ಟೋನ್ ಇದ್ದರೆ ಕರಗಿಸುವಲ್ಲಿ ಎಳನೀರು ಪ್ರಮುಖ ಪಾತ್ರ ವಹಿಸಬಹುದು. 

- ಕೊಲೆಸ್ಟೆರಾಲ್ ತಗ್ಗಿಸಬಲ್ಲ ಸಾಮರ್ಥ್ಯ ಇರುವುದರಿಂದ ಎಳನೀರು ಹೃದಯದ ಆರೋಗ್ಯವನ್ನು ಕೂಡಾ ಕಾಪಾಡುತ್ತದೆ. 

Follow Us:
Download App:
  • android
  • ios