ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಎಸಿ ಅಳವಡಿಕೆ ಮಾಡಿರುವುದು ನೌಕರರು ಅಥವಾ ಗ್ರಾಹಕರಿಗಾಗಿ ಅಲ್ಲ. ಯಂತ್ರಗಳು ಬಿಸಿಯಾಗಿ ಹಾಳಾಗಬಾರದು ಎನ್ನುವ ಕಾರಣಕ್ಕೆ ಅಳವಡಿಕೆ ಮಾಡಿರುತ್ತಾರೆ. ಎಟಿಎಂಗಳು 24/7 ಕಾರ್ಯನಿರ್ವಹಿಸುವುದರಿಂದ ಅವುಗಳನ್ನು ತಂಪಾಗಿಡಲು ಎಸಿ ಅಳವಡಿಸಲಾಗುತ್ತದೆ.
ಬೆಂಗಳೂರು (ಮಾ.03): ಸಾಮಾನ್ಯವಾಗಿ ಎಲ್ಲ ಬ್ಯಾಂಕ್‌ಗಳಲ್ಲಿ ಮತ್ತು ಎಟಿಎಂ ಯಂತ್ರಗಳನ್ನು ಇಟ್ಟಿರುವ ಕೋಣೆಗಳಲ್ಲಿ ಹವಾನಿಯಂತ್ರಕ ಯಂತ್ರಗಳನ್ನು (ಎಸಿ) ಅಳವಡಿಕ ಮಾಡಿರುತ್ತಾರೆ. ಇದು ನೌಕರ ಸ್ನೇಹಿ ಅಥವಾ ಜನಸ್ನೇಹಿಯಾಗಲಿ ಎಂದು ಎಸಿ ಅಳವಡಿಕೆ ಮಾಡುವುದೇ ಇಲ್ಲ. ಆದರೆ, ಎಸಿ ಅಳವಡಿಕೆ ಹಿಂದಿನ ಅಸಲಿ ಸತ್ಯ ಇಲ್ಲಿದೆ ನೋಡಿ..
ಈಗಾಗಲೇ ರಾಜ್ಯದಲ್ಲಿ ಬಿರು ಬೇಸಿಗೆ ಆರಂಭವಾಗಿದೆ. ಶಿವರಾತ್ರಿ ಮುಗಿದಾಕ್ಷಣ ದಿನನಿತ್ಯ ಸೂರ್ಯ ಕಾದ ಕೆಂಡವಾಗುತ್ತಿದ್ದಾನೆ. ಭೂಮಿ ಒಲೆ ಮೇಲೆ ಇಟ್ಟ ಬಾಣಲೆಯಂದತೆ ಕಾದಿರುತ್ತದೆ. ಹೀಗಿರುವಾಗ, ನಾವು ಓಡಾಡುವಾಗ ಬೇಸಿಗೆ ಬಿಸಿಲು ತಡೆಯಲಾಗದೇ ಪರದಾಡುತ್ತೇವೆ. ಮಧ್ಯಾಹ್ನ 1 ನಿಮಿಷವೂ ಚಪ್ಪಲಿ ಇಲ್ಲದೆ ನಡೆಯಲು ಸಾಧ್ಯವಿಲ್ಲ. ಒಂದು ವೇಳೆ ಹತ್ತಿರದ ಯಾವುದಾದರೂ ಎಟಿಎಂ ಯಂತ್ರದೊಳಗೆ ಹೋದರೆ ಅಲ್ಲಿ ಒಂದೇ ಸಮನೆ ತಣ್ಣಗೆ ಐಸ್‌ನ ಕೋಣೆಯಲ್ಲಿ ಬಿಟ್ಟಂತೆ ಆಗುತ್ತದೆ. ಈ ಎಸಿ ಕೋಣೆಯಲ್ಲಿಯೇ ಇದ್ದು ಬಿಡೋಣ ಎನಿಸುತ್ತಾದೆ. ಆದರೆ, ಅನಿವಾರ್ಯವಾಗಿ ಹಣ ಡ್ರಾ ಮಾಡಿದ ನಂತರ ಎಸಿ ಕೋಣೆಯಿಂದ ಹೊರಗೆ ಬಂದರೆ ನೀರಿನಿಂದ ಹೊರಗೆ ಹಾಕಿದ ಮೀನಿನಂತೆ ಒದ್ದಾಡಬೇಕು ಎನಿಸುವಷ್ಟು ಬಿಸಿಗಾಳಿ ತಾಕುತ್ತದೆ. ಆದರೂ, ಅನಿವಾರ್ಯವಾಗಿ ಹೊರಗೆ ಹೋಗುತ್ತೇವೆ.
ಇನ್ನು ಬೇಸಿಗೆ ಅವಧಿಯಲ್ಲಿ ಯಾವುದಾದರೂ ಬ್ಯಾಂಕ್‌ನೊಳಗೆ ಹೋದರೆ, ಅಲ್ಲಿಯ ತಂಪಾದ ಎಸಿ ವಾತಾವರಣದಿಂದ ಹೊರಗೆ ಬರಲು ಮನಸ್ಸಾಗುವುದೇ ಇಲ್ಲ. ಅಲ್ಲಿ ಕೆಲಸ ಮಾಡುವ ಬ್ಯಾಂಕ್ ನೌಕರರು ಎಷ್ಟು ಪುಣ್ಯವಂತರು ಎಂದುಕೊಂಡು ಮನಸ್ಸಲ್ಲಿಯೇ ಕೊರಗಿರುವುದೂ ಉಂಟು. ಆದರೆ, ಈ ಎಸಿಗಳನ್ನು ಇಲ್ಲಿನ ನೌಕರರ ಸಲುವಾಗಿಯೂ ಅಳವಡಿಕೆ ಮಾಡಿರುವುದಿಲ್ಲ. ಬ್ಯಾಂಕ್‌ನಲ್ಲಿ ಅಥವಾ ಎಟಿಎಂ ಯಂತ್ರದಲ್ಲಿ ಎಸಿ ಅಳವಡಿಕೆ ಮಾಡಿವುದು ಗ್ರಾಹಕರನ್ನು (ಅಂದರೆ ಜನರನ್ನು) ಆಕರ್ಷಣೆ ಮಾಡುವುದಕ್ಕೂ ಅಲ್ಲ. ಇಲ್ಲಿ ಅಳವಡಿಕೆ ಮಾಡಲಾಗಿರುವ ಯಂತ್ರಗಳು ನಿರಂತರವಾಗಿ 24/7 ಕಾರ್ಯ ನಿರ್ವಹಿಸುವ ಕಾರಣ ಈ ಯಂತ್ರಗಳು ಹೆಚ್ಚು ಬಿಸಿಯಾಗಿ ಹಾಳಾಗಬಾರದು ಎನ್ನುವ ಕಾರಣಕ್ಕೆ ಅಳವಡಿಕೆ ಮಾಡಿರುತ್ತಾರೆ. ಹೀಗಾಗಿ, ಬ್ಯಾಂಕ್‌ನವರಿಗೆ ಜನರಿಗೆ ಎಸಿ ಹಾಕಿ ಕೂರಿಸುವಷ್ಟು ಜನಸ್ನೇಹಿ ಉದ್ದೇಶ ಇಲ್ಲವೇ ಇಲ್ಲ ಎಂದು ಹೇಳಬಹುದು.
ಇದನ್ನೂ ಓದಿ: ಹಣಕಾಸು ವರ್ಷಾಂತ್ಯ: ಮಾರ್ಚ್‌ನಲ್ಲಿ ನಿಮ್ಮ ಪರ್ಸ್ ಮೇಲೆ ಪರಿಣಾಮ ಬೀರಲಿದೆ ಈ ಐದು ಬದಲಾವಣೆಗಳು!
ಇನ್ನು ಎಟಿಎಂಗಳಲ್ಲಿ ಎಸಿ ಹಾಕುವ ಮುಖ್ಯ ಉದ್ದೇಶ ಆಂತರಿಕ ಎಲೆಕ್ಟ್ರಾನಿಕ್ ಘಟಕಗಳನ್ನು ತಂಪಾಗಿಡಲು ಅಳವಡಿಸಲಾಗುತ್ತದೆ. ಏಕೆಂದರೆ ಎಟಿಎಂಗಳು ಅವುಗಳ ನಿರಂತರ ಕಾರ್ಯಾಚರಣೆಯಿಂದ ತುಂಬಾ ಬಿಸಿಯಾಗುತ್ತದೆ. ಯಂತ್ರಗಳು ಬಿಸಿಯಾದಲ್ಲಿ ಅಥವಾ ಏಕಾಏಕಿ ತಂಪಾದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸ್ಥಿರವಾದ ತಾಪಮಾನದಲ್ಲಿ ನಿರ್ವಹಿಸಬೇಕಾಗುತ್ತದೆ. ಯಂತ್ರವು ಅಧಿಕ ಬಿಸಿಯಾದರೆ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ದಿನದ 24/7 ಗಂಟೆಯೂ ಯಂತ್ರಗಳು ಕಾರ್ಯನಿರ್ವಹಿಸಲು ಎಸಿ ಅಳವಡಿಕೆ ಮಾಡಿರುತ್ತಾರೆ. ಇದನ್ನು ಗ್ರಾಹಕರ ಸೌಕರ್ಯಕ್ಕಾಗಿ ಅಳವಡಿಕೆ ಮಾಡುವುದಿಲ್ಲ. ಜನರ ಬಳಕೆ ದ್ವಿತೀಯ ಪ್ರಯೋಜನವಾಗಿದೆ.
ಇದನ್ನೂ ಓದಿ: 14 ಗಂಟೆ ಶವದ ಪಕ್ಕ ಕುಳಿತು ಪ್ರಯಾಣ: ದಂಪತಿಯ ದೂರಿಗೆ ಸಮರ್ಥನೆ ನೀಡಿದ ಏರ್‌ಲೈನ್ಸ್
ಬ್ಯಾಂಕ್ ಮತ್ತು ಎಟಿಎಂಗಳಲ್ಲಿನ ಎಸಿಗಳ ಅಳವಡಿಕೆ ಪ್ರಮುಖ ಕಾರಣ:
ಬ್ಯಾಂಕ್ ನೌಕರರು ಉಪಯೋಗಿಸುವ ಕಂಪ್ಯೂಟರ್‌ಳು ಹಾಗೂ ಎಟಿಎಂ ಯಂತ್ರಗಳು ನಿರಂತರವಾಗಿ ಚಾಲನೆಯಲ್ಲಿರುವಾಗ ಶಾಖವನ್ನು ಉತ್ಪಾದಿಸುವ ಅನೇಕ ವಿದ್ಯುತ್ ಘಟಕಗಳನ್ನು ಹೊಂದಿರುತ್ತವೆ. ಹೀಗಾಗಿ, ಈ ಯಂತ್ರಗಳ ಆಂತರಿಕ ಸುದೀರ್ಘವಾಗಿ, ಹಾಳಾಗದೇ ಕಾರ್ಯ ನಿರ್ವಹಿಸಲು ಎಸಿ ಸಹಾಯಕ ಆಗುತ್ತದೆ. ಎಟಿಎಂಗಳು 24/7 ಕಾರ್ಯಾಚರಣೆ ಮಾಡುವುದರಿಂದ ಅದನ್ನು ತಂಪಾಗಿಸುವಿಕೆ ಅಗತ್ಯವಾಗಿರುತ್ತದೆ. ಆದ್ದರಿಂದ ಎಟಿಎಂ ಕೋಣೆಯೊಳಗೆ ತಂಪಾದ ವಾತಾವರಣವು ಗ್ರಾಹಕರ ಅನುಭವವನ್ನು ಸುಧಾರಿಸುತ್ತದೆ.
