ಕ್ರಿಯೇಟಿವ್ ಆಗಿರಲು ಮಧ್ಯಾಹ್ನ 20 ನಿಮಿಷ ನಿದ್ರಿಸಿ...
After dinner rest a while, after supper walk a mile...ಎನ್ನುವ ಮಾತಿದೆ. ಆರೋಗ್ಯ, ಮನಸ್ಸು ಎಲ್ಲದರ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಈ ಅಭ್ಯಾಸ ಒಳ್ಳೆಯದು.
ಕಚೇರಿಯಲ್ಲಿ ಕೆಲಸ ಮಾಡುವವರು ಕ್ರಿಯೇಟಿವ್ ಆಗಿ, ಫಟಾ ಫಟ್ ಆಗಿ ಕೆಲಸ ಮಾಡಬೇಕೆಂದು ಬಯಸಿದರೆ ಅವರಿಗೆ 20 ನಿಮಿಷ ಕಿರು ನಿದ್ರಿಸಲು ಬಿಡಿ. ಯಾಕೆ ಅಂತೀರಾ? ಮುಂದೆ ಓದಿ...
ಕಚೇರಿಯಲ್ಲಿ ಉತ್ತಮವಾಗಿ , ಕ್ರಿಯೇಟಿವ್ ಐಡಿಯಾಗಳ ಜೊತೆಗೆ ಕೆಲಸ ಮಾಡಿದರೆ ಮಾತ್ರ ಬಿಜಿನೆಸ್ ಚೆನ್ನಾಗಿ ನಡೆಯುತ್ತದೆ. ಬಾಸ್ ಕೂಡ ತಮ್ಮ ಕೆಲಸಗಾರರು ಕ್ರಿಯೇಟಿವ್ ಆಗಿ ಕೆಲಸ ಮಾಡಬೇಕೆಂದು ಬಯಸುತ್ತಾರೆ. ನೀವು ನಿಮ್ಮ ಕೆಲಸಗಾರರು ಉತ್ತಮವಾಗಿ ಕೆಲಸ ಮಾಡಬೇಕೆಂದರೆ ಅವರಿಗೆ ಮಧ್ಯಾಹ್ನ ಇಪ್ಪತ್ತು ನಿಮಿಷ ಕಿರು ನಿದ್ರೆ ಅಗತ್ಯವೆಂದು ಅಧ್ಯಯನವೊಂದು ಹೇಳಿದೆ.
ಸ್ಲಿಮ್ ಆಗಬೇಕಾ? ನೆಲದ ಮೇಲೆ ಕೂತು ಊಟ ಮಾಡಿ...
ಅಧ್ಯಯನವೊಂದರಲ್ಲಿ ತಿಳಿಸಿದಂತೆ ಮಧ್ಯಾಹ್ನ 20 ನಿಮಿಷಗಳ ಕಾಲ ಕಿರು ನಿದ್ರೆ ಮಾಡಿದರೆ ಉದ್ಯೋಗಿಗಳು ಕ್ರಿಯೇಟಿವ್ ಆಗುತ್ತಾರೆ. ಸಮಸ್ಯೆಗಳನ್ನು ಪರಿಹರಿಸುವ ಅವರ ಸಾಮರ್ಥ್ಯವೂ ಹೆಚ್ಚುತ್ತದೆ. ಇಂಗ್ಲೆಂಡ್ ಯುನಿವರ್ಸಿಟಿ ಆಫ್ ಲೀಡ್ಸ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನ ಮಧ್ಯಾಹ್ನ 20 ನಿಮಿಷಗಳ ಕಾಲ ನಿದ್ರಿಸಿದರೆ ಡಯಾಬಿಟೀಸ್, ಹೃದಯದ ಸಮಸ್ಯೆ ಮತ್ತು ಡಿಪ್ರೆಶನ್‌ನಂಥ ಸಮಸ್ಯೆಗಳೂ ಪರಿಹಾರವಾಗಬಲ್ಲದು, ಎಂದಿದೆ.
ಕತ್ತು, ಬೆನ್ನು ನೋವಿಗೆ ಇಲ್ಲಿದೆ ಸೊಲ್ಯೂಷನ್
ಆಫೀಸ್‌ನಲ್ಲಿ ಪ್ರತಿಯೊಬ್ಬ ಬಾಸ್ ತನ್ನ ಉದ್ಯೋಗಿಗಳಿಗೆ ಕಡಿಮೆ ಎಂದರೆ 20 ನಿಮಿಷಗಳ ಕಾಲ ನಿದ್ರಿಸಲು ಅನುವು ಮಾಡಿಕೊಳ್ಳಬೇಕು. ಇದರಿಂದ ಉದ್ಯೋಗಿಗಳಲ್ಲಿ ಅಧಿಕ ಬದಲಾವಣೆ ಉಂಟಾಗುತ್ತದೆ. ಅಂದರೆ ಉದ್ಯೋಗಿಗಳು ಮಧ್ಯಾಹ್ನದ 2 ಗಂಟೆಯಿಂದ 4 ಗಂಟೆಯ ಮಧ್ಯೆ 20ನಿಮಿಷಗಳ ಕಾಲ ನಿದ್ರಿಸಿದರೆ ಅವರು ತುಂಬಾ ಕ್ರಿಯೇಟಿವ್ ಆಗಿ ಕಾರ್ಯನಿರ್ವಹಿಸುವುದಲ್ಲದೇ, ಅಲರ್ಟ್ ಆಗಿಯೂ ಇರುತ್ತಾರಂತೆ.